ಕರ್ನಾಟಕ

karnataka

ETV Bharat / state

ಗ್ರಾಮ ಸ್ವಚ್ಛತಾಗಾರರ ಸಹಾಯಕ್ಕೆ ನಿಂತ ಶಾಸಕ ರವೀಂದ್ರ - ಮಂಡ್ಯ

ನೌಕರರನ್ನು ತಮ್ಮ ಮನೆಗೆ ಕರೆಸಿಕೊಂಡ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರವೀಂದ್ರ ಶ್ರಿಕಂಠಯ್ಯ ಸಾವಿರ ರೂಪಾಯಿ ಮೌಲ್ಯದ ಕಿಟ್ ವಿತರಣೆ ಮಾಡಿ, ನೌಕರರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

mla
mla

By

Published : May 11, 2020, 3:50 PM IST

ಮಂಡ್ಯ:ಗ್ರಾಮಾಂತರ ಪ್ರದೇಶಕ್ಕೂ ಕೊರೊನಾ ಲಾಕ್‌ಡೌನ್ ಸಮಸ್ಯೆಗಳನ್ನು ತಂದೊಡ್ಡಿದೆ. ಹೀಗಾಗಿ ಗ್ರಾಮ ಸ್ವಚ್ಚತಾ ಕಾರ್ಯ ಮಾಡುವ ಡಿ ಗ್ರೂಪ್ ನೌಕರರ ಸಮಸ್ಯೆ ನಿವಾರಣೆಗೆ ಶ್ರೀರಂಗಪಟ್ಟಣ ಕ್ಷೇತ್ರದ ಶಾಸಕ ರವೀಂದ್ರ ಶ್ರಿಕಂಠಯ್ಯ ಮುಂದಾಗಿದ್ದಾರೆ.

ತಮ್ಮ ತಾಲೂಕಿನ ಗ್ರಾಮ ಪಂಚಾಯಿತಿ ಸ್ವಚ್ಚತಾಗಾರರ ಸಮಸ್ಯೆ ನಿವಾರಣೆಗಾಗಿ ಆಹಾರದ ಕಿಟ್ ವಿತರಣೆ ಮಾಡಿ, ಮುಂದೆಯೂ ಸಹಾಯದ ಭರವಸೆ ನೀಡಿದರು.

ಗ್ರಾಮ ಸ್ವಚ್ಛತಾಗಾರರಿಗೆ ಸಹಾಯ

ತಮ್ಮ ತೋಟದ ಮನೆಗೆ ನೌಕರರನ್ನು ಕರೆಸಿಕೊಂಡು ಸಾವಿರ ರೂಪಾಯಿ ಮೌಲ್ಯದ ಕಿಟ್ ವಿತರಣೆ ಮಾಡಿ, ನೌಕರರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಗ್ರಾಮಾಂತರ ಪ್ರದೇಶಗಳಲ್ಲಿ ಗಲ್ಲಿ ಗಲ್ಲಿಗೂ ಔಷಧ ಸಿಂಪಡಣೆ, ಚರಂಡಿಗಳ ಸ್ವಚ್ಚತೆ ಸೇರಿದಂತೆ ಇನ್ನಿತರ ಕೆಲಸ ಮಾಡುತ್ತಿರುವ ನೌಕರರ ಸಮಸ್ಯೆ ನಿವಾರಣೆಗಾಗಿ ಆಹಾರ ಕಿಟ್ ವಿತರಣೆ ಮಾಡಿದರು. ಶ್ರೀರಂಗಪಟ್ಟಣ ತಾಲೂಕಿನ ನೌಕರರು ಆಹಾರ ಕಿಟ್ ಸ್ವೀಕರಿಸಿದರು.

ABOUT THE AUTHOR

...view details