ಕರ್ನಾಟಕ

karnataka

ETV Bharat / state

ಬೂಕನಕೆರೆಗೆ ಹೋಗಿ ಸಾಲಮನ್ನಾದ ಕೈಪಿಡಿ ಹಂಚುತ್ತೇನೆಂದು ಮಾತು ತಪ್ಪಿದ ಶಿವರಾಮೇಗೌಡ! - ಬೂಕನಕೆರೆಗೆ ಹೋಗಿ ಸಾಲ ಮನ್ನಾ

ಮಾಜಿ ಸಂಸದ ಶಿವರಾಮೇಗೌಡ ಮಂಡ್ಯಾದ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆಗೆ ಹೋಗಿ ಸಾಲ ಮನ್ನಾದ ಕೈಪಿಡಿಯನ್ನು ಫಲಾನುಭವಿಗಳಿಗೆ ಹಂಚುತ್ತೇನೆ ಎಂದು ಘೋಷಣೆ ಮಾಡಿ ಕೊನೆಗೂ ಅಲ್ಲಿಗೆ ಹೋಗದೆ, ಜನರ ನಂಬಿಕೆಯನ್ನು ಹುಸಿಗೊಳಿಸಿದ್ದಾರೆ.

ಮಾಜಿ ಸಂಸದ

By

Published : Oct 24, 2019, 5:14 AM IST

Updated : Oct 24, 2019, 6:59 AM IST

ಮಂಡ್ಯ:ಪತ್ರಕರ್ತರ ಭವನಕ್ಕೆ ವಿಧಾನಪರಿಷತ್ ಸದಸ್ಯರಾದ ಕೆ.ಟಿ. ಶ್ರೀಕಂಠೇಗೌಡ, ಅಪ್ಪಾಜಿಗೌಡರ ಜೊತೆ ಆಗಮಿಸಿದ ಮಾಜಿ ಸಂಸದ ಶಿವರಾಮೇಗೌಡ, ಸಾಲ ಮನ್ನಾ ವಿಚಾರವಾಗಿ ಪತ್ರಿಕಾಗೋಷ್ಠಿ ನಡೆಸಿದರು.

ಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದೇ ಬೂಕನಕೆರೆಗೆ ಹೋಗುತ್ತೇನೆ. ಅಲ್ಲಿನ ಫಲಾನುಭವಿಗಳಿಗೆ ಕೈಪಿಡಿ ನೀಡುತ್ತೇನೆ. ಎಷ್ಟು ಜನರಿಗೆ ಕುಮಾರಸ್ವಾಮಿ ಅವರಿಂದ ಅನುಕೂಲ ಆಗಿದೆ ಎಂಬುದನ್ನು ಹೇಳುತ್ತೇನೆ ಎಂದವರು, ಬೂಕನಕೆರೆಗೆ ಬರಲೇ ಇಲ್ಲ. ಇಲ್ಲಿ ಮತ್ತೊಂದು ವಿಚಾರ ಅಂದರೆ ಬೂಕನಕೆರೆ ಸಿಎಂ ಯಡಿಯೂರಪ್ಪ ಅವರ ತವರು ಗ್ರಾಮ, ಜೊತೆಗೆ ಕೆ.ಆರ್‌.ಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಸೇರುತ್ತದೆ. ಹೀಗಾಗಿ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷಕ್ಕೆ ಮತ ಸೆಳೆಯಲು ಹೋಗುತ್ತಾರೆ ಎಂಬುದು ಹುಸಿಯಾಯಿತು.

ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾಜಿ ಸಂಸದ ಶಿವರಾಮೇಗೌಡ

ಯಡಿಯೂರಪ್ಪ ತವರು ಗ್ರಾಮದಿಂದಲೇ ಕೈಪಿಡಿ ಹಂಚಬೇಕು ಎಂದುಕೊಂಡಿದ್ದ ಮಾಜಿ ಸಂಸದರಾದ ಶಿವರಾಮೇಗೌಡರು, ಯಾಕೆ ಹಿಂದೆ ಸರಿದರು ಎಂಬ ಅನುಮಾನ ಜೆಡಿಎಸ್ ವಲಯದಲ್ಲಿ ಬಂದಿದೆ. ಇದಕ್ಕೆ ಅವರೇ ಉತ್ತರ ನೀಡಬೇಕಾಗಿದೆ.

Last Updated : Oct 24, 2019, 6:59 AM IST

ABOUT THE AUTHOR

...view details