ಕರ್ನಾಟಕ

karnataka

ETV Bharat / state

ಚಲುವರಾಯಸ್ವಾಮಿ ಮಹಿಳೆ ಮುಂದೆ ಬಿಟ್ಟು ರಾಜಕಾರಣ ಮಾಡಿದ್ದಾರೆ: ಸುರೇಶ್ ಗೌಡ ವಾಗ್ದಾಳಿ

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಮೂಲ ಕಾಂಗ್ರೆಸಿಗರು ಮೈತ್ರಿ ಧರ್ಮ ಪಾಲಿಸಿದ್ದಾರೆ. ಆದ್ರೆ ಮಾಜಿ ಶಾಸಕ ಚಲುರಾಯಸ್ವಾಮಿ ಮಹಿಳೆಯನ್ನು ಮುಂದೆ ಬಿಟ್ಟು ಬ್ಲ್ಯಾಕ್​ಮೇಲ್​ ರಾಜಕಾರಣ ಮಾಡಿದ್ದಾರೆ. ಇಂತಹ ಬ್ಲ್ಯಾಕ್​ಮೇಲ್​ ರಾಜಕಾರಣಿ ಕಾಂಗ್ರೆಸ್ ಪಕ್ಷವನ್ನು ನಿರ್ನಾಮ ಮಾಡ್ತಿದಾರೆ ಮತ್ತು ಬಿಜೆಪಿ ಬೆಳೆಸುತ್ತಿದ್ದಾರೆ ಎಂದು ನಾಗಮಂಗಲ ಶಾಸಕ ಸುರೇಶ್​ ಗೌಡ ಆರೋಪಿಸಿದ್ದಾರೆ.

By

Published : May 2, 2019, 6:15 PM IST

Updated : May 2, 2019, 6:24 PM IST

ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ

ಮಂಡ್ಯ:ಓರ್ವ ಮಹಿಳೆಯನ್ನು ಮುಂದಿಟ್ಟುಕೊಂಡು ಚಲುವರಾಯಸ್ವಾಮಿ ರಾಜಕೀಯ ಮಾಡಿದ್ದಾರೆ. ಇವರ ಹಿಂದೆ ಯಾವುದೋ ಪ್ರಬಲ ರಾಜಕೀಯ ಶಕ್ತಿಯ ಕೈವಾಡವಿದೆ ಎಂದು ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ ಕಾಂಗ್ರೆಸ್ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು.

ನಾಗಮಂಗಲದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಈ ಬಾರಿ ಮಂಡ್ಯದಲ್ಲಿ ಮೂಲ‌ ಕಾಂಗ್ರೆಸಿಗರು ಮಾತ್ರ ಮೈತ್ರಿ ಧರ್ಮ ಪಾಲಿಸಿದ್ದಾರೆ. ಯಾರು ಇತ್ತೀಚೆಗೆ ಕಾಂಗ್ರೆಸ್​ಗೆ ವಲಸೆ ಹೋಗಿದ್ದಾರೊ ಅವರಲ್ಲಿ ಬಹುತೇಕ 80% ರಷ್ಟು ಜನರು ಮೈತ್ರಿ ಧರ್ಮ ಪಾಲಿಸಿಲ್ಲ ಎಂದು ಆರೋಪಿಸಿದರು.

ನಾಗಮಂಗಲ ಜೆಡಿಎಸ್ ಶಾಸಕ ಸುರೇಶ್ ಗೌಡ

ಕಾಂಗ್ರೆಸ್​ಗೆ ವಲಸೆ ಹೋದವರು ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ವಿರುದ್ಧ ಕೆಲಸ ಮಾಡಿದ್ದಾರೆ. ಮೂಲ ಕಾಂಗ್ರೆಸಿಗರಾದ ಆತ್ಮಾನಂದ, ಜಿಲ್ಲಾಧ್ಯಕ್ಷ ಗಂಗಾಧರ್ ಸೇರಿದಂತೆ ಹಲವರು ಶಕ್ತಿ ಮೀರಿ ಮೈತ್ರಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಿದ್ದಾರೆ. ಇತ್ತೀಚೆಗೆ ಹೋದವರು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತ ತಿಳಿಯದ ಬ್ಲ್ಯಾಕ್​ಮೇಲ್​​ ರಾಜಕಾರಣಿಗಳು ನಮ್ಮ ಪರ ಕೆಲಸ ಮಾಡಿಲ್ಲ ಎಂದು ಶಾಸಕ ಸುರೇಶ್​ ಗೌಡ ಗುಡುಗಿದರು.

ಚಲುವರಾಯಸ್ವಾಮಿ ಮೇಲೆ ಗೂಢಚಾರಿಕೆ ಮಾಡ್ತಿರೋ ಆರೋಪ ವಿಚಾರವಾಗಿ ಇವನ್ಯಾವ ದೊಡ್ಡ ವ್ಯಕ್ತಿಯೆಂದು ಇವನ‌ ಮೇಲೆ ಗೂಢಚಾರಿಕೆ ಮಾಡಲು ಹೋಗ್ತಾರೆ ಎಂದು ಶಾಸಕ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಚಲುವರಾಯಸ್ವಾಮಿ ಇಲ್ಲಸಲ್ಲದ ಆರೋಪ ಮಾಡೋದನ್ನು ಬಿಟ್ಟು ಬೇರೆ ಕೆಲ್ಸ ನೋಡಿಕೊಳ್ಳಲಿ. ಈ ಪರಿಸ್ಥಿತಿಯಲ್ಲಿ ಜೆಡಿಎಸ್​ಗೆ ಯಾರು ಅನಿವಾರ್ಯ ಅಲ್ಲ, ಅವರಿಗೆ ನಾವು ಅನಿವಾರ್ಯ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರಿಗೆ ಎಚ್ಚರಿಕೆ ನೀಡಿದರು.

ಯಾರು ಏನೇ ಮಾಡಿದ್ರು ಈ ಬಾರಿ ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಗೆಲುವು ನಿಶ್ಚಿತ. ಒಂದೂವರೆ ಲಕ್ಷ ಮತಗಳ ಅಂತರದಲ್ಲಿ ನಿಖಿಲ್ ಜಯ ಗಳಿಸಲಿದ್ದಾರೆ ಎಂದು ಶಾಸಕ ಸುರೇಶ್ ಗೌಡ ವಿಶ್ವಾಸ ವ್ಯಕ್ತಪಡಿಸಿದರು.

Last Updated : May 2, 2019, 6:24 PM IST

ABOUT THE AUTHOR

...view details