ಕರ್ನಾಟಕ

karnataka

ಇಂದು ಮಂಡ್ಯಕ್ಕೆ ಪ್ರಧಾನಿ ಮೋದಿ ಭೇಟಿ, ಕೇಸರಿ ಮಯವಾದ ಸಕ್ಕರೆ ನಾಡು

By

Published : Mar 11, 2023, 7:04 PM IST

Updated : Mar 12, 2023, 8:08 AM IST

ಮಂಡ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಲು ಬಿಜೆಪಿ ನಾಯಕರು ಸಜ್ಜು, ಕಾರ್ಯಕ್ರಮದಲ್ಲಿ ಯಾವುದೇ ವಿಘ್ನ ಎದುರಾಗದಂತೆ ಬಿಜೆಪಿ ಜಿಲ್ಲಾಧ್ಯಕ್ಷ ಸಿಪಿ ಉಮೇಶ್, ಬಿಜೆಪಿ ಟಿಕೆಟ್ ಆಕಾಂಕ್ಷಿ ಎಸ್.ಪಿ.ಸ್ವಾಮಿ ನೇತೃತ್ವದಲ್ಲಿ ಪೂಜೆ.

prime-minister-modi-will-visit-mandya-tomorrow
ನಾಳೆ ಮಂಡ್ಯಕ್ಕೆ ಪ್ರಧಾನಿ ಮೋದಿ ಭೇಟಿ, ಕೇಸರಿ ಮಯವಾದ ಸಕ್ಕರೆನಾಡು

ಮಂಡ್ಯಕ್ಕಿಂದು ಪ್ರಧಾನಿ ಮೋದಿ ಭೇಟಿ, ಕೇಸರಿ ಮಯವಾದ ಸಕ್ಕರೆ ನಾಡು

ಮಂಡ್ಯ: ಸಕ್ಕರೆನಾಡು ಮಂಡ್ಯಕ್ಕೆ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿ ಹಿನ್ನೆಲೆಯಲ್ಲಿ ಮಂಡ್ಯದಲ್ಲಿ ನಮೋ ಸ್ವಾಗತಿಸಲು ಬಿಜೆಪಿ ನಾಯಕರು ಸಜ್ಜಾಗಿದ್ದು, ಇಡೀ ಮಂಡ್ಯ ಕೇಸರಿಮಯವಾಗಿದೆ. ಬೃಹತ್ ವೇದಿಕೆಯು ಕೂಡ ಸಿದ್ದಗೊಂಡಿದೆ. ಇದರ ಜೊತೆಗೆ ಮೋದಿ ಅವರು ರೋಡ್ ಶೋ ನಡೆಸಲಿದ್ದಾರೆ.

ರೋಡ್​ ಶೋ ಬಳಿಕ ಮಂಡ್ಯದ ಗೆಜ್ಜಲಗೆರೆಯಲ್ಲಿ ಸಮಾವೇಶಕ್ಕಾಗಿ ಬೃಹತ್ ವೇದಿಕೆ ನಿರ್ಮಾಣವಾಗಿದ್ದು, ಕಾರ್ಯಕ್ರಮದಲ್ಲಿ ಯಾವುದೇ ವಿಘ್ನ ಎದುರಾಗದಂತೆ ಬಿಜೆಪಿ ಜಿಲ್ಲಾಧ್ಯಕ್ಷ ಸಿಪಿ ಉಮೇಶ್, ಬಿಜೆಪಿ ಟಿಕೆಟ್ ಆಕಾಂಕ್ಷಿ ಎಸ್.ಪಿ.ಸ್ವಾಮಿ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಗಿದೆ. ವೇದಿಕೆ ಸುತ್ತ ಪೊಲೀಸರ ಸರ್ಪಗಾವಲು ಹಾಕಲಾಗಿದ್ದು, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ.

ಈ ಬಗ್ಗೆ ಮಂಡ್ಯ ಎಸ್​ಪಿ ಯತೀಶ್​ ಮಾತನಾಡಿ, ಮಂಡ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಮಂಡ್ಯ ಆಗಮನದ ಹಿನ್ನೆಲೆ, ಸೂಕ್ತವಾಗಿ ಎಲ್ಲ ರೀತಿಯ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಹೊರ ಜಿಲ್ಲೆಯಿಂದ ಪೊಲೀಸ್​ ಸಿಬ್ಬಂದಿ ಕರೆಸಿ ರೋಡ್ ಶೋ ಸೇರಿದಂತೆ ಎಲ್ಲ ಕಡೆ ಭದ್ರತೆ ಒದಗಿಸಲಾಗಿದೆ. ಸಮಾವೇಶಕ್ಕೆ ಬರುವವರಿಗೆ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕೂಡ ಮಾಡಲಾಗಿದ್ದು, ಸಾರ್ವಜನಿಕರು ಸಹಕರಿಸುವಂತೆ ಮನವಿ ಮಾಡಿಕೊಂಡರು.

ಇದೇ ವೇಳೆ, ವೇದಿಕೆ ಸಿದ್ದತೆ ಕಾರ್ಯ ವೀಕ್ಷಣೆ ಮಾಡಿದ ಸಂಸದ ಪ್ರತಾಪ್ ಸಿಂಹ ಬಳಿಕ ಮಾತನಾಡಿ, SPG ತಂಡದಿಂದ ಕಾನ್ವೆ ರಿಯರ್ಸಲ್ ಮಾಡಿದ್ದಾರೆ. ಫಲಾನುಭವಿಗಳಿಗೂ ವ್ಯವಸ್ಥೆ ಮಾಡಲಾಗಿದೆ. ನಾಳೆ 11:30ಕ್ಕೆ ರೋಡ್ ಶೋ ಪ್ರಾರಂಭ 12:5ಕ್ಕೆ ವೇದಿಕೆ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ರೋಡ್ ಶೋಗೆ 40 ಸಾವಿರ ಜನರು ಸೇರುವ ನಿರೀಕ್ಷೆಯಿದೆ, ಒಂದು ಲಕ್ಷಕ್ಕಿಂತ ಹೆಚ್ಚು ಆಸನದ ವ್ಯವಸ್ಥೆ ಮಾಡಲಾಗಿದ್ದು ಬೃಹತ್​ ಸಮಾವೇಶದಲ್ಲಿ 2 ಲಕ್ಷ ಜನ ಸೇರುತ್ತಾರೆ. ಈಗಾಗಲೇ ಮೈ-ಬೆಂ ತೆರಳುವವರಿಗೆ ಮಾರ್ಗ ಬದಲಾವಣೆ ಮಾಡಲಾಗಿದೆ. ಎಲ್ಲಾ ರೀತಿಯ ಸಿದ್ದತೆಯನ್ನು ನಾವು ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.

ಟಿಪ್ಪು ಹತ್ಯೆ ಮಾಡಿದ್ದು ಉರಿಗೌಡ, ನಂಜೇಗೌಡ: ಇನ್ನೂ ಮಂಡ್ಯದಲ್ಲಿ ಉರಿಗೌಡ, ನಂಜೇಗೌಡ ದ್ವಾರ ನಿರ್ಮಾಣದ ವಿಚಾರವಾಗಿ ಮಾತನಾಡಿದ ಪ್ರತಾಪ್​ ಸಿಂಹ, ಟಿಪ್ಪು ಹುಲಿ ಎನ್ನುವುದು ಕಟ್ಟು ಕಥೆ. ಉರಿಗೌಡ ಮತ್ತು ದೊಡ್ಡ ನಂಜೇಗೌಡ ಟಿಪ್ಪುವನ್ನು ಕೊಂದವರು. ದ್ವಾರ ಪ್ರತಿಷ್ಠಾಪನೆ ಮಾಡಿದರೆ ಮಂಡ್ಯದವರು ಖುಷಿ ಪಡುತ್ತಾರೆ. ಟಿಪ್ಪು ಸುಲ್ತಾನ್ ಏನು ದೇಶ ಪ್ರೇಮಿನಾ? ಮಂಡ್ಯ ಹೆಸರಿಟ್ಟು ಜಿಲ್ಲೆ ಮಾಡಿದವರು ಕೃಷ್ಣರಾಜ ಒಡೆಯರ್, ಆ ಕುಟುಂಬವನ್ನು ಟಿಪ್ಪು ಸರ್ವನಾಶ ಮಾಡಲು ಹೊರಟಿದ್ದ. ಟಿಪ್ಪು ಹತ್ಯೆ ಮಾಡಿದ್ದು ಉರಿಗೌಡ ಮತ್ತು ನಂಜೇಗೌಡ ಅವರ ಬಗ್ಗೆ ಮಾತನಾಡಿದರೆ ಖುಷಿಯಾಗಬೇಕು. ಹುಲಿ, ಸಿಂಹ, ಕರಡಿ ಅಂತ ಯಾಕೆ ಹೇಳಬೇಕು‌. ಟಿಪ್ಪು ಯಾವ ಹುಲಿನು ಕೊಂದಿಲ್ಲ ಎಂದು ಟಿಪ್ಪು ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ:ಗೌಡರು ತಂದಿದ್ದು ನೈಸ್ ರೋಡ್​, ಎಕ್ಸ್​​ಪ್ರೆಸ್ ವೇ ಶ್ರೇಯ ಮೋದಿ ಸರ್ಕಾರಕ್ಕೆ ಸಲ್ಲಬೇಕು: ಶೋಭಾ ಕರಂದ್ಲಾಜೆ

Last Updated : Mar 12, 2023, 8:08 AM IST

ABOUT THE AUTHOR

...view details