ಕರ್ನಾಟಕ

karnataka

ETV Bharat / state

ಸಕ್ರಮ ಗಣಿಗಾರಿಕೆಗೆ ನನ್ನ ವಿರೋಧ ಇಲ್ಲ, ಅಕ್ರಮಕ್ಕೆ ಅವಕಾಶ ಕೊಡಲ್ಲ: ಸುಮಲತಾ - MP Sumalatha Ambarish reaction about Illegal mining

ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಸರ್ಕಾರ ಯಾವ ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ನೋಡೋಣ. ಈ ಬಗ್ಗೆ ಸಿಎಂ ಹಾಗೂ ಗಣಿ ಸಚಿವರನ್ನು ಭೇಟೆ ಮಾಡಿ ಮಾತನಾಡುತ್ತೇನೆ. ನನ್ನ ಹೋರಾಟ ಮುಂದುವರೆಯುತ್ತದೆ ಎಂದು ಮಂಡ್ಯದಲ್ಲಿ ಸಂಸದೆ ಸುಮಲತಾ ತಿಳಿಸಿದರು.

ಸುಮಲತಾ
ಸುಮಲತಾ

By

Published : Aug 12, 2021, 8:52 AM IST

ಮಂಡ್ಯ: ಸಕ್ರಮ ಗಣಿಗಾರಿಕೆಗೆ ನನ್ನ ವಿರೋಧ ಇಲ್ಲ. ಆದ್ರೆ, ಕೆಆರ್‌ಎಸ್ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗೆ ಅವಕಾಶ ಮಾಡಿಕೊಡಬೇಕಾ? ಎಂದು ಸಂಸದೆ ಸುಮಲತಾ ಅಂಬರೀಶ್ ಪ್ರಶ್ನಿಸಿದರು.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಣಿಗಾರಿಕೆ ವಿಚಾರ ಇತ್ತೀಚಿನ ದಿನಗಳಲ್ಲಿ ಟ್ರ್ಯಾಕ್​ಗೆ ಬಂದಿದೆ. ಎರಡು ವರ್ಷದಿಂದ ಈ ಬಗ್ಗೆ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಮೊನ್ನೆ ಅಧಿವೇಶನದಲ್ಲಿ ಸಹ ಚರ್ಚೆ ಮಾಡಿದ್ದೇನೆ. ಕೇಂದ್ರ ಸಚಿವರ ಗಮನಕ್ಕೆ ತಂದಿದ್ದೇನೆ. ಅಷ್ಟೇ ಅಲ್ಲದೆ, ಈ ಕುರಿತು ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಅಮಿತ್ ಶಾ ಅಧಿಕಾರಿಗಳಿಗೆ ಹೇಳಿದ್ದಾರೆ ಎಂದರು.

ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಸದೆ ಸುಮಲತಾ

'ಭಯ ಪಟ್ಟು ಹಿಂದೆ ಸರಿಯಲ್ಲಿಲ್ಲ'

ಅಕ್ರಮ ನಡೆಯುತ್ತಿದೆ ಎಂದು ಧ್ವನಿ ಎತ್ತಿದಾಗ ಹಲವು ಕಡೆಯಿಂದ ವಿರೋಧ ವ್ಯಕ್ತವಾಗಿತ್ತು. ವಿರೋಧ ಮಾಡಿದ್ರು ಅಂತ ನಾನು ಭಯ ಪಟ್ಟು ಹಿಂದೆ ಸರಿಯಲ್ಲಿಲ್ಲ. ನಾನು ತಪ್ಪು ಮಾಡಿದ್ದೇನೆ ಎಂದು ಬಿಂಬಿಸಲು ಹೊರಟವರಿಗೆ ನನ್ನ ಹೋರಾಟದ ಮೂಲಕ ಉತ್ತರ ಕೊಟ್ಟಿದ್ದೇನೆ ಎಂದು ದಳಪತಿಗಳಿಗೆ ಟಾಂಗ್ ನೀಡಿದರು.

'ಅಕ್ರಮ ನಡೆಯುತ್ತಿದೆ ಎಂದು ಒಪ್ಪಿಕೊಳ್ಳಲಿ'

ಸಕ್ರಮ ಮಾಡಬೇಕು ಎಂದು ಹೇಳುತ್ತಿರುವವರು ಮೊದಲು ಅಕ್ರಮ ನಡೆಯುತ್ತಿದೆ ಎಂದು ಒಪ್ಪಿಕೊಳ್ಳಬೇಕು. ಈಗ ಅಕ್ರಮ ಮಾಡಿದ್ದೇವೆ, ಸಕ್ರಮ ಮಾಡಿಕೊಡಿ ಎಂದು ಹೇಳಿದ್ರೆ ಅದಕ್ಕೆ ಒಂದು ಪ್ರಕ್ರಿಯೆ ಇರುತ್ತದೆ. ಕೆ.ಆರ್.ಎಸ್ ಸುತ್ತಮುತ್ತ ಗಣಿಗಾರಿಕೆಗೆ ಅವಕಾಶ ಮಾಡಿಕೊಡಿ ಅಂದ್ರೆ ಆಗುವುದಿಲ್ಲ. ಯಾಕಂದ್ರೆ, ಕೆ.ಆರ್.ಎಸ್ ಡ್ಯಾಂ ಹಾಗೂ ನಮ್ಮ ಪರಿಸರ ನಮಗೆ ಮುಖ್ಯ. ಪ್ರವಾಹಕ್ಕೂ ಮೊದಲು ಎಚ್ಚೆತ್ತುಕೊಳ್ಳುವುದು ನಮ್ಮ ಜವಾಬ್ದಾರಿ. ನಾವು ಪರಿಸರವನ್ನು ನಾಶ ಮಾಡಿದ್ರೆ, ಪರಿಸರ ನಮ್ಮನ್ನು ನಾಶ ಮಾಡುತ್ತದೆ ಎಂದು ಹೇಳಿದರು.

ನಾನು ಬೇಬಿ ಬೆಟ್ಟಕ್ಕೆ ಹೋದಾಗ ನಾಲ್ಕು ವರ್ಷವಾಯ್ತು ಬ್ಲಾಸ್ಟಿಂಗ್ ನಿಲ್ಲಿಸಿ ಎಂದಿದ್ರು. ಆದ್ರೆ ಈಗ ಪ್ರತಿ ದಿನ ಸ್ಫೋಟಕ ವಸ್ತು ಸಿಕ್ಕುತ್ತಿವೆ. ಕೆ.ಆರ್.ಎಸ್ ಹಾಳು ಆಗೋವರೆಗೂ ಕಾಯಬೇಕಾ?. ಕೆಲವರು ಯಾಕೆ ಹೀಗೆ ಮಾತನಾಡುತ್ತಾರೆ ಎನ್ನುವುದು ಅರ್ಥ ಆಗುತ್ತಿಲ್ಲ. ಈಗಾಗಲೇ ಶಿವಮೊಗ್ಗ, ಚಿಕ್ಕಬಳ್ಳಾಪುರದಲ್ಲಿ ಏನೇನು ಆಗಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ ಎಂದರು.

'ನನ್ನ ದಿಕ್ಕನ್ನು ಬದಲಿಸುವುದಿಲ್ಲ'

ಅಕ್ರಮವಿರುವ ಕಡೆ ಅಭಿವೃದ್ಧಿ ಸಾಧ್ಯವಿಲ್ಲ. ಮೊದಲು ಅಕ್ರಮ ನಿಲ್ಲಿಸಿ, ಅಭಿವೃದ್ಧಿ ತಾನಾಗಿಯೇ ಆಗುತ್ತದೆ ಎಂದ ಅವರು, ಜೆಡಿಎಸ್ ನವರು ಏನು ಬೇಕಾದ್ರು ಹೇಳಲಿ, ನಾನು ನನ್ನ ದಿಕ್ಕನ್ನು ಬದಲಿಸುವುದಿಲ್ಲ. ನನ್ನ ಹಾದಿ ತಪ್ಪಿಸಲು ಏನೇ ಮಾತಾಡಿದ್ರು ನಾನು ಹಾದಿ ತಪ್ಪಲ್ಲ. ನಾನು ನನ್ನ ಎಂಪಿ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿದ್ದೇನೆ. ನಾನು ಎಂಪಿಯಾದಾಗಿನಿಂದಲೂ ಹೋರಾಟ ಮಾಡುತ್ತಿದ್ದೇನೆ. ಇದೇ ತಿಂಗಳ 18 ರಂದು ದಿಶಾ ಸಭೆ ಇದೆ, ಅಂದು ಗಣಿಗಾರಿಕೆ ಬಗ್ಗೆ ಇನ್ನಷ್ಟು ಚರ್ಚೆ ಮಾಡುತ್ತೇನೆ. ಕೆ.ಆರ್.ಎಸ್ ಬಿರುಕು ಬಿಟ್ಟಿರುವುದಿಂದಲೇ 67 ಕೋಟಿ ರೂಪಾಯಿ ಕಾಮಗಾರಿಯನ್ನು ಮಾಡಿರೋದು. ಬೇಕಿದ್ರೆ ಆರ್.ಟಿ.ಐ ನಲ್ಲಿ ಮಾಹಿತಿ ತೆಗೆದುಕೊಂಡು ನೋಡಿ ಎಂದು ಜೆಡಿಎಸ್​ಗೆ ಟಾಂಗ್​ ಕೊಟ್ಟರು.

ABOUT THE AUTHOR

...view details