ಮೈಸೂರು: ಕೊರೊನಾದಿಂದ ಬಳಲುತ್ತಿರುವ ಕೇಂದ್ರ ಗೃಹಮಂತ್ರಿ ಅಮಿತ್ ಶಾ ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗುಣಮುಖರಾಗಲಿ ಎಂದು ಯುವಕನೋರ್ವ ಮಂಡಿ ಸೇವೆ ಮಾಡಿದ್ದಾನೆ.
ಅಮಿತ್ ಶಾ- ಬಿಎಸ್ವೈ ಚೇತರಿಕೆಗೆ ಪ್ರಾರ್ಥನೆ... ಮಂಡಿಯೂರಿ ಚಾಮುಂಡಿ ಬೆಟ್ಟ ಹತ್ತಿದ ಯುವಕ! - ಬಿಎಸ್ವೈ ಫ್ಯಾನ್
ಸಿಎಂ ಯಡಿಯೂರಪ್ಪ ಕಟ್ಟಾ ಅಭಿಮಾನಿಯಾಗಿರುವ ಕಾರ್ತಿಕ್ ವಿನೂತನ ಸೇವೆ ಮಾಡಿದ್ದಾನೆ. ಚಾಮುಂಡಿ ಬೆಟ್ಟದಲ್ಲಿ ಪಾದದಿಂದ ಒಂದು ಸಾವಿರ ಮೆಟ್ಟಿಲುಗಳನ್ನು ಮಂಡಿಯೂರಿ ಸಾಗುವ ಮೂಲಕ ಹತ್ತಿದ್ದಾನೆ.
ಅಮಿತ್ ಶಾ- ಬಿಎಸ್ವೈ ಚೇತರಿಕೆಗೆ ಮಂಡಿ ಸೇವೆ
ಸಿಎಂ ಯಡಿಯೂರಪ್ಪ ಕಟ್ಟಾ ಅಭಿಮಾನಿಯಾಗಿರುವ ಕಾರ್ತಿಕ್ ಈ ವಿನೂತನ ಸೇವೆ ಮಾಡಿದ್ದಾನೆ. ಚಾಮುಂಡಿ ಬೆಟ್ಟದಲ್ಲಿ ಪಾದದಿಂದ ಒಂದು ಸಾವಿರ ಮೆಟ್ಟಿಲುಗಳನ್ನು ಮಂಡಿ ಸೇವೆ ಮೂಲಕ ಹತ್ತಿದ್ದಾನೆ. ಅತ್ಯಂತ ಕಠಿಣವಾದರೂ ಮಂಡಿಯಿಂದಲೇ ಬೆಟ್ಟದ ಮೆಟ್ಟಿಲುಗಳ ಮೂಲಕ ಚಾಮುಂಡಿ ಸನ್ನಿಧಿ ತಲುಪಿದ ಯುವಕನು ಬಿಎಸ್ವೈ ಗುಣಮುಖರಾಗುವವರೆಗೂ ಪಾದರಕ್ಷೆ ಧರಿಸುವುದಿಲ್ಲ ಎಂದು ಹರಕೆ ಕಟ್ಟಿಕೊಂಡಿದ್ದಾನೆ.
ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿ ಎಂದು ಒಂದೂವರೆ ವರ್ಷ ಪಾದರಕ್ಷೆ ಧರಿಸದೇ ಕಾರ್ತಿಕ್ ತಿರುಗಾಡಿದ್ದ.
Last Updated : Aug 6, 2020, 3:01 PM IST