ಕರ್ನಾಟಕ

karnataka

ETV Bharat / state

ಸ್ನೇಹಿತರ ಪಾಲಿನ ಗುರುವಾಗಿದ್ದ ಮಂಡ್ಯದ ಹುತಾತ್ಮ ಯೋಧ - ತರಬೇತಿ

ತರಬೇತಿ ವೇಳೆಯಲ್ಲಿ ಎಲ್ಲಾ ಪಟ್ಟುಗಳನ್ನು ಮೊದಲು ಮುಗಿಸುತ್ತಿದ್ದ. ಎಲ್ಲರನ್ನೂ ಮಂಡ್ಯ ಭಾಷೆಯಲ್ಲೇ ಮಾತನಾಡಿಸುತ್ತಿದ್ದ. ಹಾಗಾಗಿ ಎಲ್ಲರ ಅಚ್ಚುಮೆಚ್ಚಿನ ಗೆಳೆಯನಾಗಿ, 'ಗುರು'ವಾಗಿದ್ದ ಎಂಬ ಮಾತನ್ನು ಅವರ ಸ್ನೇಹಿತನೋರ್ವ ಈಟಿವಿ ಭಾರತ್ ಜೊತೆ ಯೋಧ ಗುರು ಕುರಿತು ಮಾತನಾಡಿದ್ದಾರೆ.

ಯೋಧ ಗುರು ಸ್ನೇಹಿತ

By

Published : Feb 15, 2019, 11:32 AM IST

ಮಂಡ್ಯ: ಹಿಡಿದ ಕೆಲಸವನ್ನು ಬಿಡದ ಹಠವಾದಿ. ತರಬೇತಿ ಸಮಯದಲ್ಲಿ ಮೊದಲ ಸ್ಥಾನದಲ್ಲೇ ಬರುತ್ತಿದ್ದ ಗುರು, ಸ್ನೇಹಿತರ ಪಾಲಿನ ಗುರುವಾಗಿಯೇ ಗುರುತಿಸಿಕೊಂಡಿದ್ದರು.

ಹೌದು, ಈಮಾತು ಹೇಳಿದ್ದು ಬೇರೆ ಯಾರೂ ಅಲ್ಲ. ಗುರುವಿನ ಜೊತೆ ತರಬೇತಿ ಪಡೆದ ಮತ್ತೋರ್ವ ಯೋಧ ಮಹದೇವ್. ಮೈಸೂರು ಜಿಲ್ಲೆಯ ಮಹದೇವು ಸಿಆರ್‌ಪಿಎಫ್‌ಗೆ ಸೇರಿದಾಗ ಜೊತೆಗಾರನಾಗಿದ್ದು ಮಂಡ್ಯ ಜಿಲ್ಲೆಯ ಗುಡಿಗೆರೆ ಕಾಲೋನಿಯ ಗುರು.

ತರಬೇತಿ ವೇಳೆಯಲ್ಲಿ ಎಲ್ಲಾ ಪಟ್ಟುಗಳನ್ನು ಮೊದಲು ಮುಗಿಸುತ್ತಿದ್ದ. ಎಲ್ಲರನ್ನೂ ಮಂಡ್ಯ ಭಾಷೆಯಲ್ಲೇ ಮಾತನಾಡಿಸುತ್ತಿದ್ದ. ಹಾಗಾಗಿ ಎಲ್ಲರ ಅಚ್ಚುಮೆಚ್ಚಿನ ಗೆಳೆಯನಾಗಿ, ಗುರುವಾಗಿದ್ದ ಎಂಬ ಮಾತನ್ನು ಸ್ನೇಹಿತ ಮಹದೇವ್ ಈಟಿವಿ ಭಾರತ್ ಜೊತೆ ಮಾತನಾಡಿದರು.

ಯೋಧ ಗುರು ಸ್ನೇಹಿತ

ಇನ್ನು ಮುಂದೆ ಇಂತಹ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಒಂದು ಕಠಿಣವಾದ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ ಎಂಬುದು ಯೋಧ ಮಹದೇವ್​ ಅವರ ಮನವಿಯಾಗಿದೆ.

ABOUT THE AUTHOR

...view details