ಕರ್ನಾಟಕ

karnataka

ETV Bharat / state

ನಮ್ಮ ಸಂಸದರೇ ಇಲ್ಲಿದ್ದಾರೆ. ಅವರ್ಯಾರು ಇಲ್ಲಿಗೆ ಬರೋಕೆ: ಸಿಂಹ - ಸುಮಲತಾ ಬೆಂಬಲಿಗರ ನಡುವೆ ವಾಗ್ವಾದ - prathap simha latest news

ಮದ್ದೂರು ತಾಲೂಕಿನ ಕೆ.ಕೋಡಿಹಳ್ಳಿ ಗ್ರಾಮದಲ್ಲಿ ಸಂಸದೆ ಸುಮಲತಾ ಬೆಂಬಲಿಗರು ಹಾಗೂ ಪ್ರತಾಪ್​ ಸಿಂಹ ಬೆಂಬಲಿಗರ ನಡುವೆ ವಾಗ್ವಾದ ನಡೆದಿದೆ.

Quarrel between a prathap simha and Sumalatha supporter
Quarrel between a prathap simha and Sumalatha supporter

By

Published : Aug 19, 2021, 4:56 PM IST

Updated : Aug 19, 2021, 5:31 PM IST

ಮಂಡ್ಯ: ಸಂಸದೆ ಸುಮಲತಾ ಬೆಂಬಲಿಗರು ಹಾಗೂ ಪ್ರತಾಪ್ ಸಿಂಹ ಬೆಂಬಲಿಗರ ನಡುವೆ ವಾಗ್ವಾದ ನಡೆಯುವ ಮೂಲಕ ಸಂಸದ ಪ್ರತಾಪ್ ಸಿಂಹ ಬರುವ ಮುನ್ನವೇ ಭಾರಿ ವಿಘ್ನ ಎದುರಾಗಿದೆ.

ಸಿಂಹ - ಸುಮಲತಾ ಬೆಂಬಲಿಗರ ನಡುವೆ ವಾಗ್ವಾದ

ಮದ್ದೂರು ತಾಲೂಕಿನ ಕೆ.ಕೋಡಿಹಳ್ಳಿ ಗ್ರಾಮದ ಶಿಂಷಾ ನದಿಗೆ ಸಂಪರ್ಕ ಸೇತುವೆ ನಿರ್ಮಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಯುತ್ತಿತ್ತು. ಈ ಸ್ಥಳಕ್ಕೆ ಇಂದು ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಹೆದ್ದಾರಿ ಕಾಮಗಾರಿ ವೀಕ್ಷಣೆ ಮಾಡಲಿದ್ದರು. ಈ ವೇಳೆ, ಪ್ರತಾಪ್ ಸಿಂಹ ವಿರುದ್ಧ ಪ್ರತಿಭಟನೆ ಮಾಡುವುದಾಗಿ ಬಂದ ಸಂಸದೆ ಸುಮಲತಾ ಬೆಂಬಲಿಗರು ಹಾಗೂ ಪ್ರತಾಪ್​ ಸಿಂಹ ಬೆಂಬಲಿಗರ ನಡುವೆ ವಾಗ್ವಾದ ಉಂಟಾಗಿದೆ.

ನಮ್ಮ ಸಂಸದರೇ ಇಲ್ಲಿ ಇದ್ದಾರೆ. ಅವರ್ಯಾರು ಇಲ್ಲಿಗೆ ಬರೋಕೆ ಎಂದು ಸುಮಲತಾ ಬೆಂಬಲಿಗರು ಪ್ರಶ್ನೆ ಮಾಡಿದರು. ಈ ವೇಳೆ, ಸ್ಥಳದಲ್ಲೇ ಎರಡೂ ಗುಂಪುಗಳ ನಡುವೆ ವಾಗ್ವಾದ ನಡೆಯಿತು. ಹೀಗಾಗಿ ಪೊಲೀಸರು ಎರಡು ಗುಂಪುಗಳನ್ನು ನಿಯಂತ್ರಿಸಲು ಹರಸಾಹಸ ಪಟ್ಟರು.

Last Updated : Aug 19, 2021, 5:31 PM IST

ABOUT THE AUTHOR

...view details