ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ವಿರುದ್ಧ ಚುನಾವಣಾ ಅಖಾಡಕ್ಕಿಳಿದಿದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ ಅಭಿಮಾನಿಗಳು ಹೆಗಲ ಮೇಲೆ ಮೇಕೆ ಹೊತ್ತು ತಂದು ದೇವರಿಗೆ ಹರಕೆ ತೀರಿಸಿದ ಘಟನೆ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡದ ಅಹಲ್ಯಾ ದೇವಿ ದೇವಾಲಯದಲ್ಲಿ ನಡೆದಿದೆ.
ನಿಖಿಲ್ ಗೆಲುವಿಗಾಗಿ ಹರಕೆ ತೀರಿಸಿದ ಅಭಿಮಾನಿಗಳು! - Verb
ಲೋಕಸಭಾ ಚುನಾವಣಾ ಫಲಿತಾಂಶದ ದಿನ ಹತ್ತಿರವಾಗುತ್ತಿದೆ. ಕಾರ್ಯಕರ್ತರಲ್ಲಿ ದುಗುಡ ಹೆಚ್ಚಾಗುತ್ತಿದೆ. ತಮ್ಮ ನೆಚ್ಚಿನ ನಾಯಕ ಗೆಲ್ಲಬೇಕು ಎಂದು ಹರಕೆ ಹೊತ್ತುಕೊಳ್ಳುವ ಮೂಲಕ ದೇವರ ಮೊರೆ ಹೋಗುತ್ತಿದ್ದಾರೆ.
ಹರಕೆ ತೀರಿಸುತ್ತಿರುವ ನಿಖಿಲ್ ಕುಮಾರಸ್ವಾಮಿ ಅಭಿಮಾನಿಗಳು
ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ಗವಿಗೌಡ ಹಾಗೂ ಪ್ರವೀಣ್ ಎಂಬುವವರು ಹರಕೆ ಕಟ್ಟಿಕೊಂಡು ದೇವರಿಗೆ ಬಲಿ ಅರ್ಪಿಸಿದ್ದಾರೆ. ದೇವರ ತೀರ್ಥ ಹಾಕಿದಾಗ ಮೇಕೆ ತನ್ನ ದೇಹ ಅಲುಗಾಡಿಸಿದರೆ ಹರಕೆ ಈಡೇರುತ್ತೆ ಎಂಬುದು ಇಲ್ಲಿನ ನಂಬಿಕೆ. ಹೀಗಾಗಿ ಮೇಕೆಯು ನಿಖಿಲ್ ಕುಮಾರಸ್ವಾಮಿ ಗೆಲುವಿನ ಸೂಚನೆ ನೀಡಿದ್ದರಿಂದ ಸಂಭ್ರಮಿಸಿ ಉರುಳು ಸೇವೆ ಸಹ ಮಾಡಿದರು.