ಮಂಡ್ಯ: ಇಡೀ ಜಿಲ್ಲೆ ಜೆಡಿಎಸ್ನವರದೇ.. ನಮ್ಮ ಹತ್ತಿರ ಏನೂ ಇಲ್ಲ. ನಾವು ಜೀರೋ ಎಂದು ಮಾಜಿ ಸಚಿವ ಚಲುವರಾಯಸ್ವಾಮಿ ಅವರು ಜೆಡಿಎಸ್ ಶಾಸಕ ಸುರೇಶ್ಗೌಡರಿಗೆ ಟಾಂಗ್ ನೀಡಿದರು.
ಎಲ್ಲಾ ಜೆಡಿಎಸ್ನವರದೇ, ನಮ್ಮದೂ ಏನೂ ಇಲ್ಲ.. ಮಾಜಿ ಸಚಿವ ಚಲುವರಾಜಸ್ವಾಮಿ ವ್ಯಂಗ್ಯ.. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ರಾಪಂ ಚುನಾವಣೆಯಲ್ಲಿ ಹೆಚ್ಚು ಗೆಲುವು ಕಾಂಗ್ರೆಸ್ದು ಎಂದು ಕ್ಷೇತ್ರದ ಕಾಂಗ್ರೆಸ್ ನಾಯಕರು ಕನಸು ಕಾಣ್ತಿದ್ದಾರೆ ಎಂಬ ಶಾಸಕ ಸುರೇಶ್ ಗೌಡ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಇಡೀ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್ ಅಂತಾನೇ ಹೇಳಲಿ ನಮ್ಮದು ಅಭ್ಯಂತ್ರವಿಲ್ಲ ಎಂದು ಚಲುವರಾಯಸ್ವಾಮಿ ಹೇಳಿದರು.
ಓದಿ-ಮುಂಬೈನ ಸ್ಟುಡಿಯೋದಲ್ಲಿ ಭಾರೀ ಅಗ್ನಿ ಅವಘಡ
ನಮಗೆ ಯಾವುದೇ ಬೇಜಾರಿಲ್ಲಾ.. ನಾನು ಯಾವುದೇ ಕೋರ್ಟ್ಗೆ ಲೀಗಲ್ ಅಪ್ಲಿಕೇಶನ್ ಹಾಕಲ್ಲಾ. ಅವರೆಲ್ಲಾ ದೊಡ್ಡ ದೊಡ್ಡ ಪಿಹೆಚ್ಡಿ ಪಡೆದವರು, ಬುದ್ಧಿವಂತರಿದ್ದಾರೆ. ಅವರ ವಿರುದ್ದ ನಾವು ಯಾವತ್ತೂ ಸಮರ್ಥರು ಅಂತಾ ಹೇಳಿಕೊಂಡಿಲ್ಲ ಎಂದು ವ್ಯಂಗ್ಯವಾಡಿದರು.
ಮಂಡ್ಯ ಜಿಲ್ಲೆಯ 252 ಗ್ರಾಪಂ ಜೆಡಿಎಸ್ದೇ ಅಂದುಕೊಂಡ್ರೂ ಬೇಜಾರಿಲ್ಲಾ. ನಾವು ಯಾವತ್ತು ಪ್ರತಿಭಟನೆ ಮಾಡಿಲ್ಲಾ, ವಿರೋಧವನ್ನು ಮಾಡಿಲ್ಲಾ. ಕಾಂಗ್ರೆಸ್ದು ಎಲ್ಲಾ ಜೀರೋ, ನಾನೇ ಡಿಕ್ಲೇರ್ ಮಾಡ್ತಿದ್ದೇನೆ ಅಂತಾ ಹೇಳಿ. ಜೆಡಿಎಸ್ನವರು ಖುಷಿಯಾಗಿರಲಿ ಎಂದು ಪರೋಕ್ಷವಾಗಿ ಸುರೇಶ್ಗೌಡರಿಗೆ ಚಲುವರಾಯಸ್ವಾಮಿ ಟಾಂಗ್ ನೀಡಿದರು.