ಮಂಡ್ಯ:ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲುವಿಗೆ ಹರ್ಷಗೊಂಡಿರುವ ರೈತ ಸಂಘ ಎರಡು ಮಹತ್ವದ ಬೇಡಿಕೆ ಇಟ್ಟಿದೆ. ಮಿತ್ರ ಪಕ್ಷವಾಗಿ ಗೆಲುವಿಗೆ ರೈತ ಸಂಘ ಬೆಂಬಲವಾಗಿ ನಿಂತಿತ್ತು. ಈ ಹಿನ್ನೆಲೆಯಲ್ಲಿ ರೈತರ ಸಂಕಷ್ಟಕ್ಕೆ ಪರಿಹಾರ ನೀಡುವಂತೆ ಒತ್ತಾಯ ಮಾಡಿದೆ.
ಸಂಸದೆ ಸುಮಲತಾಗೆ ಎರಡು ಬೇಡಿಕೆ ಇಟ್ಟ ರೈತ ಸಂಘ - ಸುನೀತಾ ಪುಟ್ಟಣ್ಣಯ್ಯ
ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲುವಿಗೆ ಹರ್ಷಗೊಂಡಿರುವ ರೈತ ಸಂಘ ಎರಡು ಮಹತ್ವದ ಬೇಡಿಕೆ ಇಟ್ಟಿದೆ. ಮಿತ್ರ ಪಕ್ಷವಾಗಿ ಗೆಲುವಿಗೆ ರೈತ ಸಂಘ ಬೆಂಬಲವಾಗಿ ನಿಂತಿತ್ತು. ಈ ಹಿನ್ನೆಲೆಯಲ್ಲಿ ರೈತರ ಸಂಕಷ್ಟಕ್ಕೆ ಪರಿಹಾರ ನೀಡುವಂತೆ ಒತ್ತಾಯ ಮಾಡಿದೆ.
ಮುಖಂಡೆ, ದಿವಂಗತ ಕೆ.ಎಸ್.ಪುಟ್ಟಣ್ಣಯ್ಯ ಅವರ ಪತ್ನಿ ಸುನೀತಾ ಪುಟ್ಟಣ್ಣಯ್ಯ, ಮೇಲುಕೋಟೆ ವಿಧಾನಸಭಾ ಕ್ಷೇತ್ರದ ರೈತರು ಹಾಗೂ ಜನತೆಯ ಪರವಾಗಿ ಎರಡು ಪ್ರಮುಖ ಬೇಡಿಕೆಯನ್ನು ಇರಿಸಿದ್ದಾರೆ. ಮೊದಲ ಬೇಡಿಕೆಯಾಗಿ ಪಿಎಸ್‌ಎಸ್‌ಕೆ ಕಾರ್ಖಾನೆ ಆರಂಭದ ಬೇಡಿಕೆ ಇರಿಸಿದ್ದಾರೆ. ಕಬ್ಬು ಬೆಳೆಗಾರರ ರಕ್ಷಣೆಗೆ ಸುಮಲತಾ ಮುಂದಾಗಬೇಕು ಎಂದು ಒತ್ತಾಯ ಮಾಡಿದ್ದು, ಆ ಮೂಲಕ ಪಿಎಸ್ಎಸ್‌ಕೆ ಆರಂಭಿಸಿ ಎಂದಿದ್ದಾರೆ.
ಎರಡನೇ ಬೇಡಿಕೆ ಅಂದರೆ, ಬೇಬಿ ಬೆಟ್ಟದಲ್ಲಿ ಅಕ್ರಮವಾಗಿ ಮೆಗ್ಗರ್ ಬ್ಲಾಸ್ಟ್ ಮಾಡಿ ಕಲ್ಲು ಗಣಿಗಾರಿಕೆ ಮಾಡಲಾಗುತ್ತಿದೆ. ಇದರಿಂದ ಕೆಆರ್ಎಸ್ ಅಣೆಕಟ್ಟೆಗೆ ಧಕ್ಕೆಯಾಗಿದ್ದು, ಕೂಡಲೇ ಈ ಅಕ್ರಮದ ವಿರುದ್ಧ ಕ್ರಮಕ್ಕೆ ಒತ್ತಾಯ ಮಾಡಿದ್ದಾರೆ. ಎರಡು ಬೇಡಿಕೆಯ ಜೊತೆಗೆ ನಟರಾದ ದರ್ಶನ್ ಹಾಗೂ ಯಶ್‌ಗೂ ಶುಭಾಶಯ ತಿಳಿಸಿ, ದಸಂಸ, ಬಿಜೆಪಿ ಮುಖಂಡರಿಗೂ ಧನ್ಯವಾದ ಅರ್ಪಿಸಿದ್ದಾರೆ.