ಕರ್ನಾಟಕ

karnataka

ETV Bharat / state

ಯಾರ​ ಬಳಿಯೂ 10 ರೂಪಾಯಿ ಡೀಲ್​ ಮಾಡಿಲ್ಲ: ಸಚಿವ ನಾರಾಯಣಗೌಡ - Youth and Sports Department Minister Narayana Gowda

ನಾನು ಯಾರ ಬಳಿಯೂ ಡೀಲ್​ ಮಾಡಿಲ್ಲ. ರಾಜಕಾರಣ ಮಾಡಿಕೊಂಡು ಹೋಗುತ್ತಿದ್ದೇನೆ ಎಂದು ಸಚಿವ ನಾರಾಯಣಗೌಡ ಮಂಡ್ಯದಲ್ಲಿ ಹೇಳಿದ್ದಾರೆ.

Minister Narayana Gowda
ಸಚಿವ ನಾರಾಯಣಗೌಡ ಹೇಳಿಕೆ

By

Published : Jan 28, 2021, 5:11 PM IST

ಮಂಡ್ಯ: ಜಿಲ್ಲೆಯಲ್ಲಿ ಯಾರ ಹತ್ತಿರವೂ ಡೀಲ್ ಮಾಡಿಲ್ಲ. ಸುಳ್ಳು ಹೇಳಬಾರದು, ರಾಜಕಾರಣದಲ್ಲಿ ಮಾತ್ರ ಜಗಳವಾಡಿರಬಹುದು ಎಂದು ಸಚಿವ ನಾರಾಯಣಗೌಡ ಹೇಳಿದ್ದಾರೆ.

ಸಚಿವ ನಾರಾಯಣಗೌಡ

ಪಾಂಡವಪಟ್ಟಣದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊಡೋದು ತಗೋಳೋದು ಇರಬಹುದು. ಪುಟ್ಟರಾಜಣ್ಣ ಕಷ್ಟ ಕಾಲದಲ್ಲಿ ಸಹಾಯ ಮಾಡಿದ್ದಾರೆ. ಜಿಲ್ಲೆಯಲ್ಲಿ ಯಾರ ಹತ್ತಿರವೂ 10 ರೂಪಾಯಿ ಡೀಲ್ ಮಾಡಿಲ್ಲ.

ನನ್ನನ್ನು ಯುವಜನ ಮತ್ತು ಕ್ರೀಡಾ ಇಲಾಖೆ ಮಂತ್ರಿಯಾಗಿ ಮುಖ್ಯಮಂತ್ರಿ ಘೋಷಿಸಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಒಂದು ಕ್ರೀಡಾ ಸಮುಚ್ಚಯ, ಸುಸಜ್ಜಿತ ಕ್ರಿಕೆಟ್ ಕ್ರೀಡಾಂಗಣ ಹಾಗೂ ಒಂದು ಗಾಲ್ಫ್ ಕ್ರೀಡಾಂಗಣ ನಿರ್ಮಾಣದ ಗುರಿ ಇಟ್ಟುಕೊಂಡಿದ್ದೇನೆ ಎಂದರು.

ABOUT THE AUTHOR

...view details