ಮಂಡ್ಯ:ಹೆಚ್.ಡಿ ಕುಮಾರಸ್ವಾಮಿ ನೇತೃತ್ವದ ಪಂಚರತ್ನ ರಥಯಾತ್ರೆ ಇಂದು ಮಂಡ್ಯ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದೆ. ಯಾತ್ರೆಗೆ ಶಾಸಕ ಎಂ ಶ್ರೀನಿವಾಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಅದ್ದೂರಿಯಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕುಮಾರಸ್ವಾಮಿ ನನಗೆ ಅಧಿವೇಶನಕ್ಕಿಂತ ಯಾತ್ರೆಯೇ ಮುಖ್ಯ. ಕಳೆದ ಹಲವು ಅಧಿವೇಶನಗಳಲ್ಲಿ ಮಾತನಾಡಿದ ಯಾವ ವಿಚಾರವೂ ಅನುಷ್ಠಾನಗೊಂಡಿಲ್ಲ. ಹಾಗಾಗಿ ನನಗೆ ಅಧಿವೇಶನಕ್ಕಿಂತ ರೈತರು, ಜನಸಾಮಾನ್ಯರಿಗೆ ತರಲು ಹೊರಟಿರುವ ಪಂಚರತ್ನ ರಥಯಾತ್ರೆ ನನಗೆ ಬಹಳ ಮುಖ್ಯ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.