ಕರ್ನಾಟಕ

karnataka

ETV Bharat / state

ಶ್ರೀರಂಗಪಟ್ಟಣ: ಆಲಿಕಲ್ಲು ಮಳೆಗೆ ಧರೆಗುರುಳಿದ ಮರ.. ನೂರಕ್ಕೂ ಹೆಚ್ಚು ಗಿಳಿಗಳ ಸಾವು

ಶುಕ್ರವಾರ ರಾತ್ರಿ ಸುರಿದ ಬಿರುಗಾಳಿ ಶ್ರೀರಂಗಪಟ್ಟಣದ ಕೆನರಾ ಬ್ಯಾಂಕ್ ಮುಂಭಾಗದಲ್ಲಿದ್ದ ಮರ ಬುಡ ಸಮೇತವಾಗಿ ಧರೆಗುರುಳಿದೆ. ಅದರಲ್ಲಿ ವಾಸವಾಗಿದ್ದ ನೂರಾರು ಗಿಳಿಗಳು ಮೃತಪಟ್ಟಿವೆ. ಗ್ರಾಮಸ್ಥರು ಸಾಮೂಹಿಕವಾಗಿ ವಿಧಿ ವಿಧಾನದಂತೆ ಅಂತ್ಯಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ.

More than a hundred parrots die
ಆಲಿಕಲ್ಲು ಮಳೆಗೆ ನೂರಕ್ಕೂ ಹೆಚ್ಚು ಗಿಳಿಗಳ ಸಾವು

By

Published : Apr 30, 2022, 3:47 PM IST

ಮಂಡ್ಯ:ಶ್ರೀರಂಗಪಟ್ಟಣದ ಸುತ್ತಮುತ್ತ ಶುಕ್ರವಾರ ರಾತ್ರಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದೆ. ರಾತ್ರಿ ಸುರಿದ ಮಳೆಗೆ ಮರದಲ್ಲಿ ವಾಸವಿದ್ದ ನೂರಾರು ಗಿಳಿಗಳು ಮೃತ ಪಟ್ಟ ಘಟನೆ ನಡೆದಿದೆ. ಸ್ಥಳೀಯರು ಗಿಳಿಗಳ ಅಂತ್ಯಕ್ರಿಯೆ ಮಾಡಿ ಮಾನವೀಯತೆ ಮೆರೆದಿದ್ದಾರೆ.

ರಾತ್ರಿಯ ಮಳೆಗೆ ಶ್ರೀರಂಗಪಟ್ಟಣದ ಕೆನರಾ ಬ್ಯಾಂಕ್ ಮುಂಭಾಗದಲ್ಲಿದ್ದ ಬೃಹತ್​ ಮರ ಧರೆಗುರುಳಿದೆ. ಮರ ಬುಡ ಸಹಿತ ಕೆಳಗೆ ಬಿದ್ದ ಪರಿಣಾಮ ಹಲವು ಗಿಳಿಗಳು ಮತ್ತು ಮರಿಗಳು ಮೃತಪಟ್ಟರೆ, ಉಳಿದವು ಆಲಿಕಲ್ಲುಗಳ ಪೆಟ್ಟು ತಾಳಲಾರದೆ ಮೃತಪಟ್ಟಿವೆ.

ಆಲಿಕಲ್ಲು ಮಳೆಗೆ ನೂರಕ್ಕೂ ಹೆಚ್ಚು ಗಿಳಿಗಳ ಸಾವು

ನೂರಾರು ಗಿಳಿಗಳ ಸಾವು ಕಂಡು ಪಟ್ಟಣದ ಜನರು‌ ಕಣ್ಣೀರು ಹಾಕಿ ಮರುಕ ವ್ಯಕ್ತಪಡಿಸಿದರು. ಮೃತ ಗಿಳಿಗಳನ್ನು ಗ್ರಾಮಸ್ಥರು ಸಾಮೂಹಿಕವಾಗಿ ವಿಧಿ ವಿಧಾನದಂತೆ ಅಂತ್ಯಸಂಸ್ಕಾರ ಮಾಡಿದರು.

ಇದನ್ನೂ ಓದಿ:ಹೃದಯಾಘಾತದಿಂದ ಕೊಳದ ಮಠದ ಶಾಂತವೀರ ಸ್ವಾಮೀಜಿ ಲಿಂಗೈಕ್ಯ

ABOUT THE AUTHOR

...view details