ಕರ್ನಾಟಕ

karnataka

ETV Bharat / state

ರಮೇಶ್ ಬಾಬು ವಿರುದ್ದ ರವೀಂದ್ರ ಶ್ರೀಕಂಠಯ್ಯ ವಾಗ್ದಾಳಿ - ಕೈ ಅಭ್ಯರ್ಥಿ

ಕೊಡಿಯಾಲ ಗ್ರಾಮದಲ್ಲಿ ನಡೆದ ಅರಕೆರೆ ಹೋಬಳಿ ಮಟ್ಟದ ಜೆಡಿಎಸ್ ಸಭೆಯಲ್ಲಿ ರವೀಂದ್ರ ಶ್ರೀಕಂಠಯ್ಯ ಮಾತನಾಡಿದರು.

JDS MLA Ravindra Srikantaiah spoke.
ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿದರು.

By

Published : Apr 12, 2023, 10:34 PM IST

ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿದರು.

ಮಂಡ್ಯ:ಟಿಕೆಟ್ ಘೋಷಣೆ ಬೆನ್ನಲ್ಲೆ ಜೆಡಿಎಸ್ ಶಾಸಕ ರವೀಂದ್ರ ಶ್ರೀಕಂಠಯ್ಯ ಅಲರ್ಟ್​ ಆಗಿದ್ದು, ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಬೃಹತ್ ಬೀನ್ಸ್ ಹಾರ ಹಾಕಿ ಕೊಡಿಯಾಲ ಗ್ರಾಮಸ್ಥರು ಸ್ವಾಗತಿಸಿದರು. ಬಳಿಕ ಮಾತನಾಡಿ, ಸ್ವಾರ್ಥಕ್ಕಾಗಿ ರಾಜಕಾರಣ ಮಾಡಿ ಸಿಬಿಐ ಕೇಸ್​ ಫಿಟ್ ಮಾಡಿಸಿಕೊಂಡಿದ್ದಾರೆ ಎಂದು ಮಾಜಿ ಶಾಸಕ ರಮೇಶ್ ಬಾಬು ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ನಾವೆಲ್ಲರೂ ರೈತರು ರೈತಾಪಿ ವರ್ಗದಿಂದ ಬಂದವರು. ಯಾವ ಬೆಳೆ ಹಾಕಿದರೆ ಹೇಗೆ ಇಳುವರಿ ಬರ್ತದೆ, ಯಾವ ತಳಿ ನಾಟಿ ಮಾಡಿದರೆ, ಇಳುವರಿ ಹೆಚ್ಚು ಎನ್ನುವ ಲೆಕ್ಕದಲ್ಲಿ ಬೇಸಾಯ ಮಾಡ್ತೇವೆ. ಈಗ ಓಟು ಹಾಕುವ ಕಾಲ ಬಂದಿದೆ. ಇನ್ನೂ 30 ದಿನ ಚುನಾವಣೆಗೆ ಸಮಯವಿದೆ. ಓಟಿನ ನಾಟಿ ಮಾಡಬೇಕಾಗಿದೆ. ಗಟ್ಟಿ ತಳಿ ಇಳುವರಿ ಬರುವಂತ ತಳಿಯನ್ನು ನೀವೇ ನಾಟಿ ಮಾಡಿ ಎಂದು ಹೇಳಿದರು.

ಜೀವನವೆಲ್ಲಾ ಬರೀ ನಾಟಕ ಮಾಡ್ಕೊಂಡು ನೀವು ಕೊಟ್ಟ ಅಧಿಕಾರವನ್ನು ದುರುಪಯೋಗ ಮಾಡಿಕೊಂಡ್ರಿ. ಯೋಗ್ಯತೆ-ಅದೃಷ್ಟದ ಮೇಲೆ ಎರಡೂ ತರಹದ ಅಧಿಕಾರ ಸಿಗುತ್ತೆ. ಯೋಗ್ಯತೆ ಮೇಲೆ ಸಿಕ್ಕ ಅಧಿಕಾರದಲ್ಲಿ ನಾಲ್ಕುವರೆ ವರ್ಷದಲ್ಲಿ ಶ್ರೀರಂಗಪಟ್ಟಣದಲ್ಲಿ ಅಭಿವೃದ್ಧಿ ಅಂದ್ರೆ ಏನು ಅನ್ನುವುದನ್ನು ಮಾಡಿ ತೋರಿಸಿದ್ದೇನೆ ಎಂದು ರಮೇಶ್ ಬಾಬುಗೆ ಟಾಂಗ್​ ನೀಡಿದರು.

ಅದೃಷ್ಟದ ಮೇಲೆ ನಿಮಗೆ ಅಧಿಕಾರ ಸಿಕ್ಕಿತು. ಆದರೆ 35 ವರ್ಷ ಶ್ರೀರಂಗಪಟ್ಟಣ ಕ್ಷೇತ್ರದಲ್ಲಿ ಒಂದು ರಸ್ತೆ ಮಾಡಿಲ್ಲ. ಹೆಗಲ ಮೇಲೆ ಕೈ ಹಾಕುವುದು, ನಾಟಕ ಆಡುವುದು, ಕೆನ್ನೆ ಸವರುವುದು, ಎಲೆ ಮೇಲೆ ಅರ್ಧ ಬಿಟ್ಟು ಹೋಗುವುದು ಇಂಥ ರಾಜಕೀಯ ಮಾಡಿದಿರಿ. ಬರೀ ಮೋಸ ಮಾಡಿಕೊಂಡು ಕಾಲ ಕಳೆದಿರಿ. ರವೀಂದ್ರ ಶೀಕಂಠಯ್ಯ ಅಭಿವೃದ್ಧಿ ಮಾಡಿದ್ದನ್ನು ನಿಮಗೆ ಯಾಕೆ ಮಾಡಲಿಕ್ಕೆ ಆಗಲಿಲ್ಲ ಎಂದು ರಮೇಶ ಬಾಬುಗೆ ಪ್ರಶ್ನಿಸಿದರು.

ಬೆಂಗಳೂರು-ಮೈಸೂರಿನಲ್ಲಿ ಹತ್ತತ್ತು ಸೈಟ್ ಬರೆಸಿಕೊಳ್ಳೋಕಾ ಎಂಎಲ್ಎ ಆಗೋದು? ಇವತ್ತು ಸೈಟ್ ಬರೆಸಿಕೊಂಡಿದ್ದಕ್ಕೆ ಸಿಬಿಐನವರು ನಿಮ್ಮ ಮೇಲೆ ತನಿಖೆಗೆ ಕೇಸ್ ಫಿಟ್ ಮಾಡಿದ್ದಾರೆ. ಬರೀ ಸ್ವಾರ್ಥಕ್ಕಾಗಿ ರಾಜಕಾರಣ ಮಾಡಿ ಸಿಬಿಐ ಕೇಸ್ ಫಿಟ್ ಮಾಡ್ಕೊಂಡಿದ್ದೀರಿ. 420 ಕೇಸ್, ಇನ್ನೂ ಎಷ್ಟಿದೆ ನಿಮ್ಮ ಮೇಲೆ? ನನ್ನ ಮೇಲೆ ಒಂದು FIR ಇಲ್ಲ ಎಂದು ಕಿಡಿಕಾರಿದರು.

ಕೈ ಅಭ್ಯರ್ಥಿ ಇನ್ನೂ 8 ತಿಂಗಳಲ್ಲಿ ಜೈಲಿಗೆ ಹೋಗ್ತಾರೆ. ಬಡವರಿಗೆ ನ್ಯಾಯ ಕೊಡಿಸೋಕೆ ನಾನು ಶಾಸಕನಾಗಿದ್ದೇನೆ. ಮುಖ್ಯಮಂತ್ರಿ ಬಳಿ ಹಲ್ಲು ಗಿಂಚಿಕೊಂಡು ಸೈಟ್ ಬರೆಸಿಕೊಳ್ಳಕ್ಕಲ್ಲ. ಕಾಂಗ್ರೆಸ್ ಅಭ್ಯರ್ಥಿ ಲೋಕಾಯುಕ್ತಕ್ಕೆ ವರದಿ ಸಲ್ಲಿಸಿದ್ದಾರೆ. ನಿಮ್ಮ ಬಗ್ಗೆ ಜನರಿಗೆ ಗೊತ್ತಿದೆ. ಯಾವ ಯಾವ ನಾಟಕ ಮಾಡ್ತಿದ್ದಿರಿ ಅಂತಾ. ಸಾರ್ವಜನಿಕ ಹಣನ ನೀವು ಎಷ್ಟು ಲೂಟಿ ಮಾಡಿದ್ದೀರಿ ಎಂದು ಪ್ರಶ್ನಿಸಿದರು.

ಅಕ್ರಮವಾಗಿ ಲೂಟಿ ಮಾಡಿ ಸೈಟ್ ಮಾಡಿದ್ದೀರಿ. ನಿಮ್ಮನ್ನು ಇವತ್ತು ಸಿಬಿಐ ಹುಡುಕಾಡುತ್ತಿದೆ. ನೀವು ಮಾಡಿರೋ ಭ್ರಷ್ಟಾಚಾರಕ್ಕೆ ಇನ್ನೂ 8 ತಿಂಗಳಲ್ಲಿ ಜೈಲಿಗೆ ಹೋಗ್ತಿರಾ. ನೀವೆಲ್ಲಾ ಅದೃಷ್ಟದ ಮೇಲೆ ರಾಜಕೀಯ ಹಿಡಿದವರು. ನಾನು ಹೋರಾಟ ಮಾಡಿ ಯೋಗ್ಯತೆ ಮೇಲೆ ಅಧಿಕಾರಕ್ಕೆ ಬಂದೆ. ಜೆಡಿಎಸ್ ಕಾಂಗ್ರೆಸ್​ಗೆ ಮೋಸ ಮಾಡ್ತಿದ್ದಾರೆ. ಇವಾಗ ಕಣ್ಣೀರು ಹಾಕ್ತಾರೆ ಎಂದು ಆರೋಪಿಸಿದರು.

ಇದನ್ನೂಓದಿ:ಬಿಜೆಪಿಗೆ ರಾಜೀನಾಮೆ ಘೋಷಿಸಿದ ಮಾಜಿ‌ ಶಾಸಕ‌ ದೊಡ್ಡಪ್ಪಗೌಡ; ಜೆಡಿಎಸ್​ ಸೇರ್ಪಡೆ ಸಾಧ್ಯತೆ

ABOUT THE AUTHOR

...view details