ಮಂಡ್ಯ: ಮಗನ ಗೆಲುವಿಗಾಗಿ ಮಾಜಿ ಸಿ.ಎಂ. ಕುಮಾರಸ್ವಾಮಿ ಜಿಲ್ಲೆಗೆ 8 ಸಾವಿರದ 700 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾಗಿ ಘೋಷಣೆ ಮಾಡಿದ್ದರು. ಆದರೆ, ಅದರಲ್ಲಿ ಶೇ10ರಷ್ಟು ಕೂಡ ನಮ್ಮ ಜಿಲ್ಲೆಗೆ ಅನುದಾನ ಬಿಡುಗಡೆ ಆಗಿಲ್ಲ ಎಂದು ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ಮಾಜಿ ಸಿಎಂ ವಿರುದ್ಧ ಚಾಟಿ ಬೀಸಿದ್ದಾರೆ.
ಮತ್ತೆ ಕುಮಾರಸ್ವಾಮಿಗೆ ಟಾಂಗ್ ಕೊಟ್ಟ ಅನರ್ಹ ಶಾಸಕ: ದೇವರ ಮೊರೆ ಹೋದ ನಾರಾಯಣಗೌಡ
ಮಗನ ಗೆಲುವಿಗಾಗಿ ಮಾಜಿ ಸಿ.ಎಂ. ಕುಮಾರಸ್ವಾಮಿ ಜಿಲ್ಲೆಗೆ 8 ಸಾವಿರದ 700 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾಗಿ ಘೋಷಣೆ ಮಾಡಿದ್ದರು. ಆದರೆ, ಅದರಲ್ಲಿ ಶೇ10 ರಷ್ಟು ಕೂಡ ನಮ್ಮ ಜಿಲ್ಲೆಗೆ ಅನುದಾನ ಬಿಡುಗಡೆ ಆಗಿಲ್ಲ ಎಂದು ಅನರ್ಹ ಶಾಸಕ ಕೆ.ಸಿ.ನಾರಾಯಣಗೌಡ ಮಾಜಿ ಸಿಎಂ ವಿರುದ್ಧ ಚಾಟಿ ಬೀಸಿದ್ದಾರೆ.
ಸುಪ್ರೀಂಕೋರ್ಟ್ ನಲ್ಲಿ ಅನರ್ಹ ಶಾಸಕರ ಪ್ರಕರಣ ವಿಚಾರಣೆಗೆ ಬರುವ ಹಿನ್ನೆಲೆಯಲ್ಲಿ ಇಂದು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಅನರ್ಹ ಶಾಸಕ ನಾರಾಯಣಗೌಡ ಗವಿರಂಗಪ್ಪನ ಮೊರೆ ಹೋಗಿ, ವಿಶೇಷ ಪೂಜೆ ಸಲ್ಲಿಸಿದ್ರು. ನಂತರ ದೇವರಿಗೆ ಎಡೆ ಇಟ್ಟು ಭಕ್ತಿಭಾವದಿಂದ ಗವಿರಂಗಪ್ಪನಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಅದು ಕೇವಲ ಅವರ ಮಗನ ಗೆಲುವಿಗಾಗಿ ಮಾಡಿದ ಗಿಮಿಕ್ ಅಷ್ಟೆ, ಅನುದಾನವನ್ನ ಕೇವಲ ಖಾಲಿ ಹಾಳೆಯ ಮೇಲೆ ಬಿಡುಗಡೆ ಮಾಡಿದ್ದಾರೆ ಎಂದರು.
ಮಂಡ್ಯದ ಮೈಶುಗರ್ ಫ್ಯಾಕ್ಟರಿ ವಿಚಾರದಲ್ಲಿ ರೈತರನ್ನು ನಂಬಿಸಿದ್ರು, ಅದೇನಾಯ್ತು ಅನ್ನೋದು ನಿಮಗೂ ಗೊತ್ತು. ಮಂಡ್ಯ ಜಿಲ್ಲೆಯವರು ಕುಮಾರಸ್ವಾಮಿ ಮತ್ತು ಕುಟುಂಬವನ್ನು ನಂಬಿದ್ದಾರೆ. ಅವ್ರ ಮತ್ತು ಅವರ ಕುಟುಂಬಕ್ಕೆ ಜಿಲ್ಲೆಯ ಜನ್ರು ರಾಜಕೀಯ ಶಕ್ತಿ ತುಂಬಿದ್ದಾರೆ. ಯಾಕೆ ನಮ್ಮ ಜಿಲ್ಲೆ ರೈತರ ನಂಬಿಕೆ ಮೇಲೆ ಹೊಡೆದು ಸುಳ್ಳು ಹೇಳ್ತಾರೆ. ಮೊದ್ಲು ಕುಮಾರಸ್ವಾಮಿಯವರು ಸುಳ್ಳು ಹೇಳೋದನ್ನು ಬಿಡಬೇಕು. ನಾನು ಅವ್ರಲ್ಲಿ ಸುಳ್ಳು ಹೇಳೋದನ್ನು ಬಿಡಿ ಅಂತಾ ಕೈ ಮುಗಿದು ಕೇಳ್ತೀನಿ ಎಂದರು.