ಮೈಸೂರು : ಹೆಚ್ ಡಿ ಕೋಟೆ ತಾಲೂಕಿನ ಎನ್ ಬೇಗೂರು ಗ್ರಾಮದ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ವಿರುದ್ಧ ಅಕ್ರಮ ಆರೋಪ ಕೇಳಿ ಬಂದಿರುವ ಮಧ್ಯೆಯೇ ಮುಖ್ಯಕಾರ್ಯ ನಿರ್ವಹಣಾಧಿಕಾರಿಯಿಂದ ಎಲೆಕ್ಷನ್ ಘೋಷಣೆ ಆಗಿದೆ.
ಏ.3ರಂದು ಕೃಷಿಪತ್ತಿನ ಚುನಾವಣೆ ನಡೆಯಲಿದೆ. ಇರುವ 554 ಮಂದಿ ಸದಸ್ಯರಲ್ಲಿ 500 ಮಂದಿ ಸದಸ್ಯರನ್ನು ರಿಜೆಕ್ಟ್ ಮಾಡಿ, ಕೇವಲ 54 ಮಂದಿಗೆ ಮಾತ್ರ ಮತದಾನ ಮಾಡಲು ಅವಕಾಶ ನೀಡಲಾಗಿದೆ. ಸಭೆಗೆ ಗೈರು ಹಾಜರಿ ಆಗಿದ್ದಾರೆಂದು ತೋರಿಸಿ ಇನ್ನುಳಿದ ಸದಸ್ಯರಿಗೆ ಮತದಾನದಿಂದ ವಂಚಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಇದೀಗ ಏ.3ಕ್ಕೆ ಸಹಕಾರ ಸಂಘದ ನಿಯಮದಂತೆ ಚುನಾವಣೆ ಘೋಷಣೆ ಮಾಡಲಾಗಿದೆ. ರೈತರು, ಹಾಡಿ ನಿವಾಸಿಯ ಷೇರುದಾರರನ್ನ ಮತದಾನದಿಂದ ಮುಖ್ಯಾಧಿಕಾರಿ ಅನರ್ಹಗೊಳಿಸಿದ್ದಾರೆ ಎಂದು ಮತದಾನದಿಂದ ವಂಚಿತರಾದವರು ಆರೋಪಿಸಿದ್ದಾರೆ.
ಈ ಹಿನ್ನೆಲೆ ರೈತರು, ಷೇರುದಾರರು ಕೃಷಿಪತ್ತಿನ ಸಂಘದ ಕಚೇರಿಗೆ ಆಗಮಿಸಿ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಯಾವುದೇ ಸಭೆಗೆ ಹಾಜರಾಗಿಲ್ಲ ಎಂದು ಅಧಿಕಾರಿ, ಷೇರುದಾರರಿಗೆ ಹೇಳಿದ್ದಾರೆ. ಈ ವೇಳೆ ಸದಸ್ಯರು ನಾವು ಸಹಿ ಮಾಡಿರೋ ಪುಸ್ತಕ ಕೊಡಿ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ.
500 ಮಂದಿ ಸದಸ್ಯರು ರಿಜೆಕ್ಟ್ ಅಧಿಕಾರಿ ಪ್ರೇಮ್ ಕುಮಾರ್ ತಮ್ಮ ಆಪ್ತರು, ಸಂಬಂಧಿಕರನ್ನೇ ಚುನಾವಣೆಗೆ ನಿಲ್ಲಿಸುತ್ತಿದ್ದಾರೆ ಎಂದು ಷೇರುದಾರರು ಆರೋಪಿಸಿದ್ದಾರೆ. ಈ ಮೂಲಕ 5 ವರ್ಷ ಯಾವುದೇ ಆರೋಪ, ಅಕ್ರಮ ಪ್ರಶ್ನಿಸದಂತೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಅಂತಾ ರೈತರು ಅಸಮಾಧಾನ ಹೊರ ಹಾಕಿದ್ದು, ಚುನಾವಣೆ ನಿಲ್ಲಿಸಿ, ನ್ಯಾಯ ಸಿಗುವವರೆಗೂ ಚುನಾವಣೆ ನಡೆಸಬಾರದು ಎಂದು ರೈತರು ಹಾಗೂ ಷೇರುದಾರರು ಒತ್ತಾಯಿಸಿದ್ದಾರೆ.
500 ಮಂದಿ ಸದಸ್ಯರು ರಿಜೆಕ್ಟ್ 500 ಮಂದಿ ಸದಸ್ಯರು ರಿಜೆಕ್ಟ್