ಕರ್ನಾಟಕ

karnataka

ETV Bharat / state

ದೇವೇಗೌಡರ ಕುಟುಂಬದ ವಿರುದ್ಧ ಗುಡುಗಿದ ನಾರಾಯಣಗೌಡ - Narayana Gowda

ರೇವಣ್ಣ ಸತ್ಯ ಹರಿಶ್ಚಂದ್ರನಾ..? ಸರ್ಕಾರ ಉರುಳಲು ಅವರೇ ಕಾರಣ. ಜೆಡಿಎಸ್​ನ 20 ಜನ ಶಾಸಕರು ರಾಜೀನಾಮೆ ಕೊಡಲಿದ್ದಾರೆ ಎಂದು ಜೆಡಿಎಸ್ ಅನರ್ಹ ಶಾಸಕ ನಾರಾಯಣಗೌಡ ಭವಿಷ್ಯ ನುಡಿದರು.

ದೇವೇಗೌಡರ ಕುಟುಂಬದ ವಿರುದ್ಧ ಗುಡುಗಿದ ನಾರಾಯಣಗೌಡ

By

Published : Sep 14, 2019, 7:35 PM IST

ಮಂಡ್ಯ:ಜೆಡಿಎಸ್ ಪಕ್ಷ ದೇವೇಗೌಡರ ಕುಟುಂಬದಿಂದಲೇ ನಾಶವಾಗಲಿದೆ. ಆ ಪಕ್ಷದ ಮತ್ತಷ್ಟು ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಅನರ್ಹ ಶಾಸಕ ನಾರಾಯಣಗೌಡ ಗುಡುಗಿದ್ದಾರೆ.

ದೇವೇಗೌಡರ ಕುಟುಂಬದ ವಿರುದ್ಧ ಗುಡುಗಿದ ಅನರ್ಹ ಶಾಸಕ ನಾರಾಯಣಗೌಡ

ಕೆ.ಆರ್.ಪೇಟೆಯ ತಮ್ಮ ನಿವಾಸದಲ್ಲಿ ಈ ಕುರಿತು ಮಾತನಾಡಿದ ಅವರು, ನನಗೆ ಜೆಡಿಎಸ್ ನಾಯಕರ ಮಾತುಗಳು ನೋವು ತರಿಸಿದೆ. ಚುನಾವಣೆಗೆ ಸ್ಪರ್ಧಿಸಲು ಬಿ ಫಾರಂ ಕೊಡುವಾಗ ನನಗೆ ಕೊಟ್ಟ ನೋವು ಅಷ್ಟಿಷ್ಟಲ್ಲ. ದೇವೇಗೌಡರ ಮನೆಯವರು, ಮನೆಯ ಹೆಣ್ಣು ಮಕ್ಕಳು ಕೊಟ್ಟ ಹಿಂಸೆಯನ್ನುಇಡೀ ಕರ್ನಾಟಕ ನೋಡಿದೆ ಎಂದು ಅಸಮಾಧಾನ ತೋಡಿಕೊಂಡರು.

'ಕುಟುಂಬ ಪ್ರೇಮದಿಂದ ಹೊರಬನ್ನಿ,ದೇಶ ಪ್ರೇಮಿಯಾಗಿ'

ದೇವೇಗೌಡರು ಕುಟುಂಬಪ್ರಿಯರು. ಅವರಿಗೆ ಮಕ್ಕಳನ್ನು ನಿಯಂತ್ರಣದಲ್ಲಿಡಲು ಆಗುತ್ತಿಲ್ಲ. ನೀವು ದೇಶ ಪ್ರೇಮಿ ಆಗಬೇಕು, ಕುಟುಂಬ ಪ್ರೇಮದಿಂದ ಹೊರ ಬನ್ನಿ ಎಂದು ದೇವೇಗೌಡರ ವಿರುದ್ಧ ಗುಡುಗಿದ್ರು.

'ರೇವಣ್ಣ ಬಗ್ಗೆ ನಾನು ಬಾಯಿ ಬಿಡಲೇ?'

ಇದೇ ವೇಳೆ ಮಾಜಿ ಸಚಿವ ರೇವಣ್ಣರ ವಿರುದ್ಧವೂ ಅವರು ಆಕ್ರೋಶ ವ್ಯಕ್ತಪಡಿಸಿದ್ರು. ರೇವಣ್ಣಗೆ ನಾಚಿಕೆ ಆಗಬೇಕು. ಹಾಸನದಲ್ಲಿ ನಿಮ್ಮ ಹೋಟೆಲ್‌ಗಾಗಿ ದುಡಿದಿದ್ದೇನೆ. ಹೊಟ್ಟೆ ಬಟ್ಟೆಗಾಗಿ ದೇಶಾಂತರ ಹೋದವನು ನಾನು. ನೀವು ಕರೆದುಕೊಂಡು ಬಂದಿರಿ ಎಂದು ವಾಗ್ದಾಳಿ ಮಾಡಿದರು.

ರೇವಣ್ಣ ಎಂಥ ವ್ಯಕ್ತಿ ಅನ್ನೋದು ಎಲ್ಲರಿಗೂ ಗೊತ್ತು. ನಾನು ಬಾಯಿ ಬಿಡಬೇಕೇ? ಇದನ್ನು ಅವರು ಅರ್ಥ ಮಾಡಿಕೊಳ್ಳಬೇಕು. ಇಡೀ ಕುಟುಂಬವನ್ನು ದೇವರು ಅಂತ ಪರಿಗಣಿಸ್ತಿದ್ದೆ. ಹಣ ಮಾಡಲು ನಾನು ರಾಜಕಾರಣಕ್ಕೆ ಬಂದಿಲ್ಲ. ತಾಯಿ, ತಂದೆ, ಜನರ ಸೇವೆ ಮಾಡಲು ಬಂದಿದ್ದೇನೆ. ನನ್ ತಾಲೂಕಿಗೆ ಎಷ್ಟು ಕೋಟಿ ಕೊಟ್ಟಿದ್ದೀರಿ? ಯಾಕೆ ಸುಳ್ಳು ಹೇಳುತ್ತೀರಿ. ಕೆಲವೊಂದು ಕಾಮಗಾರಿಯನ್ನು ರೇವಣ್ಣ ಕಿತ್ತುಕೊಂಡರು ಎಂದು ಕಿಡಿಕಾರಿದ್ರು.

'ಕುಮಾರಣ್ಣನ ಸುಳ್ಳು, ನಿಖಿಲ್ ಸೋಲು'

ಕುಮಾರಣ್ಣ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದರಿಂದ ನಮಗೆ ಈ ಗತಿ ಬಂದಿದೆ. ಮಂಡ್ಯದಲ್ಲಿ ನಡೆಸಿದ ಗುದ್ದಲಿ ಪೂಜೆ ಸುಳ್ಳಿನ ಕಂತೆ. ನಮ್ಮನ್ನು ಚೇಂಬರ್‌ನಲ್ಲಿ ಕೂಡಿಸುತ್ತಿರಲಿಲ್ಲ. ಅವರ ಸುಳ್ಳಿನ ಸರಮಾಲೆಯಿಂದಲೇ ನಿಖಿಲ್ ಲೋಕಸಭೆ ಚುನಾವಣೆಯಲ್ಲಿ ಸೋಲು ಕಂಡರು ಎಂದರು.

ಡಿಕೆಶಿ ಬಂಧನಕ್ಕೆ ಯಾರು ಕಾರಣ?

ಡಿಕೆಶಿ ಬಂಧನಕ್ಕೆ ಯಾರು ಕಾರಣ? ಎಂಬುದು ಶೀಘ್ರವೇ ಬಯಲಾಗಲಿದೆ. ಕಬ್ಬಿಣವನ್ನು ಕಬ್ಬಿಣವೇ ಕಟ್ ಮಾಡಿದೆ. ಕಳೆದ 5 ಈ ಕೆಲಸಕ್ಕೆ ವರ್ಷದಿಂದ ಒಳಗೊಳಗೆ ಸಂಚು ನಡೆಯುತ್ತಿತ್ತು. ಈ ಸಮುದಾಯದಲ್ಲಿ ಯಾರೂ ಬೆಳೆಯಬಾರದು ಅಂತ ಸಂಚು ಹೆಣೆಯಲಾಗಿತ್ತುಎಂದವರು ಹೊಸ ಬಾಂಬ್ ಸಿಡಿಸಿದರು.

ABOUT THE AUTHOR

...view details