ಕರ್ನಾಟಕ

karnataka

ETV Bharat / state

ಶೆಟರ್ಸ್​​ ಕತ್ತರಿಸಿ ಮೊಬೈಲ್​ ಅಂಗಡಿಗೆ ಕನ್ನ...​​ ಖದೀಮರ ಕೈಚಳಕ ಸಿಸಿಟಿವಿಯಲ್ಲಿ ಸೆರೆ - kannada news

ಮೊಬೈಲ್ ಷೋ ರಂಗೆ ಕನ್ನ ಹಾಕಿರುವ ಕಳ್ಳರು, ರಾತ್ರಿ ಮುಖಕ್ಕೆ ಮಾಸ್ಕ್ ಧರಿಸಿ ಕೈಚಳಕ ತೋರಿಸಿದ್ದಾರೆ. ರೋಲಿಂಗ್ ಶೆಟರ್ಸ್​ ಕತ್ತರಿಸಿ ಮಾಡಿ ಒಳ ನುಗ್ಗಿದ್ದ ಖದೀಮರು ಲಕ್ಷಾಂತರ ರೂಪಾಯಿ ಮೊಬೈಲ್​ಗಳನ್ನು ಕದ್ದೊಯ್ದಿದ್ದಾರೆ.

ಶೆಲ್ಟರ್ ಕತ್ತರಿಸಿ ಮೊಬೈಲ್‌ಗಳನ್ನು ಕಳವು

By

Published : Jul 21, 2019, 1:14 PM IST

ಮಂಡ್ಯ: ಇಷ್ಟು ದಿನ ಅಂಗಡಿಗಳ ಬಾಗಿಲು ಮುರಿದು ಕಳ್ಳತನ ಮಾಡುತ್ತಿದ್ದ ಕಳ್ಳರು, ಸದ್ಯ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಕಬ್ಬಿಣದ ಶೆಟರ್ಸ್​ ಕತ್ತರಿಸಿ ಅಂಗಡಿಗಳಿಗೆ ಕನ್ನ ಹಾಕುತ್ತಿದ್ದಾರೆ.

ಶೆಟರ್ಸ್​ ಕತ್ತರಿಸಿ ಮೊಬೈಲ್‌ಗಳನ್ನು ಕದ್ದೊಯ್ದ ಖದೀಮರು

ನಾಗಮಂಗಲದ ಬಿ.ಎಂ. ರಸ್ತೆಯಲ್ಲಿರುವ ಸಂಗೀತಾ ಮೊಬೈಲ್ ಷೋ ರೂಂಗೆ ಕನ್ನ ಹಾಕಿರುವ ಮೂವರು ಕಳ್ಳರು, ರಾತ್ರಿ ಮುಖಕ್ಕೆ ಮಾಸ್ಕ್ ಧರಿಸಿ ಶೆಟರ್ಸ್​ ಕಟ್ ಮಾಡಿ ಒಳ ನುಗ್ಗಿ ಲಕ್ಷಾಂತರ ರೂಪಾಯಿ ಮೊಬೈಲ್​ಗಳನ್ನು ಕದ್ದೊಯ್ದಿದ್ದಾರೆ. ಹೆದ್ದಾರಿಯಲ್ಲಿರುವ ಮಳಿಗೆಯಲ್ಲಿಯೇ ಕಳ್ಳತನವಾಗಿರುವುದನ್ನ ಕಂಡ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪಟ್ಟಣ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details