ಮಂಡ್ಯ:ಪುಲ್ವಾಮದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮನಾದ ಜಿಲ್ಲೆಯ ವೀರ ಯೋಧ ಗುರು ಅವರಿಗೆ ತಂಗಿ ಎಂದರೆ ಪ್ರಾಣ. ಕರ್ತವ್ಯಕ್ಕೆ ಮರಳುವ ಮೊದಲು ತಂಗಿಯ ಹುಟ್ಟುಹಬ್ಬ ಆಚರಣೆ ಮಾಡಿ ನಂತರ ಕರ್ತವ್ಯಕ್ಕೆ ತೆರಳಿದ್ದ ಎಂಬ ಮಾಹಿತಿ ತಿಳಿದು ಬಂದಿದೆ.
ತಂಗಿಯ ಹುಟ್ಟುಹಬ್ಬ ಆಚರಿಸಿ ಕರ್ತವ್ಯಕ್ಕೆ ತೆರಳಿದ್ದ ಯೋಧ ಗುರು...
ಚಿಕ್ಕಮ್ಮನ ಊರಿಗೆ ಹೋಗಿ, ತಂಗಿಯಿಂದ ಕೇಕ್ ಕಟ್ ಮಾಡಿಸಿದ್ದ ಗುರು, ಹುಟ್ಟುಹಬ್ಬದ ಶುಭಾಶಯ ತಿಳಿಸಿ ಕರ್ತವ್ಯಕ್ಕೆ ಹೋಗಿದ್ದರಂತೆ. ಭಾನುವಾರದವರೆಗೂ ಗ್ರಾಮದಲ್ಲೇ ಇದ್ದ ಗುರು, ರಜೆಯನ್ನು ಮುಗಿಸಿ ಕಾಶ್ಮೀರಕ್ಕೆ ತೆರಳಿದ್ದರು.
ಯೋಧ ಗುರು
ಚಿಕ್ಕಮ್ಮನ ಊರಿಗೆ ಹೋಗಿ, ತಂಗಿಯಿಂದ ಕೇಕ್ ಕಟ್ ಮಾಡಿಸಿದ್ದ ಗುರು, ಹುಟ್ಟುಹಬ್ಬದ ಶುಭಾಶಯ ತಿಳಿಸಿ ಕರ್ತವ್ಯಕ್ಕೆ ಹೋಗಿದ್ದರಂತೆ. ಭಾನುವಾರದವರೆಗೂ ಗ್ರಾಮದಲ್ಲೇ ಇದ್ದ ಗುರು, ರಜೆಯನ್ನು ಮುಗಿಸಿ ಕಾಶ್ಮೀರಕ್ಕೆ ಹೋಗಿದ್ದರು. ಆದರೆ ವಿಧಿಯ ಆಟವೇ ಬೇರೆ ಇತ್ತು. ತಂಗಿಗೆ ವಿಶ್ ಮಾಡಿ ಹೋದ ಗುರು, ಮತ್ತೆ ಬಾರದ ಲೋಕಕ್ಕೆ ತೆರಳಿದ್ದಾರೆ.
ಹುತಾತ್ಮನಾದ ಯೋಧ ಗುರು ನೆನೆದು ಇಡೀ ಕುಟುಂಬ ದುಃಖದ ಮಡುವಿನಲ್ಲಿ ಮುಳುಗಿದೆ. ಪತ್ನಿ, ತಾಯಿ, ಚಿಕ್ಕಮ್ಮ, ತಂದೆ ಹಾಗೂ ಸಹೋದರರು ಕಣ್ಣೀರಿನಲ್ಲೇ ಮುಳುಗಿದ್ದಾರೆ.