ಮಂಡ್ಯ: ರಾಜಕೀಯ ಕಾರ್ಯಕ್ರಮಕ್ಕೆ ಅವಕಾಶ ನೀಡದಂತೆ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಕ್ಕೆ ಸೂಚನೆ ನೀಡಲಾಗಿದೆ. ವೇದಿಕೆ ಕಾರ್ಯಕ್ರಮ ಮಾಡಿ ಫುಡ್ ಕಿಟ್ ಹಂಚುವ ಅಗತ್ಯ ಇಲ್ಲ. ಇನ್ಮುಂದೆ ಮನೆ ಮನೆಗೆ ಹೋಗಿ ಫುಡ್ ಕಿಟ್ ಕೊಡುವ ಕೆಲಸ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣಗೌಡ ಸೂಚಿಸಿದರು.
ಇಂತಹ ಕಠಿಣ ಸಮಯದಲ್ಲಿ ರಾಜಕೀಯ ಕಾರ್ಯಕ್ರಮ ಬೇಡ: ಸಚಿವ ನಾರಾಯಣಗೌಡ - ಮಂಡ್ಯ ಲೇಟೆಸ್ಟ್ ನ್ಯೂಸ್
ಉರಿಯುತ್ತಿರುವ ಬೆಂಕಿಯನ್ನು ಆರಿಸುವಂತಹ ಕೆಲಸ ಮಾಡಬೇಕು. ಎಣ್ಣೆ, ತುಪ್ಪ ಸುರಿಯುವಂತಹ ಕೆಲಸ ಮಾಡಿದ್ರೆ ಕಷ್ಟವಾಗುತ್ತೆ. ಹೀಗಾಗಿ, ಇಂತಹ ಕಠಿಣ ಸಮಯದಲ್ಲಿ ಯಾವುದೇ ರಾಜಕೀಯ ಕಾರ್ಯಕ್ರಮ ಮಾಡುವುದು ಬೇಡ ಎಂದು ಸಚಿವ ನಾರಾಯಣಗೌಡ ಹೇಳಿದರು.
ಸಚಿವ ನಾರಾಯಣಗೌಡ
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಕಿ ಉರಿಯುತ್ತಿದೆ. ಈ ಸಂದರ್ಭದಲ್ಲಿ ಆರಿಸುವಂತಹ ಕೆಲಸ ಮಾಡಬೇಕು. ಎಣ್ಣೆ, ತುಪ್ಪ ಸುರಿಯುವಂತಹ ಕೆಲಸ ಮಾಡಿದ್ರೆ ಕಷ್ಟವಾಗುತ್ತೆ. ರಾಜಕಾರಣಿಗಳು ಸಹ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಜೊತೆಗೆ ಜಿಲ್ಲಾಧಿಕಾರಿ, ಎಸ್ಪಿ ಹಾಗೂ ತಹಶೀಲ್ದಾರ್ ಅವರಿಗೆ ಯಾವುದೇ ರಾಜಕೀಯ ಕಾರ್ಯಕ್ರಮಕ್ಕೆ ಅವಕಾಶ ಕೊಡಬೇಡಿ ಎಂದು ನಿರ್ದೇಶನ ನೀಡಿದರು.
ಇದನ್ನೂ ಓದಿ:Rekha Kadiresh Murder : ಬೆಂಗಳೂರಿನ ರೌಡಿಗಳ ಮನೆ ಮೇಲೆ ಪೊಲೀಸರ ದಾಳಿ