ಮಂಡ್ಯ: ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಪುತ್ರಿಗೆ ಕಾನೂನು ಕಂಟಕ ಎದುರಾದ ಹಿನ್ನೆಲೆ, TAPCMS ಅಧ್ಯಕ್ಷ ದೂರವಾಣಿ ಕರೆ ಮಾಡಿ ಕಚೇರಿಯ ಮಹಿಳಾ ನಿರ್ದೇಶಕಿಗೆ ಬೆದರಿಕೆ ಹಾಕಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ.
ನಿಶಾ ಯೋಗೇಶ್ವರ್ ವಿರುದ್ಧ ಕಾನೂನು ಹೋರಾಟಕ್ಕೆ ನಿರ್ಧಾರ ಮಾಡಿದ್ದು, ಈ ನಿರ್ಧಾರವನ್ನು ಸಭೆಯು ಮಾಧ್ಯಮಗಳ ಮುಂದಿಟ್ಟಿದ್ದಕ್ಕೆ ನಿರ್ದೇಶಕಿಗೆ ಬೆದರಿಕೆ ಹಾಕಲಾಗಿದೆ ಎಂದು ಹೇಳಲಾಗ್ತಿದೆ.
ಮಂಡ್ಯ ಮದ್ದೂರು TAPCMS ಅಧ್ಯಕ್ಷ ಮಹದೇವು, ನಿರ್ದೇಶಕಿ ಕೆ.ಹೆಚ್. ಇಂದಿರಾ ಎಂಬುವವರಿಗೆ ಬೆದರಿಕೆ ಹಾಕಿದ್ದಾನೆ. ನಾನು ಸಂಸ್ಥೆ ಅಧ್ಯಕ್ಷನಾಗಿ, ಹಿರಿಯನಾಗಿ ಹೇಳ್ತಿದ್ದೀನಿ ಇದು ಒಳ್ಳೆಯ ಬೆಳವಣಿಗೆ ಅಲ್ಲ. ಇದರಿಂದ ಸಂಸ್ಥೆಗೂ, ನಮಗೂ ಧಕ್ಕೆ ಆಗಲಿದೆ. ನಮಗೆ ಧಕ್ಕೆ ಆದಾಗ ಸುಮ್ಮನೇ ಇರೋದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ:ನೆಲ ಬಾಡಿಗೆ ಮತ್ತು ಕಂದಾಯ ಪಾವತಿಸದ ಸಿ ಪಿ ಯೋಗೇಶ್ವರ್ ಪುತ್ರಿಗೆ ಕಾನೂನು ಕಂಟಕ
ಹೇಳ್ತಿದ್ದೀನಿ, ಮುಂದೆ ಆಗೋದನ್ನು ಕಾದು ನೋಡು. ನಾಳೆ ಈ ಸಂಬಂಧ ಸಭೆ ಕರೆಯುತ್ತೇನೆ. ಅಲ್ಲಿ ಮಾತನಾಡು, ಅದೇನು ಹೇಳ್ತೀಯಾ ಹೇಳು ಎಂದು ಅಧ್ಯಕ್ಷ ಮಹದೇವು ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ ಎನ್ನಲಾಗ್ತಿದೆ.