ಮಂಡ್ಯ: ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಜಿಲ್ಲಾ ಕುರುಬರ ಸಂಘ ಬೆಂಬಲ ವ್ಯಕ್ತಪಡಿಸಿದೆ. ಹೀಗಂತ ಕುರುಬರ ಸಂಘದ ಮುಖಂಡ ಬಸವೇಗೌಡ ಹಾಗೂ ಹುಚ್ಚೇಗೌಡ ಘೋಷಣೆ ಮಾಡಿದರು.
ನಿಖಿಲ್ಗೆ ಜಿಲ್ಲಾ ಕುರುಬರ ಸಂಘದಿಂದ ಬೆಂಬಲ ಘೋಷಣೆ - kannada newspaper
ನಿಖಿಲ್ ಗೆಲುವಿಗೆ ಶ್ರಮಿಸುವುದಾಗಿ,ಚುನಾವಣೆಯಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಅಭ್ಯರ್ಥಿ ಪರ ಪ್ರಚಾರದಲ್ಲೂ ತೊಡುಗುವುದಾಗಿ ಮಂಡ್ಯ ಜಿಲ್ಲಾ ಕುರುಬರ ಸಂಘ ತಿಳಿಸಿದೆ.
ಘೋಷಣೆ
ಮಾಧ್ಯಮಗಳ ಜೊತೆ ಮಾತನಾಡಿದ ನಾಗಮಂಗಲ ತಾಲೂಕು ಕುರುಬರ ಸಂಘದ ಅಧ್ಯಕ್ಷ ಮಂಜೇಗೌಡ, ಮೈತ್ರಿ ಸರ್ಕಾರದ ನಾಯಕರು ಹಾಗೂ ಹೈಕಮಾಂಡ್ ನಿರ್ಧಾರಕ್ಕೆ ತಾವು ಬದ್ಧ. ಚುನಾವಣೆಯಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುತ್ತೇವೆ. ಅಭ್ಯರ್ಥಿ ಪರ ಪ್ರಚಾರದಲ್ಲೂ ತೊಡುಗುತ್ತೇವೆ ಎಂದು ಹೇಳಿದ ಅವರು, ನಿಖಿಲ್ ಗೆಲುವಿಗೆ ಶ್ರಮಿಸೋದಾಗಿ ಹೇಳಿದರು.