ಮಂಡ್ಯ:ಮಂಡ್ಯ ಜಿಲ್ಲಾ ಹಾಲು ಒಕ್ಕೂಟ(ಮನ್‌ಮುಲ್) ಹಗರಣದ ತನಿಖೆ ಸಿಐಡಿಗೆ ವಹಿಸಿ ರಾಜ್ಯ ಸರ್ಕಾರದ ಒಳಾಡಳಿತ ಇಲಾಖೆಯ ಉಪ ಕಾರ್ಯದರ್ಶಿ ಬಿ.ಎಸ್. ನಾಗರತ್ನಮ್ಮ ಅಧಿಕೃತ ಆದೇಶ ಹೊರಡಿಸಿದ್ದಾರೆ. ಮನ್‌ಮುಲ್‌ನಲ್ಲಿ ಹಾಲು ಸಾಗಣಿಕೆ ವಿಚಾರದಲ್ಲಿ ನಡೆದಿದ್ದ ಮೋಸ ಬೆಳಕಿಗೆ ತರಲು ಸರ್ಕಾರ ಈ ಆದೇಶ ಹೊರಡಿಸಿದೆ.
ಹಾಲಿಗೆ ನೀರು ಮಿಶ್ರಣ ಮಾಡಿ ಮೋಸ ಮಾಡುತ್ತಿದ್ದ ಪ್ರಕರಣ ಪತ್ತೆ ಹಚ್ಚಿದ ಆಡಳಿತ ಮಂಡಳಿ ಏ.29ರಂದು ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿತ್ತು. ಕೋಟ್ಯಂತರ ರೂಪಾಯಿ ಹಗರಣ ಹಿನ್ನೆಲೆ ಉನ್ನತ ಮಟ್ಟದ ತನಿಖೆಗೆ ಕೂಗು ಕೇಳಿಬಂದ ಹಿನ್ನೆಲೆ ಸಿಐಡಿಗೆ ವಹಿಸುವುದಾಗಿ ಜೂ.14ರಂದು ಮುಖ್ಯಮಂತ್ರಿ ಯಡಿಯೂರಪ್ಪ ಘೋಷಿಸಿದ್ದರು. ಇಂದು ಸಿಐಡಿಗೆ ವಹಿಸಿ ಅಧಿಕೃತ ಆದೇಶವನ್ನು ಸರ್ಕಾರ ಹೊರಡಿಸಿದೆ.