ಮಂಡ್ಯ: ನನ್ನ ಕ್ಷೇತ್ರ ಅಭಿವೃದ್ಧಿಪಡಿಸಬೇಕಾದರೆ ನಮ್ಮ ಬಳಿ ಪವರ್ ಇದ್ದಾಗಲೇ ಮಾಡಬೇಕು ಎಂದು ಮಂಡ್ಯದಲ್ಲಿ ಸಚಿವ ನಾರಾಯಣಗೌಡ ಹೇಳಿದರು.
ವಿವಿಧ ಇಲಾಖೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪುಟ್ಟರಾಜು ಎಲ್ಲಿ ನುಗ್ಗುತ್ತಾರೋ, ಎಲ್ಲಿ ಕೆಲಸ ಮಾಡಿಕೊಂಡು ಬರುತ್ತಾರೆಂದು ಗೊತ್ತಾಗುತ್ತಿರಲಿಲ್ಲ. ಅವರು ಸಚಿವರಾಗಿದ್ದಾಗ ಸರ್ಕಾರದ ಕಾರನ್ನು ಬಳಸದೇ ಹೋಗುತ್ತಿದ್ದರು. ಅವರು ಮಂತ್ರಿಯಾಗಿದ್ದಾಗ 1,600 ಕೋಟಿ ಒಂದೇ ತಾಲೂಕು ಅಭಿವೃದ್ಧಿಗಾಗಿ ಕೊಟ್ರು. ಅಂದು ನನ್ನನ್ನು ಕೈ ಬಿಟ್ಟರು. ಆದರೆ ಇಂದು ನಾನು ಅಧಿಕಾರ ಅನುಭವಿಸುತ್ತಿದ್ದೇನೆ. ನಮ್ಮ ಪವರ್ ಇದ್ದಾಗಲೇ ಅಭಿವೃದ್ಧಿ ಮಾಡಿಕೊಳ್ಳಬೇಕು. ಅದಕ್ಕಾಗಿ 1,200 ಕೋಟಿ ಕೆ.ಆರ್. ಪೇಟೆಗೆ ಹಾಕಿದ್ದೇನೆ. ಆದ್ರೆ ನಿಮ್ಮ ಹಾಗೆ ಮೋಸ ಮಾಡಿಲ್ಲ ಎಂದರು.