ಮಂಡ್ಯ:ಬೆಂಗಳೂರಿನ ಕೆಲಸಕ್ಕೆ ಗುಡ್ಬೈ ಹೇಳಿದ ಯುವಕನೊಬ್ಬ ತನ್ನೂರಿಗೆ ಮರಳಿ ಮೇಕೆ ಸಾಕಾಣಿಕೆಯಲ್ಲಿ ಕೈತುಂಬಾ ಸಂಪಾದನೆ ಮಾಡುವ ಮೂಲಕ ಬೇಸಾಯ, ಹೈನುಗಾರಿಕೆ ಎಂದರೆ ಮೂಗುಮುರಿಯುವ ಈ ಕಾಲದ ಯುವಕರಿಗೆ ಮಾದರಿಯಾಗಿ ನಿಂತಿದ್ದಾರೆ.
ಸಾಂಪ್ರದಾಯಿಕ ಮೇಕೆ ಸಾಕಾಣಿಕೆಯಲ್ಲೇ ಆದಾಯ ಕಂಡ ಯುವ ರೈತ
ಬೆಂಗಳೂರಿನಲ್ಲಿ ಕೆಲಸ ಬಿಟ್ಟು ಹಳ್ಳಿ ಕಡೆ ಬಂದು ನೆಮ್ಮದಿಯ ಬದುಕು ಕಟ್ಟಿಕೊಂಡ ಯುವ ರೈತ ಅಶೋಕ್. ಓದಿರೋದು ಪದವಿ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿಉದ್ಯೋಗ ಮಾಡಿಕೊಂಡಿದ್ದ ಈತ, ತಂದೆ ಕಾಲವಾದ ನಂತರ ತನ್ನೂರಿಗೆ ಬಂದು ಸೇರಿಕೊಂಡು ಸಾಧನೆ ಮಾಡಬೇಕು ಎಂಬ ಛಲದೊಂದಿಗೆ ಮೇಕೆ ಸಾಕಾಣಿಕೆ ಮಾಡಿ, ಈಗ ತಿಂಗಳಿಗೆ 40 ಸಾವಿರ ರೂಪಾಯಿ ಆದಾಯ ಗಳಿಸುತ್ತಿದ್ದಾನೆ.
ಸಾಂಪ್ರದಾಯಿಕ ಮೇಕೆ ಸಾಕಾಣಿಕೆಯಲ್ಲೇ ಆದಾಯ ಕಂಡ ಯುವ ರೈತ
ರಾಜಧಾನಿಯಲ್ಲಿ ಕೆಲಸ ಬಿಟ್ಟು ಹಳ್ಳಿ ಕಡೆ ಬಂದು ನೆಮ್ಮದಿಯ ಬದುಕು ಕಟ್ಟಿಕೊಂಡಿರುವ ಈತನ ಹೆಸರು ಅಶೋಕ್. ಓದಿರುವುದು ಪದವಿ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿಉದ್ಯೋಗ ಮಾಡಿಕೊಂಡಿದ್ದ ಈತ, ತಂದೆ ಕಾಲವಾದ ನಂತರ ತನ್ನೂರಿಗೆ ಬಂದು ಸೇರಿಕೊಂಡು ಸಾಧನೆ ಮಾಡಬೇಕು ಎಂಬ ಛಲದೊಂದಿಗೆ ಮೇಕೆ ಸಾಕಾಣಿಕೆ ಕೈಗೆತ್ತಿಕೊಂಡು, ಅದರಲ್ಲಿ ಯಶಸ್ವಿಯಾಗಿದ್ದಾನೆ. ಪ್ರಸ್ತುತ ಅಶೋಕ್ ತಿಂಗಳಿಗೆ 40 ಸಾವಿರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ.
ಬ್ಯಾಂಕಿನಿಂದಾಗಲೀ, ವ್ಯಕ್ತಿಗಳಿಂದಾಗಲೀ ಯಾವುದೇ ಸಾಲ ಮಾಡದೇ ಇಂದು ತಿಂಗಳಿಗೆ ಸರಾಸರಿ 40 ಸಾವಿರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ.ಆಧುನಿಕ ರೀತಿಯ ಯಾವುದೇ ಫಾರಂ ಮಾಡದೇ ಸಾಂಪ್ರದಾಯಿಕವಾಗಿ ಮೇಕೆಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ ಅಶೋಕ್. ಪಿತ್ರಾರ್ಜಿತವಾಗಿ ಬಂದ ಒಂದುವರೆ ಎಕರೆ ಜಮೀನಿನಲ್ಲಿ ಮೇಕೆಗೆ ಬೇಕಾದ ಮೇವನ್ನು ಬೆಳೆದು, ಮೇಕೆಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ. ಪ್ರತಿ ಎರಡು ತಿಂಗಳಿಗೊಮ್ಮೆ 3 ರಿಂದ 4 ಮೇಕೆಗಳನ್ನು ಮಾರಾಟ ಮಾಡುತ್ತಾರೆ. ಜೊತೆಗೆ ಮೇಕೆ ಗೊಬ್ಬರ ವ್ಯವಸಾಯಕ್ಕೆ ಉತ್ತಮವಾದ್ದರಿಂದ ಅದನ್ನೂ ಮಾರಾಟ ಮಾಡಿ ಆದಾಯ ಗಳಿಸುತ್ತಿದ್ದಾರೆ.