ಕರ್ನಾಟಕ

karnataka

ETV Bharat / state

ಎರಡನೇ ದಿನಕ್ಕೆ ಕಾಲಿಟ್ಟ ಮಂಡ್ಯದ ಸ್ವಾಭಿಮಾನಿಗಳ ಉಪವಾಸ ಸತ್ಯಾಗ್ರಹ.‌‌..

ನಿಖಿಲ್ ಸ್ಪರ್ಧೆ ಹಾಗೂ ಸಚಿವ ರೇವಣ್ಣ ವಿರುದ್ಧ ನಡೆಯುತ್ತಿರುವ ಸ್ವಾಭಿಮಾನಕ್ಕಾಗಿ ಉಪವಾಸಕ್ಕೆ ನಗರದೆಲ್ಲೆಡೆಯಿಂದ ಬೆಂಬಲ ವ್ಯಕ್ತವಾಗಿದೆ. ಪ್ರತಿಭಟನಾಕಾರರನ್ನು ಸಮಾದಾನಪಡಿಸಲು ಸಚಿವ ಡಿಕೆಶಿ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.

ಸ್ವಾಭಿಮಾನಕ್ಕಾಗಿ ಉಪವಾಸ

By

Published : Mar 11, 2019, 3:19 PM IST

ಮಂಡ್ಯ: ಡಾ. ರವೀಂದ್ರ ನೇತೃತ್ವದಲ್ಲಿ ನಡೆಯುತ್ತಿರುವ ಸ್ವಾಭಿಮಾನಕ್ಕಾಗಿ ಉಪವಾಸ ಸತ್ಯಾಗ್ರಹ ಎರಡನೇ ದಿನಕ್ಕೆ ಕಾಲಿಟ್ಟಿದೆ. ಹೋರಾಟಕ್ಕೆ ಇನ್ನೂ ಹಲವು ಮುಖಂಡರು ಸಾಥ್ ನೀಡಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಸ್ಪರ್ಧೆ ಹಾಗೂ ಸಚಿವ ರೇವಣ್ಣ ವಿರುದ್ಧ ನಗರದ ಸರ್.ಎಂ.ವಿ ಪುತ್ಥಳಿ ಬಳಿ ನಡೆಯುತ್ತಿರುವ ಹೋರಾಟಕ್ಕೆ ಸಾರ್ವಜನಿಕರು, ಯುವಕರು ಹಾಗೂ ಹಲವಾರು ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸಚಿವ ರೇವಣ್ಣ ವಿರುದ್ಧ ಕಿಡಿಕಾರಿದ್ದಾರೆ.

ಸ್ವಾಭಿಮಾನಕ್ಕಾಗಿ ಉಪವಾಸ


ಡಿಕೆಶಿ ಸಂಧಾನಕ್ಕೆ ಯತ್ನ:

ನಿಖಿಲ್ ಸ್ಪರ್ಧೆ ಹಾಗೂ ಸಚಿವ ರೇವಣ್ಣ ವಿರುದ್ಧ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ನಿಲ್ಲಿಸಲು ಸಚಿವ ಡಿ.ಕೆ. ಶಿವಕುಮಾರ್ ಯತ್ನ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.

ಮೈಸೂರು ಮೂಲದ ಪ್ರಭಾವಿ ವ್ಯಕ್ತಿ ಮೂಲಕ ಸಂಧಾನ ಮಾಡಿ, ನಿರಸನ ಕೊನೆಗಾಣಿಸಲು ಯತ್ನಿಸಿದ್ದಾರೆ ಎಂದು ಹೇಳಲಾಗಿದೆ. ನಿರಸನದಿಂದ ನಿಖಿಲ್‌ ಸ್ಪರ್ಧೆಗೆ ಹಿನ್ನಡೆ ಉಂಟಾಗಬಹುದೆಂಬ ಕಾರಣದಿಂದ ಸಂಧಾನಕ್ಕೆ ಶಿವಕುಮಾರ್ ಮುಂದಾಗಿದ್ದಾರೆ.

ABOUT THE AUTHOR

...view details