ಕರ್ನಾಟಕ

karnataka

ETV Bharat / state

ಪಲ್ಸ್ ಪೋಲಿಯೋ ಅಭಿಯಾನಕ್ಕೆ ಸಹಕರಿಸದೇ, ಕಿರಿಕ್ ಮಾಡಿದ ನಗರಸಭೆ ಸದಸ್ಯೆ..

ನಗರಸಭೆ ಸದಸ್ಯೆಯ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿರುವ ಅಂಗನವಾಡಿ, ಆಶಾ, ಆರೋಗ್ಯ ಕಾರ್ಯಕರ್ತೆಯರು, ಹಿಂದೆಲ್ಲ ನಗರಸಭೆ ಕಾಂಪ್ಲೆಕ್ಸ್ ನಲ್ಲಿರುವ ಸದಸ್ಯರ ಕಚೇರಿಯಲ್ಲೇ ಪೋಲಿಯೋ ಹಾಕುತ್ತಿದ್ದೆವು..

Pulse Polio campaign
ಕಿರಿಕ್ ಮಾಡಿದ ವಾರ್ಡ್ ಸದಸ್ಯೆ

By

Published : Jan 31, 2021, 3:55 PM IST

Updated : Jan 31, 2021, 4:10 PM IST

ಮಂಡ್ಯ :ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನಕ್ಕೆ ನಗರಸಭೆ ಸದಸ್ಯೆ ಸಹಕರಿಸದೆ ಉದ್ಧಟತನ‌ ಮಾಡಿರುವ ಘಟನೆ ನಡೆದಿದೆ.

ಪೊಲೀಯೋ ಅಭಿಯಾನಕ್ಕೆ ಕಿರಿಕ್ ಮಾಡಿದ ನಗರಸಭೆ ಸದಸ್ಯೆ

ಓದಿ: ಇನ್ಮುಂದೆ ಅಮೇಜಾನ್​​​ನಲ್ಲಿ ಮಾರಾಟ ಮಾಡಲು ಕನ್ನಡ ಬಂದ್ರೆ ಸಾಕು!!

ಮಂಡ್ಯ ನಗರಸಭೆಯ 15ನೇ ವಾರ್ಡ್ ಸದಸ್ಯೆಯ ಉದ್ಧಟತನದಿಂದ, ಕುವೆಂಪು ನಗರದ ಬಲಮುರಿ ಗಣಪತಿ ದೇವಾಲಯದ ಬಳಿ ಇರುವ ಕಾಂಪ್ಲೆಕ್ಸ್‌ನಲ್ಲಿ ‌ಸದಸ್ಯರ ಕಚೇರಿ ಬಿಟ್ಟು ಕೊಡದೆ ಕಿರಿಕ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

15ನೇ ವಾರ್ಡ್ ಸದಸ್ಯೆ ಮೀನಾಕ್ಷಿ ಕಿರಿಕ್ ಮಾಡಿದ್ದು, ಸದಸ್ಯೆಯ ಉದ್ಧಟತನಕ್ಕೆ ಬೇಸತ್ತ ಅಂಗನವಾಡಿ, ಆಶಾ, ಆರೋಗ್ಯ ಕಾರ್ಯಕರ್ತೆಯರು ಅಂತಿಮವಾಗಿ ಅಂಗನವಾಡಿಯಲ್ಲೇ ಪೋಲಿಯೋ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.

ಫೊಲಿಯೋ ಅಭಿಯಾನಕ್ಕೆ ಕಿರಿಕ್ ಮಾಡಿದ ನಗರಸಭೆ ಸದಸ್ಯೆ..

ನಗರಸಭೆ ಸದಸ್ಯೆಯ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸಿರುವ ಅಂಗನವಾಡಿ, ಆಶಾ, ಆರೋಗ್ಯ ಕಾರ್ಯಕರ್ತೆಯರು, ಹಿಂದೆಲ್ಲ ನಗರಸಭೆ ಕಾಂಪ್ಲೆಕ್ಸ್‌ನಲ್ಲಿರುವ ಸದಸ್ಯರ ಕಚೇರಿಯಲ್ಲೇ ಪೋಲಿಯೋ ಹಾಕುತ್ತಿದ್ದೆವು ಎಂದು ತಿಳಿಸಿದರು.

Last Updated : Jan 31, 2021, 4:10 PM IST

ABOUT THE AUTHOR

...view details