ಕರ್ನಾಟಕ

karnataka

ETV Bharat / state

ಹಾಲಿನ ದರ ಹೆಚ್ಚಳ: ಮಂಡ್ಯ ಜಿಲ್ಲೆಯ ರೈತರಿಗೆ ಮನ್​ಮುಲ್​ನಿಂದ ಸಿಹಿ ಸುದ್ದಿ

ಮನ್​ಮುಲ್​ನಿಂದ ಮಂಡ್ಯ ಜಿಲ್ಲೆಯ ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ ಸಿಕ್ಕಿದೆ. ಈ ಬಗ್ಗೆ ಆದೇಶ ಹೊರಡಿಸಿರುವ ಮನ್​ಮುಲ್ ಅಧ್ಯಕ್ಷ ಬಿ.ಆರ್. ರಾಮಚಂದ್ರ, ಹೊಸ ದರದಿಂದ ರೈತರಿಗೆ ಪ್ರತಿ ಲೀಟರ್​ಗೆ 28.50 ರೂಪಾಯಿ ಸಿಗಲಿದೆ ಎಂದು ತಿಳಿಸಿದ್ದಾರೆ.

ಹಾಲಿನ ದರ ಹೆಚ್ಚಳ,  Mann Mull, which has increased Rs 3.50 per liter Milk
ಹಾಲಿನ ದರ ಹೆಚ್ಚಳ

By

Published : Dec 18, 2019, 8:24 PM IST

ಮಂಡ್ಯ: ರೈತರಿಗೆ ಜಿಲ್ಲಾ ಹಾಲು ಒಕ್ಕೂಟ ಬಂಪರ್ ಗಿಫ್ಟ್ ಕೊಟ್ಟಿದೆ. ಮನ್​ಮುಲ್ ಪ್ರತಿ ಲೀಟರ್​ಗೆ 3.50 ರೂಪಾಯಿ ಹೆಚ್ಚಳ ಮಾಡಿದ್ದು, ಹೊಸ ವರ್ಷದಿಂದ ಹೊಸ ದರ ಜಾರಿಗೆ ಬರಲಿದೆ.

ಈ ಬಗ್ಗೆ ಆದೇಶ ಹೊರಡಿಸಿರುವ ಮನ್​ಮುಲ್ ಅಧ್ಯಕ್ಷ ಬಿ. ಆರ್. ರಾಮಚಂದ್ರ ಅವರು, ಹೊಸ ದರದಿಂದ ರೈತರಿಗೆ ಪ್ರತಿ ಲೀಟರ್​ಗೆ 28.50 ರೂಪಾಯಿ ಸಿಗಲಿದೆ. ಸಹಕಾರಿ ಸಂಘಗಳಿಗೆ ನಿರ್ವಹಣಾ ವೆಚ್ಚವಾಗಿ ಹೆಚ್ಚುವರಿಯಾಗಿ 10 ಪೈಸೆಯನ್ನು ಹೆಚ್ಚಳ ಮಾಡಲಾಗಿದೆ ಎಂದರು.

ಹಾಲಿನ ದರ ಹೆಚ್ಚಳ

ಸದ್ಯ ಲೀಟರ್ ಹಾಲಿಗೆ 25 ರೂ. ಮಾತ್ರ ಸಿಗುತ್ತಿತ್ತು. ಈಗ ದರ ಹೆಚ್ಚಳದಿಂದ ರೈತರಿಗೆ ಸಂತಸ ಮೂಡಿಸಿದೆ. ಮೆಗಾ ಡೈರಿ ಯೋಜನೆಯಡಿ ಹಾಲಿನ ದರವನ್ನು ಹಿಂದಿನ ಆಡಳಿತ ಮಂಡಳಿ ಕಡಿತ ಮಾಡಿತ್ತು. ಹೊಸ ಆಡಳಿತ ಮಂಡಳಿ ದರ ಹೆಚ್ಚಳ ಮಾಡುವ ಮೂಲಕ ರೈತರಿಗೆ ಗಿಫ್ಟ್ ನೀಡಿದೆ.

ABOUT THE AUTHOR

...view details