ಮಂಡ್ಯ: ರಾತ್ರಿ ಸ್ನೇಹಿತರ ಜೊತೆ ಪಾರ್ಟಿಗೆಂದು ಹೋಗಿದ್ದ ಯುವಕ ಶವವಾಗಿ ಪತ್ತೆಯಾಗಿರುವ ಘಟನೆ ಸಾತನೂರು ಗ್ರಾಮದ ಬಳಿ ನಡೆದಿದೆ.
ಪಾರ್ಟಿಗೆಂದು ಹೋಗಿದ್ದ ಯುವಕ ಶವವಾಗಿ ಪತ್ತೆ: ಕೊಲೆ ಶಂಕೆ - ಮಂಡ್ಯ ಸಾವು ಪ್ರಕರಣ
ರಾತ್ರಿ ಸ್ನೇಹಿತರ ಜೊತೆ ಪಾರ್ಟಿಗೆಂದು ಹೋಗಿದ್ದ ಯುವಕ ಮಹೇಶ್ (19) ಸದ್ಯ ಶವವಾಗಿ ಪತ್ತೆಯಾಗಿದ್ದಾನೆ. ಸ್ನೇಹಿತರ ಜೊತೆ ಗಲಾಟೆ ಆಗಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ.
ಪಾರ್ಟಿಗೆಂದು ಹೋಗಿದ್ದ ಯುವಕ ಶವವಾಗಿ ಪತ್ತೆ; ಕೊಲೆ ಶಂಕೆ
ಮಂಡ್ಯ ತಾಲೂಕಿನ ಸಾತನೂರಿನ ಮಹೇಶ್ (19) ಮೃತ ಯುವಕನಾಗಿದ್ದು, ಕೆರೆ ಸಮೀಪ ರಕ್ತಸಿಕ್ತವಾಗಿ ಆತನ ಶವ ಪತ್ತೆಯಾಗಿದೆ. ರಾತ್ರಿ ಸ್ನೇಹಿತರ ಜೊತೆ ಮದ್ಯ ಸೇವಿಸಿದ್ದ ಎನ್ನಲಾಗಿದ್ದು, ಸ್ನೇಹಿತರ ಜೊತೆ ಗಲಾಟೆ ಆಗಿ ಕೊಲೆ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸದ್ಯ ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.