ಮಂಡ್ಯ: ಕೊರೊನಾ ಹಿನ್ನೆಲೆ ಮಂಡ್ಯ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ.
ಹೆದ್ದಾರಿಯಲ್ಲಿ ತಪಾಸಣೆಗೆ ಇಳಿದ ಪೊಲೀಸರು: ಅನವಶ್ಯಕವಾಗಿ ಬಂದವರಿಗೆ ಕ್ಲಾಸ್
ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ವಾಹನಗಳ ತಪಾಸಣೆ ನಡೆಸುತ್ತಿದ್ದು, ಅನವಶ್ಯಕವಾಗಿ ಸಂಚಾರ ಮಾಡುತ್ತಿರುವ ವಾಹನ ಸವಾರರಿಗೆ ಕ್ಲಾಸ್ ತೆಗೆದುಕೊಂಡು ವಾಹನಗಳನ್ನು ವಶಕ್ಕೆ ಪಡೆಯುತ್ತಿದ್ದಾರೆ.
ಹೆದ್ದಾರಿಯಲ್ಲಿ ತಪಾಸಣೆಗೆ ಇಳಿದ ಪೊಲೀಸರು
ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿ ವಾಹನಗಳ ತಪಾಸಣೆ ನಡೆಸುತ್ತಿದ್ದು, ಅನಾವಶ್ಯಕವಾಗಿ ಸಂಚಾರ ಮಾಡುತ್ತಿರುವ ವಾಹನ ಸವಾರರಿಗೆ ಕ್ಲಾಸ್ ತೆಗೆದುಕೊಂಡು ವಾಹನಗಳ ವಶಕ್ಕೆ ಪಡೆಯುತ್ತಿದ್ದಾರೆ.
ನಗರದ ಮಿಮ್ಸ್ ಎದುರು ಸೇರಿದಂತೆ ಮಂಡ್ಯ ನಗರ ವ್ಯಾಪ್ತಿಯಲ್ಲಿ ವಾಹನ ಸವಾರರ ತಪಾಸಣೆ ಮಾಡಲಾಗುತ್ತಿದೆ. ಹೊರ ಹೋಗುತ್ತಿರುವ ಹಾಗೂ ಒಳ ಬರುತ್ತಿರುವ ಸವಾರರ ತಪಾಸಣೆ ನಡೆಸಿ, ಸಂಚಾರಕ್ಕೆ ಕಾರಣ ತಿಳಿದು ಬಿಡಲಾಗುತ್ತಿದೆ. ಅನವಶ್ಯಕವಾಗಿ ಬರುತ್ತಿರುವ ವಾಹನಗಳನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ.