ಮಂಡ್ಯ: ಪಾಂಡವಪುರ ಪೊಲೀಸರ ಕಾರು ನಾಲೆಗೆ ಬಿದ್ದು ಪಿಎಸ್ಐ ಸೇರಿ ಇಬ್ಬರಿಗೆ ಗಂಭೀರ ಗಾಯಗಳಾದ ಘಟನೆ ಮಳವಳ್ಳಿ ತಾಲೂಕಿನ ಕಾಳಕೆಂಪನದೊಡ್ಡಿ ಗ್ರಾಮದ ಬಳಿ ನಡೆಯಿತು. ಪಿಎಸ್ಐ ಪ್ರಭಾಕರ್ ಮತ್ತು ಕಾನ್ಸ್ಟೇಬಲ್ ಹೇಮಂತ್ ಗಾಯಗೊಂಡಿದ್ದಾರೆ.
ಮಂಡ್ಯ: ಕಾರು ನಾಲೆಗುರುಳಿ ಪಿಎಸ್‌ಐ, ಕಾನ್ಸ್‌ಟೇಬಲ್‌ಗೆ ಗಾಯ - accident in mandya
ಪಾಂಡವಪುರ ಪೊಲೀಸರು ಸಂಚರಿಸುತ್ತಿದ್ದ ಕಾರು ಮಳವಳ್ಳಿಯಿಂದ ಮದ್ದೂರು ಕಡೆಗೆ ತೆರಳುತ್ತಿದ್ದಾಗ ಕಾಳಕೆಂಪನದೊಡ್ಡಿ ಗ್ರಾಮದ ಬಳಿ ನಾಲೆಗುರುಳಿದೆ.
ಮಳವಳ್ಳಿ ಕಡೆಯಿಂದ ಮದ್ದೂರು ಕಡೆಗೆ ಕರ್ತವ್ಯ ಮುಗಿಸಿ ತೆರಳುತ್ತಿದ್ದಾಗ ಕಾಳಕೆಂಪನದೊಡ್ಡಿ ಗ್ರಾಮದ ಬಳಿ ಚಾಲಕನ ನಿಯಂತ್ರಣ ಕಳೆದುಕೊಂಡ ಕಾರು ನಾಲೆಗೆ ಉರುಳಿತು. ಕಾರಿನಲ್ಲಿದ್ದ ಪಿಎಸ್ಐ ಹಾಗೂ ಕಾನ್ಸ್ಟೇಬಲ್ ಗಂಭೀರವಾಗಿ ಗಾಯಗೊಂಡಿದ್ದು ಇಬ್ಬರನ್ನೂ ಮದ್ದೂರಿನ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಡ್ಯದ ಮೆಡಿಕಲ್ ಕಾಲೇಜಿಗೆ ಕರೆತರಲಾಗಿದೆ. ಮಳವಳ್ಳಿ ಗ್ರಾಮಾಂತರ ಠಾಣೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರಲ್ಲಿ 9,207 ರಸ್ತೆ ಗುಂಡಿ ಪತ್ತೆ.. ಮುಚ್ಚುವ ಕಾಮಗಾರಿ ಕೈಗೆತ್ತಿಗೊಂಡ ಬಿಬಿಎಂಪಿ