ಕರ್ನಾಟಕ

karnataka

ETV Bharat / state

ಗಂಡನ ಅಕ್ರಮ ಸಂಬಂಧ, ವರದಕ್ಷಿಣೆ ಕಿರುಕುಳ: ಮಗುವಿನೊಂದಿಗೆ ತಾಯಿ ಆತ್ಮಹತ್ಯೆ - Etv Bharat Kannada

ಗಂಡ ಅಕ್ರಮ ಸಂಬಂಧ ಹೊಂದಿದ್ದಾನೆಂದು ಮತ್ತು ಅತ್ತೆ, ಮಾವ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಡೆತ್​ನೋಟ್​​ ಬರೆದಿಟ್ಟು ಮಂಡ್ಯದಲ್ಲಿ ಮಗುವಿನೊಂದಿಗೆ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

woman commits suicide in mandya
ಆತ್ಮಹತ್ಯೆ ಮಾಡಿಕೊಂಡ ಮಹಿಳೆ

By

Published : Aug 2, 2022, 6:37 PM IST

ಮಂಡ್ಯ:ಕೌಟುಂಬಿಕ ಕಲಹದಿಂದಾಗಿ ಬೇಸತ್ತು ಮಗುವಿನೊಂದಿಗೆ ತಾಯಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಟ್ಟಣದ ಹೊರವಲಯ ಬಿಂಡಿಗನವಿಲೆ ರಸ್ತೆಯ ಕೆಂಚೇಗೌಡನಕೊಪ್ಪಲಿನಲ್ಲಿ ಸೋಮವಾರ ಸಂಜೆ ನಡೆದಿದೆ. ಜಿ.ಪಂ ಮಾಜಿ ಸದಸ್ಯೆ ಸುನಂದ ಹಾಗು ದೊರೆಸ್ವಾಮಿ ದಂಪತಿಯ ಪುತ್ರಿ ಬಿಂದು (25) ಹತ್ತು ತಿಂಗಳ ಮಗುವಿನೊಂದಿಗೆ ಮನೆಯಲ್ಲೇ ಸಾವಿಗೆ ಶರಣಾಗಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಬಿಂದು, ಪಟ್ಟಣದ ಕುಂಬಾರಬೀದಿಯ ನವೀನ್​ ಜತೆ ಕುಟುಂಬಸ್ಥರ ವಿರೋಧದ ನಡುವೆಯೂ ಪ್ರೀತಿಸಿ ಅಂತರ್‌ಜಾತಿ ವಿವಾಹ ಮಾಡಿಕೊಂಡಿದ್ದರು.

ನವೀನ್​ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧದಲ್ಲಿದ್ದಾರೆಂದು ತಿಳಿಸಿರುವ ಬಿಂದು, ಜಗಳವಾಡಿ ತವರು ಮನೆಗೆ ಬಂದು ನೆಲೆಸಿದ್ದರು. ಡೆಟ್​ನೋಟ್​ನಲ್ಲಿ, ತನ್ನ ಪತಿ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧದಲ್ಲಿದ್ದು, ಅತ್ತೆ ಮಾವ ಸೇರಿ ಮನೆಯವರು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಘಟನೆ ಸ್ಥಳಕ್ಕೆ ವೃತ್ತ ನಿರೀಕ್ಷಕ ಸುಧಾಕರ್​ ಆಗಮಿಸಿ, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದ್ದಾರೆ.

ಇದನ್ನೂ ಓದಿ:ಸುರತ್ಕಲ್ ಫಾಜಿಲ್​ ಕೊಲೆ ಪ್ರಕರಣ: ಏಳು ಮಂದಿ ಬಂಧನ

ABOUT THE AUTHOR

...view details