ಕರ್ನಾಟಕ

karnataka

ETV Bharat / state

ಮನೆಗೆ ನುಗ್ಗಿ ವೃದ್ಧೆ ಕೊಲೆ: ಚಿನ್ನಾಭರಣ ದೋಚಿ ದುಷ್ಕರ್ಮಿಗಳು ಪರಾರಿ - ಮಂಡ್ಯ ಮರ್ಡರ್​ ನ್ಯೂಸ್​

ಮನೆಗೆ ನುಗ್ಗಿ ವೃದ್ಧೆ ಕೊಲೆ ಮಾಡಿ ಮೈಮೇಲಿದ್ದ ಸುಮಾರು 70 ಗ್ರಾಂ ಚಿನ್ನದ ಒಡವೆ ದೋಚಿ ದುಷ್ಕರ್ಮಿಗಳು ಎಸ್ಕೇಪ್​​ ಆಗಿರುವ ಘಟನೆ ನಾಗಮಂಗಲ ತಾಲೂಕಿನ ಹೊಣಕೆರೆ ಹೋಬಳಿಯ ಕರಿಕ್ಯಾತನಹಳ್ಳಿಯಲ್ಲಿ ನಡೆದಿದೆ.

mandya
ಮನೆಗೆ ನುಗ್ಗಿ ವೃದ್ಧೆ ಕೊಲೆ

By

Published : Jun 23, 2020, 12:26 PM IST

Updated : Jun 23, 2020, 12:46 PM IST

ಮಂಡ್ಯ: ಮನೆಗೆ ನುಗ್ಗಿ ವೃದ್ಧೆಯನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿರುವ ಪ್ರಕರಣ ನಾಗಮಂಗಲ ತಾಲೂಕಿನ ಹೊಣಕೆರೆ ಹೋಬಳಿ ಕರಿಕ್ಯಾತನಹಳ್ಳಿಯಲ್ಲಿ ನಡೆದಿದೆ.

ಕೆ.ಆರ್. ಪೇಟೆ - ನಾಗಮಂಗಲ ಮುಖ್ಯ ರಸ್ತೆಯ ಸರ್ಕಾರಿ ಶಾಲೆಯ ಎದುರಿನಲ್ಲಿರುವ ಮನೆಯಲ್ಲಿ ವಾಸವಿದ್ದ ಹನುಮೇಗೌಡರ ಪತ್ನಿ ಜಯಮ್ಮ (70) ಎಂಬುವರನ್ನು ಕೊಲೆ ಮಾಡಲಾಗಿದೆ.

ತಡರಾತ್ರಿ ಮನೆಯ ಮುಂಬಾಗಿಲು ಒಡೆದು ಒಳಗೆ ನುಗ್ಗಿದ್ದ ದುಷ್ಕರ್ಮಿಗಳು, ವೃದ್ಧೆಯನ್ನು ಕೊಂದು ಮೈಮೇಲಿದ್ದ ಮಾಂಗಲ್ಯ ಸರ, ಓಲೆ, ಉಂಗುರ ಹಾಗೂ ಮಾಟಿ ಸೇರಿದಂತೆ ಸುಮಾರು 75 ಗ್ರಾಂಗಳಿಗೂ ಹೆಚ್ಚು ತೂಕದ ಆಭರಣವನ್ನು ಕಳವು ಮಾಡಿದ್ದಾರೆ.

ಪ್ರಕರಣದಿಂದ ಗ್ರಾಮಸ್ಥರು ಆತಂಕದಲ್ಲಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Jun 23, 2020, 12:46 PM IST

ABOUT THE AUTHOR

...view details