ಕರ್ನಾಟಕ

karnataka

ETV Bharat / state

ಎಚ್‌ಡಿಕೆ 'ಪುರಾಣ ಬಿಚ್ಚಿಡುವ' ವಿಚಾರಕ್ಕೆ ನಯವಾಗಿಯೇ ಪ್ರತಿಕ್ರಿಯಿಸಿದ ನಾರಾಯಣ ಗೌಡ - ನಾರಾಯಣಗೌಡ, ಬಿಜೆಪಿ ಅಭ್ಯರ್ಥಿ

ಬಿಜೆಪಿ ಸೇರಿಯೂ ಆಯ್ತು, ಬಿ ಫಾರಂ ಸಿಕ್ಕಿಯೂ ಆಯ್ತು. ಇನ್ನೇನಿದ್ದರೂ ನಾಮಪತ್ರ ಸಲ್ಲಿಸೋದಷ್ಟೇ ಬಾಕಿ. ಹೀಗಾಗಿ ತಮ್ಮ ಮನೆ ದೇವರ ಮುಂದೆ ಬಿ ಫಾರಂ ಇಟ್ಟು ಪೂಜೆ ಸಲ್ಲಿಸಿದ ನಾರಾಯಣ ಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಪುರಾಣದ ಕಥೆಗೆ ನಯವಾಗಿಯೇ ಟಾಂಗ್ ಕೊಟ್ಟರು.

ಎಚ್‌ಡಿಕೆ ಪುರಾಣಕ್ಕೆ ನಯವಾಗಿಯೇ ಉತ್ತರ ಕೊಟ್ಟ ರೆಬೆಲ್

By

Published : Nov 15, 2019, 6:31 PM IST

ಮಂಡ್ಯ:ಅವರು ಪುರಾಣವನ್ನು ಬಿಚ್ಚಿಟ್ಟರೆ ಒಳ್ಳೆಯದು, ಅವರಿಗೆ ದೇವರು ಒಳ್ಳೆಯದನ್ನು ಮಾಡಲಿ. ಅದೇನಿದೆ ಅನ್ನೋದು ಅವರಿಗೆ ಗೊತ್ತಿದೆ, ನನಗೆ ಗೊತ್ತಿಲ್ಲವಲ್ಲಾ ಎಂದುರೆಬೆಲ್ ಮುಖಂಡ ನಾರಾಯಣಗೌಡ ನಯವಾಗಿಯೇ ಟಾಂಗ್ ಕೊಟ್ಟರು.

ಮುಂದಿನ ಬಾರಿ ಕೆ.ಆರ್. ಪೇಟೆಗೆ ಬಂದಂತಹ ಸಂದರ್ಭದಲ್ಲಿ ನಾರಾಯಣ ಗೌಡರ ಪುರಾಣವನ್ನು ಬಿಚ್ಚಿಡುತ್ತೇನೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಅವರು ಉತ್ತರಿಸಿದರು.

ಎಚ್‌ಡಿಕೆ ಪುರಾಣಕ್ಕೆ ನಯವಾಗಿಯೇ ಉತ್ತರ ಕೊಟ್ಟ ನಾರಾಯಣ ಗೌಡ

ಯಡಿಯೂರಪ್ಪ ಜೊತೆ ಸೇರಿ ಅವರನ್ನು ಇಂದ್ರ ಚಂದ್ರ ಎಂದು ಹೊಗಳುತ್ತಿದ್ದೀರಂತೆ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಮನೆಯಲ್ಲಿ ಜೊತೆಯಲ್ಲಿ ಇರುತ್ತೇವೆ. ಅವರಿಗೆ ಕೆಟ್ಟದು ಬಯಸುವುದನ್ನು ನಮ್ಮ ತಂದೆ ತಾಯಿ ನನಗೆ ಕಲಿಸಿಲ್ಲ, ಅವರನ್ನು ನಾನು ಕೆಟ್ಟವರೆಂದು ದೂರುವುದಿಲ್ಲ ಎಂದರು.

ಬೆಂಗಳೂರಿನಲ್ಲಿ ಬಿಜೆಪಿಯ ಬಿ ಫಾರಂ ಪಡೆದು ಅದನ್ನು ಮನೆ ದೇವರು ದಡೀಘಟ್ಟದ ದೊಡ್ಡಮ್ಮ ಚಿಕ್ಕಮ್ಮ ಹಾಗೂ ಕೈಗೋನಹಳ್ಳಿಯ ವೀರಭದ್ರೇಶ್ವರ ಸ್ವಾಮಿಯ ಮುಂದೆ ಇಟ್ಟು ಪೂಜೆ ಸಲ್ಲಿಸಿದರು. ಸೋಮವಾರ ದಂಪತಿ ಸಮೇತ ವಿಶೇಷ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸಲಿದ್ದಾರೆ.

ABOUT THE AUTHOR

...view details