ಕರ್ನಾಟಕ

karnataka

ETV Bharat / state

ರಂಗನಾಥನನ್ನೂ ಎದ್ದು ಕೂರಿಸಿದ ಕೊರನಾ ಭೀತಿ... ಟಿಪ್ಪು ತವರಲ್ಲಿ ನೆಲ ಕಚ್ಚಿದ ಪ್ರವಾಸೋದ್ಯಮ - ಸಂಕಷ್ಟದಲ್ಲಿ ಶ್ರೀರಂಗಪಟ್ಟಣ ವ್ಯಾಪಾರಿಗಳು

ಮೈಸೂರು ಹೊರತುಪಡಿಸಿದರೆ ಮತ್ತೊಂದು ಪ್ರಸಿದ್ಧ ಪ್ರವಾಸಿ ತಾಣ ಶ್ರೀರಂಗಪಟ್ಟಣ. ಇಲ್ಲಿನ ಶ್ರೀರಂಗನಾಥ ಹಾಗೂ ನಿಮಿಷಾಂಭ ದೇವಿಯ ದರ್ಶನ ಮಾಡಿ ಪ್ರಮುಖ ಪ್ರವಾಸಿ ತಾಣಗಳನ್ನು ಪ್ರವಾಸಿಗರು ವೀಕ್ಷಣೆ ಮಾಡುತ್ತಾರೆ. ಆದರೆ ಕೊರೊನಾದಿಂದಾಗಿ ಭಕ್ತರಿಲ್ಲದೆ ದೇವಾಲಯಗಳು ಬಣಗುಡುತ್ತಿವೆ.

Srirangapattana traders Troubles
ಪ್ರವಾಸಿಗರಿಲ್ಲದೆ ಬಣಗುಡುತ್ತಿರುವ ಶ್ರೀರಂಗಪಟ್ಟಣ

By

Published : Jun 16, 2020, 8:26 PM IST

ಮಂಡ್ಯ: ಶ್ರೀರಂಗಪಟ್ಟಣದ ಆರ್ಥಿಕ ಚಟುವಟಿಕೆ ನಿಂತಿರುವುದು ಪ್ರವಾಸೋದ್ಯಮದಿಂದ. ಆದರೆ ಲಾಕ್​ಡೌನ್​ನಿಂದ ಇಲ್ಲಿನ ಆರ್ಥಿಕ ವ್ಯವಸ್ಥೆ ಅಸ್ತವ್ಯಸ್ತಗೊಂಡಿದ್ದು, ಇಲ್ಲಿನ ದೇವಾಲಯಗಳು ಭಕ್ತರಿಲ್ಲದೆ ಖಾಲಿಯಾಗಿವೆ.

ಪ್ರವಾಸಿಗರಿಲ್ಲದೆ ಬಣಗುಡುತ್ತಿರುವ ಶ್ರೀರಂಗಪಟ್ಟಣ: ಸಂಕಷ್ಟದಲ್ಲಿ ವ್ಯಾಪಾರಿಗಳು

ಮೈಸೂರು ಹೊರತು ಪಡಿಸಿದರೆ ಮತ್ತೊಂದು ಪ್ರಸಿದ್ಧ ಪ್ರವಾಸಿ ತಾಣ ಶ್ರೀರಂಗಪಟ್ಟಣ. ಇಲ್ಲಿನ ಶ್ರೀರಂಗನಾಥ ಹಾಗೂ ನಿಮಿಷಾಂಭ ದೇವಿಯ ದರ್ಶನ ಮಾಡಿ ಪ್ರಮುಖ ಪ್ರವಾಸಿ ತಾಣಗಳನ್ನು ಪ್ರವಾಸಿಗರು ವೀಕ್ಷಣೆ ಮಾಡುತ್ತಾರೆ. ಆದರೆ ಕೊರೊನಾದಿಂದಾಗಿ ಭಕ್ತರಿಲ್ಲದೆ ದೇವಾಲಯಗಳು ಬಣಗುಡುತ್ತಿವೆ. ಇದರಿಂದ ದೇವಾಲಯದ ಆದಾಯದ ಜೊತೆಗೆ ವ್ಯಾಪಾರವೂ ನೆಲ ಕಚ್ಚಿದ್ದು, ವ್ಯಾಪಾರಿಗಳು ಪ್ರವಾಸಿಗರ ನಿರೀಕ್ಷೆಯಲ್ಲಿದ್ದಾರೆ‌.

ಪ್ರವಾಸಿಗರಿಂದಲೇ ಆರ್ಥಿಕ ಚಟುವಟಿಕೆ ನಡೆಯುತ್ತಿದ್ದರಿಂದ ಎಷ್ಟೋ ವ್ಯಾಪಾರಿಗಳು ಜೀವನ ಸಾಗಿಸುತ್ತಿದ್ದರು. ಆದರೆ ಸದ್ಯ ದೇವಾಲಯಗಳಲ್ಲಿ ಭಕ್ತರು ಹಾಗೂ ಪ್ರವಾಸಿ ಕೇಂದ್ರಗಳಲ್ಲಿ ಪ್ರವಾಸಿಗರಿಲ್ಲದೇ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.

ABOUT THE AUTHOR

...view details