ಕರ್ನಾಟಕ

karnataka

ETV Bharat / state

ಬಾಲಕಿ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಗೆ 30 ವರ್ಷಗಳ ಕಾರಾಗೃಹ ಶಿಕ್ಷೆ, 1 ಲಕ್ಷ ರೂ. ದಂಡ - ETV Bharat kannada News

ಬಾಲಕಿ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಗೆ ಪೋಕ್ಸೋ ವಿಶೇಷ ನ್ಯಾಯಾಲಯವು ಕಠಿಣ ಕಾರಾಗೃಹ ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.

Imprisonment
ಕಾರಾಗೃಹ ಶಿಕ್ಷೆ

By

Published : Mar 29, 2023, 10:43 PM IST

ಮೈಸೂರು : ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿಗೆ 1 ಲಕ್ಷ ರೂ. ದಂಡ ಮತ್ತು 30 ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ನೀಡಿ ಪೋಕ್ಸೋ ವಿಶೇಷ ನ್ಯಾಯಾಲಯ ಆದೇಶ ಹೊರಡಿಸಿದೆ. ನಂಜನಗೂಡು ತಾಲೂಕಿನ ಆಕಳ ಗ್ರಾಮದ ಮಲ್ಲೇಶ್ ಶಿಕ್ಷೆಗೆ ಗುರಿಯಾದ ಆರೋಪಿಯಾಗಿದ್ದು, 2020 ರಲ್ಲಿ ಕೊರಾನಾ ಸೋಂಕು ಎಲ್ಲೆಡೆ ತನ್ನ ಪ್ರಭಾವ ಬೀರಿ ತಮ್ಮ ತಮ್ಮ ಮನೆಯಲ್ಲೇ ಲಾಕ್​ಡೌನ್​ ಆಗುವ ಸಂದರ್ಭ ಎದುರಾಗಿತ್ತು. ಈ ಸಂದರ್ಭದಲ್ಲಿ ಶಾಲೆಗೆ ರಜೆ ಇದ್ದ ಕಾರಣ, 9ನೇ ತರಗತಿ ಓದುತ್ತಿದ್ದ ತಂಗಿಯ ಮಗಳನ್ನು ಆರೋಪಿ ಮಲ್ಲೇಶ್‌ನ ತಂದೆ ತಮ್ಮ ಮನೆಗೆ ಕರೆದುಕೊಂಡು ಬಂದಿದ್ದರು.

2020 ಜೂನ್ ನಿಂದ ಡಿಸೆಂಬರ್‌ ತಿಂಗಳ ವರೆಗೂ ಬಾಲಕಿಯೂ ತನ್ನ ಮಾವನ ಮನೆಯಲ್ಲಿಯೇ ಇದ್ದಳು. ಬಾಲಕಿಯ ಮಾವನ ಮಗನಾದ ಆರೋಪಿ ಮಲ್ಲೇಶನು, ತನ್ನ ತಂದೆ ತಾಯಿ ಇಬ್ಬರು ಜಮೀನಿಗೆ ಕೆಲಸಕ್ಕೆ ಹೋದ ವೇಳೆ, ಮನೆಯಲ್ಲಿ ಬಾಲಕಿ ಇದ್ದಾಗ, ಆಕೆಯ ಮೇಲೆ 7 ರಿಂದ 8 ಬಾರಿ ಅತ್ಯಾಚಾರ ಎಸಗಿದ್ದಾನೆ. ಬಳಿಕ ಯಾರಿಗಾದರೂ ಈ ವಿಷಯ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆಯೊಡಿದ್ದ.

ಇದರಿಂದ ಭಯಗೊಂಡ ಬಾಲಕಿ ಯಾರಿಗೂ ಹೇಳಿಲ್ಲ. ಬಳಿಕ ಈ ದುಷ್ಕೃತ್ಯದಿಂದ ಬಾಲಕಿಯು ಗರ್ಭಿಣಿಯಾಗಿದ್ದು, 2021 ಮಾರ್ಚ್ 17ರಂದು ಬಾಲಕಿಯು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಈ ವಿಚಾರವು ಪ್ರಕರಣದ ತನಿಖೆಯಿಂದ ತಿಳಿದು ಬಂದಿದೆ. ಇನ್ನು ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿ, ಪೊಲೀಸರು ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಈ ಕುರಿತು ವಿಚಾರಣೆಯನ್ನು ನಡೆಸಿದ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಶ್ಯಾಮ ಖಮ್ರೋಜ್ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಲ್ಲೇಶನಿಗೆ ಪೋಕ್ಸೋ ಕಾಯಿದೆ ಅಡಿಯಲ್ಲಿ 30 ವರ್ಷಗಳ ಕಾಲ ಜೈಲು ಮತ್ತು 1 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ದಂಡದ ಹಣದಲ್ಲಿ ಬಾಲಕಿಗೆ 75 ಸಾವಿರ ರೂ. ಪರಿಹಾರವನ್ನು ನೀಡಲು ಮತ್ತು 5 ಲಕ್ಷ ರೂ. ಪರಿಹಾರವನ್ನು ಪಡೆಯಲು ಬಾಲಕಿ ಅರ್ಹಳು ಎಂದು ಆದೇಶಿಸಿದೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಕೆ.ಬಿ. ಜಯಂತಿ ಅವರು ವಾದ ಮಂಡಿಸಿದರು.

ಅತ್ಯಾಚಾರಕ್ಕೆ ಯತ್ನ, ಆರೋಪಿಗೆ ಧರ್ಮದೇಟು :ಬುದ್ಧಿ ಮಾಂದ್ಯ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸುತ್ತಿದ್ದಾಗ ಸಾರ್ವಜನಿಕರಿಗೆ ಸಿಕ್ಕ ಬಿದ್ದ ಆರೋಪಿಗೆ ಧರ್ಮದೇಟು ಕೊಟ್ಟಿರುವ ಘಟನೆ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ನಡೆದಿದೆ. ಮಹದೇವ (57) ಅತ್ಯಾಚಾರಕ್ಕೆ ಯತ್ನಿಸಿದ ಆರೋಪಿ. ಆರೋಪಿ ಮಹದೇವ ಬುದ್ಧಿಮಾಂದ್ಯ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರಕ್ಕೆ ಯತ್ನಿಸುವ ವೇಳೆ ಬಾಲಕಿ ಗಾಬರಿಗೊಂಡು ಕೂಗಿಕೊಂಡಿದ್ದಳು.

ಇನ್ನು ಕೂಗಾಟದ ಶಬ್ದ ಕೇಳಿ ಗ್ರಾಮಸ್ಥರು ಸ್ಥಳಕ್ಕೆ ತ​ಕ್ಷಣ ಆಗಮಿಸಿದ್ದು, ಆರೋಪಿಯನ್ನು ಹಿಡಿದು ಕಂಬಕ್ಕೆ ಕಟ್ಟಿ ಗ್ರಾಮಸ್ಥರು ಥಳಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಹುಣಸೂರು ಠಾಣಾ ಪೊಲೀಸರು ಆರೋಪಿ ಮಹದೇವನನ್ನು ವಶಕ್ಕೆ ಪಡೆದಿದ್ದು, ಜನರ ಹೊಡೆತಕ್ಕೆ ತೀವ್ರವಾಗಿ ಗಾಯಗೊಂಡು ಅಸ್ವಸ್ಥನಾಗಿದ್ದ ಆರೋಪಿಯನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ. ಹಾಗೂ ಹುಣಸೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂದ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ಬುದ್ಧಿಮಾಂದ್ಯ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ.. ಆರೋಪಿಗೆ ಗ್ರಾಮಸ್ಥರಿಂದ ಧರ್ಮದೇಟು

ABOUT THE AUTHOR

...view details