ಮಂಡ್ಯ: ಗ್ರಾಮ ಪಂಚಾಯಿತಿ ಚುನಾವಣೆ ಡಿಸೆಂಬರ್ 22ರಂದು ಮೊದಲನೇ ಹಂತದಲ್ಲಿ ಮಂಡ್ಯ, ಮದ್ದೂರು, ಮಳವಳ್ಳಿ ತಾಲೂಕು ವ್ಯಾಪ್ತಿಯಲ್ಲಿ ನಡೆಯಲಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ.
ಮೊದಲನೇ ಹಂತದ ಗ್ರಾಪಂ ಚುನಾವಣೆ: ಮತಗಟ್ಟೆಗೆ ತೆರಳಲು ಅಧಿಕಾರಿಗಳಿಗೆ ಡಿಸಿ ಸೂಚನೆ - ಮಂಡ್ಯ ಗ್ರಾಮ ಪಂಚಾಯತಿ ಚುನಾವಣೆ
ಡಿಸೆಂಬರ್ 22ರಂದು ಮೊದಲನೇ ಹಂತದಲ್ಲಿ ಮಂಡ್ಯ, ಮದ್ದೂರು, ಮಳವಳ್ಳಿ ತಾಲೂಕು ವ್ಯಾಪ್ತಿಯಲ್ಲಿ ಮತದಾನ ನಡೆಯಲಿದ್ದು, ಮತಗಟ್ಟೆ ಅಧಿಕಾರಿಗಳು ಡಿಸೆಂಬರ್ 21ರಂದು ಬೆಳಗ್ಗೆ 6 ಗಂಟೆಗೆ ಹಾಜರಾಗಿ ನಿಯೋಜಿಸಲ್ಪಟ್ಟ ತಾಲೂಕಿಗೆ ಪ್ರಯಾಣಿಸಿ ಚುನಾವಣಾ ಕರ್ತವ್ಯವನ್ನು ನಿರ್ವಹಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಡ್ಯ ಡಿಸಿ
ಚುನಾವಣಾ ಕಾರ್ಯಕ್ಕೆ ಮತಗಟ್ಟೆ ಸಿಬ್ಬಂದಿಯನ್ನು ಈಗಾಗಲೇ ನೇಮಕ ಮಾಡಲಾಗಿದೆ. ಮಂಡ್ಯ, ಮದ್ದೂರು, ಮಳವಳ್ಳಿ ತಾಲೂಕುಗಳಿಗೆ ನೇಮಕವಾಗಿರುವ ಮತಗಟ್ಟೆ ಸಿಬ್ಬಂದಿಗೆ ಪ್ರಯಾಣಿಸಲು ಮಂಡ್ಯ ತಾಲೂಕಿನ ಮಸ್ಟರಿಂಗ್ ಕೇಂದ್ರದಿಂದ (ಸರ್ಕಾರಿ ಮಹಾವಿದ್ಯಾಲಯ(ಸ್ವಾಯತ್ತ) ಕೆ.ಎಸ್.ಆರ್.ಟಿ.ಸಿ ಬಸ್ಸಿನ ವ್ಯವಸ್ಥೆ ಇರುತ್ತದೆ.
ಮತಗಟ್ಟೆ ಅಧಿಕಾರಿಗಳು ಡಿಸೆಂಬರ್ 21ರಂದು ಬೆಳಗ್ಗೆ 6 ಗಂಟೆಗೆ ಹಾಜರಾಗಿ ನಿಯೋಜಿಸಲ್ಪಟ್ಟ ತಾಲೂಕಿಗೆ ಪ್ರಯಾಣಿಸಿ ಚುನಾವಣಾ ಕರ್ತವ್ಯವನ್ನು ನಿರ್ವಹಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.