ಕರ್ನಾಟಕ

karnataka

ETV Bharat / state

ಅತ್ತಿಗೆ ಜೊತೆ ವಿವಾಹೇತರ ಸಂಬಂಧ: ಮೈಸೂರಲ್ಲಿ ತಮ್ಮನನ್ನೇ ಕೊಂದ ಅಣ್ಣ - extra marital relationship,

ಅತ್ತಿಗೆ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ ಎಂದು ಅಣ್ಣನೇ ತಮ್ಮನನ್ನು ಕೊಲೆಗೈದ ಘಟನೆ ಮೈಸೂರಿನಲ್ಲಿ ನಡೆದಿದೆ.

mysore
ಮಹದೇವಸ್ವಾಮಿ

By

Published : Sep 20, 2021, 11:40 AM IST

ಮೈಸೂರು:ಅತ್ತಿಗೆ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ ಎಂದು ಆರೋಪಿಸಿ ತಮ್ಮನನ್ನು ಉಸಿರುಗಟ್ಟಿಸಿ ಅಣ್ಣನೇ ಕೊಲೆ ಮಾಡಿರುವ ಘಟನೆ ಸರಗೂರು ಬಳಿಯ ಬಾಡಗ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಬಾಡಗ ಗ್ರಾಮದ ನಿವಾಸಿ ಗುರುಸ್ವಾಮಿ (30) ಹತ್ಯೆಯಾದ ವ್ಯಕ್ತಿ. ಕೊಲೆಗೈದ ಅಣ್ಣ ಮಹದೇವಸ್ವಾಮಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಗ್ರಾಮದ ಮಹಂತ ದೇವರು ಹಾಗೂ ರತ್ಮಮ್ಮ ದಂಪತಿಯ ಮೂವರು ಮಕ್ಕಳಲ್ಲಿ ಗುರುಸ್ವಾಮಿ ಮೂರನೇ ಮಗನಾಗಿದ್ದು, ಅತ್ತಿಗೆಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದ ಎನ್ನಲಾಗ್ತಿದೆ. ಅಷ್ಟೇ ಅಲ್ಲದೆ ಅಣ್ಣ ಮಹದೇವಸ್ವಾಮಿಯೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದನಂತೆ. ಈ ಜಗಳದಿಂದ ಬೇಸತ್ತಿದ್ದ ಮಹದೇವಸ್ವಾಮಿ ತಮ್ಮನನ್ನು ಕೊಲೆ ಮಾಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹತ್ಯೆಯಾದ ಗುರುಸ್ವಾಮಿ

ಪ್ರಕರಣ ವಿವರ: ಗುರುಸ್ವಾಮಿ ಎಂದಿನಂತೆ ಶುಕ್ರವಾರ ಬೆಳಗ್ಗೆ ತನ್ನ ಕುಟುಂಬದೊಂದಿಗೆ ಹತ್ತಿ ಬಿಡಿಸಲು ಜಮೀನಿಗೆ ತೆರಳಿದ್ದಾನೆ. ಈ ವೇಳೆ ಗುರುಸ್ವಾಮಿ ಒಂಟಿಯಾಗಿರುವುದನ್ನೇ ಕಾಯುತ್ತಿದ್ದ ಅಣ್ಣ ಮಹದೇವಸ್ವಾಮಿ ಸಂಜೆ ಸುಮಾರು 5 ಗಂಟೆಗೆ ಕುಟುಂಬಸ್ಥರು ಮನೆಗೆ ಹಿಂತಿರುಗಿದಾಗ ತಮ್ಮ ಒಬ್ಬನೇ ಜಮೀನಿನಲ್ಲಿರುವುದನ್ನು ಖಚಿತ ಪಡಿಸಿಕೊಂಡು ಬಳಿಕ ತಮ್ಮನೊಂದಿಗೆ ಜಗಳ ತೆಗಿದಿದ್ದಾನೆ. ಮಾತಿಗೆ ಮಾತು ಬೆಳೆದು ಬಳಿಕ ತಮ್ಮನ ಕಣ್ಣಿಗೆ ಖಾರದಪುಡಿ ಹಾಕಿ ಕುತ್ತಿಗೆಗೆ ಟವಲ್‍ನಿಂದ ಬಿಗಿದು ಹತ್ಯೆ ಮಾಡಿದ್ದಾನೆ. ರಾತ್ರಿಯಾದರು ಮನೆಗೆ ಬಾರದ ಗುರುಸ್ವಾಮಿಯನ್ನು ಕುಟುಂಬಸ್ಥರೊಂದಿಗೆ ಸೇರಿ ಹುಡುಕುವ ನಾಟಕವಾಡಿ, ತಮ್ಮನ ಶವ ಪತ್ತೆಯಾದಾಗ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿ ಸರಗೂರು ಠಾಣೆಯಲ್ಲಿ ದೂರನ್ನ ಸಹ ದಾಖಲು ಮಾಡಿದ್ದಾನೆ.

ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ ಸರಗೂರು ಠಾಣಾ ಪೊಲೀಸರು ವೃತ್ತ ನಿರೀಕ್ಷಕ ಆನಂದ್ ಹಾಗೂ ಪಿಎಸ್‍ಐ ಶ್ರವಣ ದಾಸ ರೆಡ್ಡಿ ನೇತೃತ್ವದಲ್ಲಿ ಸ್ವಯಂ ಪ್ರೇರಿತ ದೂರನ್ನು ಸಹ ದಾಖಲು ಮಾಡಿಕೊಂಡು ವಿಚಾರಣೆಯನ್ನು ಆರಂಭಿಸಿದ್ದಾರೆ. ಈ ವೇಳೆ ಮೃತ ಗುರುಸ್ವಾಮಿಯ ಅಣ್ಣ ಮಹದೇವಸ್ವಾಮಿಯ ಮೇಲೆ ಅನುಮಾನಗೊಂಡು ವಿಚಾರಣೆಗೆ ಒಳಪಡಿಸಿದಾಗ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಮಹದೇವಸ್ವಾಮಿ ಬಂಧಿಸಿ ನ್ಯಾಯಾಲಯಕ್ಕೆ ಸರಗೂರು ಠಾಣಾ ಪೊಲೀಸರು ಹಾಜರುಪಡಿಸಿದ್ದಾರೆ.

ABOUT THE AUTHOR

...view details