ಮಂಡ್ಯ: ಮೂವರು ಅರ್ಚಕರ ಹತ್ಯೆ ಹಿನ್ನೆಲೆ ಒಂದು ತಿಂಗಳ ಕಾಲ ಬಂದ್ ಆಗಿದ್ದ ಅರ್ಕೇಶ್ವರ ದೇವಾಲಯದಲ್ಲಿ ಇಂದಿನಿಂದ ಭಕ್ತರಿಗೆ ಪೂಜೆಗೆ ಅವಕಾಶ ಮಾಡಿಕೊಡಲಾಗಿದೆ.
ಜಿಲ್ಲಾಡಳಿತ ಮತ್ತು ಮುಜರಾತಿ ಇಲಾಖೆ ವತಿಯಿದಿಂದ ದೇವಾಲಯಕ್ಕೆ ಸುಣ್ಣಬಣ್ಣ ಬಳಿದು, ಶುದ್ಧೀಕರಣ ನಡೆದಿದ್ದು, ಕಳೆದ 3 ದಿನದಿಂದ ಹೋಮ ಹವನ ನೆರವೇರಿಸಿ ಇಂದು ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಯಿತು.
ಅರ್ಚಕರ ಕೊಲೆ ನಂತರ ಶುದ್ಧಿಗೊಂಡ ದೇವಾಲಯ ಸೆಪ್ಟೆಂಬರ್ 10ರ ಮಧ್ಯರಾತ್ರಿ ಮೂವರು ಅರ್ಚಕರ ಕೊಲೆ ನಡೆದಿತ್ತು. ಮೃತದೇಹ ಬಿದ್ದಿದ್ದ ಜಾಗದಲ್ಲಿ 4 ಅಡಿ ಮಣ್ಣು ತೆಗೆದು ನಾರಾಯಣ ಬಲಿ ಪೂಜೆ ಸೇರಿದಂತೆ ಹಲವು ಹೋಮ ಹವನ ನೆರವೇರಿಸಲಾಗಿದೆ.
ಕೊಲೆ ನಡೆದ ಬಳಿಕ ಎಚ್ಚೆತ್ತುಕೊಂಡ ಮುಜರಾಯಿ ಇಲಾಖೆ: ದೇವಾಲಯದಲ್ಲಿ 360 ಡಿಗ್ರಿ ಚಿತ್ರೀಕರಿಸುವ ಸಿಸಿಟಿವಿ ಅಳವಡಿಸಲಾಗಿದೆ. ಇದನ್ನು ವೇಬ್ ಕ್ಯಾಮರ ಸಿಸ್ಟಮ್ಗೆ ಸಂಪರ್ಕಿಸಲಾಗಿದೆ.
ದೇವಾಲಯದ ರಕ್ಷಣೆಗಾಗಿ 6 ಮಂದಿ ಗನ್ ಮ್ಯಾನ್ ನೇಮಕ ಹಾಗೂ ಮೃತ ಅರ್ಚಕರ ಕುಟುಂಬದ ತಲಾ ಒಬ್ಬರಿಗೆ ಕೆಲಸ ನೀಡಲು ಚಿಂತನೆ ಮಾಡಲಾಗಿದೆ.
ಕೊವಿಡ್ ಮುಂಜಾಗ್ರತಾ ಕ್ರಮದೊಂದಿಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಕೊರೊನಾ ನಿಯಮಾವಳಿಯಂತೆಯೇ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ್ದು, ಭಕ್ತರು ತಿಂಗಳ ನಂತರ ದೇವಾಲಯದ ಕಡೆ ಮುಖ ಮಾಡಿದ್ದಾರೆ.