ಮಂಡ್ಯ:ಕಾವೇರಿ ಕೂಗಿಗೆ ಧ್ವನಿ ಜೋರಾಗುತ್ತಿದೆ. ಯುವ ಜನತೆ ಜೊತೆಗೆ ಸಕ್ಕರೆ ಜಿಲ್ಲೆಯ ರೈತರೂ ಕೈಗೂಡಿಸಿದ್ದಾರೆ. ಈಗ ಜಿಲ್ಲಾಡಳಿತವೂ ಕೂಡಾ ಗಿಡ ನೆಡಲು ಕೈಜೋಡಿಸಿದ್ದು ಪ್ಲಾನ್ ರೆಡಿ ಮಾಡಿಕೊಂಡಿದೆ. ಇದೀಗ ಕಾವೇರಿ ಕೊಳ್ಳದ ಉಪ ನದಿಗಳ ಇಕ್ಕೆಲಗಳಲ್ಲಿ ಮಹಾತ್ಮಾ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಗಿಡ ನೆಡಲು ರೈತರಿಗೆ ಆಹ್ವಾನ ನೀಡಿದೆ.
ನಗರದಲ್ಲಿ ಇಂದು ನಡೆದ ಕಾವೇರಿ ಕೂಗು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಈ ಯೋಜನೆ ಬಗ್ಗೆ ತಿಳಿಸಿದರು. ಲೋಕಪಾವನಿ, ಶಿಂಷಾ ಹಾಗೂ ಮಾರ್ಕಾಂಡೇಯ ನದಿ ವ್ಯಾಪ್ತಿಯಲ್ಲಿ ಗಿಡ ನೆಡಲು ಆಕ್ಷನ್ ಪ್ಲಾನ್ ರೆಡಿ ಮಾಡಿದ್ದು, ಸರ್ಕಾರ ಒಪ್ಪಿದರೆ ಉದ್ಯೋಗ ಖಾತರಿ ಯೋಜನೆಯಡಿ ಹಣ ಕೊಟ್ಟು ಗಿಡ ನೆಡಲು ಕಾರ್ಯಕ್ರಮ ಜಾರಿಗೆ ತರಲಿದ್ದೇವೆ ಎಂದರು.