ಕರ್ನಾಟಕ

karnataka

ETV Bharat / state

ಕಾವೇರಿ ನದಿ ಸೇತುವೆ ಕೆಳಗೆ ಯುವಕನ ಶವ ಪತ್ತೆ : ಕೊಲೆ ಶಂಕೆ - young man deadbody found news

ಈ ಸಂಬಂಧ ಕೆಆರ್​ಎಸ್​ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕೊಲೆ ಮಾಡಿ ಅಪಘಾತದ ರೀತಿ ಬಿಂಬಿಸಲು ಮಾಡಿರುವ ಕೃತ್ಯ ಇರಬೇಕೆಂಬ ಅನುಮಾನದ ಹಿನ್ನೆಲೆ ತನಿಖೆ ಕೈಗೊಂಡಿದ್ದಾರೆ..

death
death

By

Published : May 22, 2021, 4:59 PM IST

ಮಂಡ್ಯ: ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಗ್ರಾಮದ ಬಳಿ ಕಾವೇರಿ ನದಿ ಸೇತುವೆ ಕೆಳಗೆ ಬೈಕ್ ಹಾಗೂ ರಕ್ತಸಿಕ್ತ ಸ್ಥಿತಿಯಲ್ಲಿ ಶವವೊಂದು ಪತ್ತೆಯಾಗಿದೆ.

KRS ಬೃಂದಾವನದ ಕಾವೇರಿ ನದಿ ಸೇತುವೆ ಕೆಳಗೆ ಬೈಕ್ ಹಾಗೂ ಯುವಕನ‌ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಹೊಂಗಳ್ಳಿ ಗ್ರಾಮದ ಅಶೋಕ್(39) ಎಂದು ಗುರುತಿಸಲಾಗಿದೆ. ಶವದ ಮೇಲೆ ರಕ್ತದ ಕಲೆ ಇದ್ದು, ಪೊಲೀಸರು ಕೊಲೆ ಇರಬಹುದೆಂಬ ಶಂಕೆ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಕೆಆರ್​ಎಸ್​ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕೊಲೆ ಮಾಡಿ ಅಪಘಾತದ ರೀತಿ ಬಿಂಬಿಸಲು ಮಾಡಿರುವ ಕೃತ್ಯ ಇರಬೇಕೆಂಬ ಅನುಮಾನದ ಹಿನ್ನೆಲೆ ತನಿಖೆ ಕೈಗೊಂಡಿದ್ದಾರೆ.

ABOUT THE AUTHOR

...view details