ಕರ್ನಾಟಕ

karnataka

ETV Bharat / state

ಕೆರೆಯಲ್ಲಿ ಈಜಲು ಹೋದ ಸಹೋದರರು ನೀರುಪಾಲು - mysore death news

ಗೋವಿಂದರಾಜು ವೆಂಕಟೇಶ್ ಎಂಬುವವರ ಪುತ್ರರಾಗಿರುವ ನೂತನ್ (12) ಮತ್ತು ರಾಹುಲ್ (13) ಕೆರೆಯಲ್ಲಿ ಈಜಲು ಹೋಗಿ ಸಾವನಪ್ಪಿರುವ ಘಟನೆ ನಡೆದಿದೆ.

2 young brothers died in mysore
ಕೆರೆಯಲ್ಲಿ ಈಜಲು ಹೋದ ಸಹೋದರರು ನೀರುಪಾಲು

By

Published : May 1, 2020, 4:56 PM IST

ಮೈಸೂರು: ಕೆರೆಯಲ್ಲಿ ಈಜಲು ಹೋಗಿ ಇಬ್ಬರು ಸಹೋದರರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕಡೆಮನುಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹುಣಸೂರು ತಾಲೂಕಿನ ಹನಗೋಡು ಹೋಬಳಿಯ ಕಡೆಮನುಗನಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಗೋವಿಂದರಾಜು ವೆಂಕಟೇಶ್ ಎಂಬುವವರ ಪುತ್ರರಾಗಿರುವ ನೂತನ್ (12) ಮತ್ತು ರಾಹುಲ್ (13) ಸಾವನಪ್ಪಿದ್ದಾರೆ.

ಮಧ್ಯಾಹ್ನ ಗ್ರಾಮದ ದೊಡ್ಡ ಕೆರೆಗೆ ಈಜಲು ಹೋಗಿದ್ದು, ಆಯತಪ್ಪಿ ಕೆರೆಯಲ್ಲಿ ಮುಳುಗಿದ್ದಾರೆ. ಗ್ರಾಮಸ್ಥರು ಬರುವಷ್ಟರಲ್ಲಿ ಕೆರೆಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ. ಗ್ರಾಮಸ್ಥರು ಇಬ್ಬರ ಶವವನ್ನು ಕೆರೆಯಿಂದ ಮೇಲೆ ಎತ್ತಿದ್ದು, ಕುಟುಂಬದವರ ಆಕ್ರಂದನ‌ ಮುಗಿಲು ಮುಟ್ಟಿತ್ತು.

ABOUT THE AUTHOR

...view details