ಕರ್ನಾಟಕ

karnataka

ETV Bharat / state

ಮನ್ಮುಲ್ ಹಗರಣ ಬಗ್ಗೆ ಸಿಐಡಿ ತನಿಖೆ: ಪ್ರಕರಣ ಸಿಬಿಐಗೆ ವಹಿಸಲು ಜೋರಾಯ್ತು ಆಗ್ರಹ - ಖಾಸಗಿ ಡೈರಿ

ಹಳ್ಳಿಗಳಲ್ಲಿ ಸಂಗ್ರಹವಾಗುತ್ತಿದ್ದ ಹಾಲನ್ನು ಒಕ್ಕೂಟಕ್ಕೆ ಟ್ಯಾಂಕರ್​​​ಗಳಲ್ಲಿ ಪೂರೈಕ ಮಾಡುವಾಗ ಶೇ.30ರಷ್ಟು ಹಾಲನ್ನು ಖಾಸಗಿ ಡೈರಿಗಳಿಗೆ ಮಾರಾಟ ಮಾಡ್ತಿದ್ದ ವಂಚಕರು, ಉಳಿದ ಹಾಲಿಗೆ ನೀರು ಮಿಶ್ರಣ ಮಾಡಿ ಪ್ರತಿನಿತ್ಯ ಲಕ್ಷಾಂತರ ರೂಪಾಯಿ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು.

manmul Scam:
ಮನ್ಮುಲ್ ಹಗರಣ

By

Published : Jul 15, 2021, 10:52 PM IST

ಮಂಡ್ಯ: ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ನಡೆದಿದ್ದ ನೀರು ಬೆರೆಸಿದ ಹಾಲು ಪೂರೈಕೆ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ರೈತರ ಆಗ್ರಹಿಸುತ್ತಿದ್ದಾರೆ. ಈ ನಡುವೆ ಸಿಐಡಿ ಅಧಿಕಾರಿಗಳ ತಂಡ ಪ್ರಕರಣದ ತನಿಖೆ ಆರಂಭಿಸಿದ್ದು, ಮನ್ಮುಲ್ ಕಚೇರಿಗೆ ಭೇಟಿ ನೀಡಿ ಹಲವು ದಾಖಲೆಗಳನ್ನು ಸಂಗ್ರಹಿಸಿದೆ. ಇದರೊಂದಿಗೆ ಪೊಲೀಸರಿಂದಲೂ ಮಾಹಿತಿ ಕಲೆಹಾಕಿದ್ದಾರೆ.

ಹಳ್ಳಿಗಳಲ್ಲಿ ಸಂಗ್ರಹವಾಗುತ್ತಿದ್ದ ಹಾಲನ್ನು ಒಕ್ಕೂಟಕ್ಕೆ ಟ್ಯಾಂಕರ್​​​ಗಳಲ್ಲಿ ಪೂರೈಕ ಮಾಡುವಾಗ ಶೇ.30ರಷ್ಟು ಹಾಲನ್ನು ಖಾಸಗಿ ಡೈರಿಗಳಿಗೆ ಮಾರಾಟ ಮಾಡ್ತಿದ್ದ ವಂಚಕರು, ಉಳಿದ ಹಾಲಿಗೆ ನೀರು ಮಿಶ್ರಣ ಮಾಡಿ ಪ್ರತಿನಿತ್ಯ ಲಕ್ಷಾಂತರ ರೂಪಾಯಿ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು.

ಮನ್ಮುಲ್ ಹಗರಣ ಸಿಬಿಐಗೆ ವಹಿಸಲು ಕೇಳಿಬರುತ್ತಿದೆ ಕೂಗು

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಪರಸ್ಪರ ವಾಕ್ಸಮರ ಆರಂಭಿಸಿ ಆರೋಪ-ಪ್ರತ್ಯಾರೋಪಕ್ಕೆ ಇಳಿದು ರಾಜಕೀಯ ಬಣ್ಣ ಪಡೆದುಕೊಂಡಿತ್ತು. ಜೊತೆಗೆ ಸಿಐಡಿ ತನಿಖೆ ಬೇಡ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ರೈತರು ಆಗ್ರಹಿಸಿದ್ದರು. ಇದಕ್ಕೆ ಸಂಸದೆ ಸುಮಲತಾ ಸಹ ಸಾಥ್ ನೀಡಿದ್ದರು.

ಸಿಐಡಿ ತನಿಖೆ ಚುರುಕು

ಒತ್ತಡ ಹೆಚ್ಚಾದ ಬಳಿಕ ರಾಜ್ಯ ಸರ್ಕಾರ ಸಿಐಡಿಗೆ ಪ್ರಕರಣದ ತನಿಖೆಯ ಜವಾಬ್ದಾರಿ ನೀಡಿತ್ತು. ಇತ್ತ ಮನ್ಮುಲ್​ಗೆ ಭೇಟಿ ನೀಡಿದ್ದ ಸಿಐಡಿ ಅಧಿಕಾರಿ ತಂಡ ವ್ಯವಸ್ಥಾಪಕ ನಿರ್ದೇಶಕರಿಂದ ಮಾಹಿತಿ ಪಡೆದುಕೊಂಡಿತು. ಬಳಿಕ ಮದ್ದೂರು ಪೊಲೀಸ್ ಠಾಣೆಗೆ ಭೇಟಿ ನೀಡಿ ವಶಪಡಿಸಿಕೊಂಡಿರುವ ಟ್ಯಾಂಕರ್​​ಗಳನ್ನು ಪರಿಶೀಲನೆ ಮಾಡಿ ಈವರೆಗೆ ನಡೆದಿರುವ ತನಿಖೆಯ ಸಂಪೂರ್ಣ ವರದಿಯನ್ನು ಪಡೆದುಕೊಂಡಿದ್ದಾರೆ.

ಸಿಐಡಿ ತನಿಖೆಯಿಂದ ತಪ್ಪಿತಸ್ಥರಿಗೆ ಶಿಕ್ಷೆಯಾಗುವ ವಿಶ್ವಾಸ ವ್ಯಕ್ತಪಡಿಸಿರುವ ಮನ್ಮುಲ್ ಆಡಳಿತ ಮಂಡಳಿ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದೆ. ಒಟ್ಟಾರೆ ಕೆಲವು ವರ್ಷಗಳಿಂದ ನಡೆಯುತ್ತಿರುವ ಹಾಲಿಗೆ ನೀರು ಬೆರೆಸಿ ವಂಚನೆ ಹಗರಣದಲ್ಲಿ ಮಮ್ಮುಲ್​ಗೆ ನೂರಾರು ಕೋಟಿ ನಷ್ಟವಾಗಿದೆ ಎನ್ನಲಾಗುತ್ತಿದ್ದು, ಆಡಳಿತ ಮಂಡಳಿಯ ನಿರ್ದೇಶಕರು ಹಾಗೂ ಅಧಿಕಾರಿಗಳು ಸಹ ಭಾಗಿಯಾಗಿದ್ದಾರೆಂಬ ಆರೋಪವೂ ದಟ್ಟವಾಗಿದೆ. ತನಿಖೆಯ ಬಳಿಕವಷ್ಟೇ ಸತ್ಯಾಸತ್ಯತೆ ಹೊರಬರಬೇಕಿದೆ.

ಇದನ್ನೂ ಓದಿ:ಮಂಡ್ಯದ ಮನ್ಮುಲ್​ ನೀರು ಮಿಶ್ರಿತ ಹಾಲು ಹಗರಣ ಕೇಸ್: CID ತನಿಖೆ ಶುರು

ABOUT THE AUTHOR

...view details