ಕರ್ನಾಟಕ

karnataka

ETV Bharat / state

ಸ್ವಾಭಿಮಾನದ ಮತ ನೀಡಿ ಸುಮಲತಾ ಗೆಲ್ಲಿಸಿ: ದರ್ಶನ್​ ಕರೆ - Road Show, darshan, mandya, ಮಂಡ್ಯ, ಮಳವಳ್ಳಿ, ರೋಡ್ ಶೋ, ಸುಮಲತಾ ಅಂಬರೀಶ್, ದರ್ಶನ್​, ಲೋಕಸಭಾ ಚುನಾವಣೆ, etv bharat, kannada news

ಪ್ರತಿಯೊಂದು ಪ್ರಾಣಿ ಪಕ್ಷಿಗಳಿಗೆ ಒಂದೊಂದು ಬೆಲೆಯಿದೆ ಕೇವಲ 500ಕ್ಕೆ ನಮ್ಮನ್ನ ನಾವು ಮಾರಾಟ ಮಾಡಿಕೊಳ್ಳಬಾರದು. ಹಣದ ಆಮಿಷಕ್ಕೆ ಬಲಿಯಾಗಬೇಡಿ.ಕುತಂತ್ರದಿಂದ ಸಾಕಷ್ಟು ಸುಮಲತಾ ಚುನಾವಣಾ ಸ್ಪರ್ಧೆಯಲ್ಲಿದ್ದಾರೆ. ಆದರೆ ಸುಮಲತಾ ಅಂಬರೀಶ್​ ಒಬ್ಬರೇ ಆದ್ದರಿಂದ ಯಾವುದೇ ಗೊಂದಲಕ್ಕೊಳಗಾಗದೆ ಕ್ರಮ ಸಂಖ್ಯೆ 20ಕ್ಕೆ ಮತ ಚಲಾಯಿಸಿ ಎಂದು ದರ್ಶನ್​ ಕರೆ ನೀಡಿದರು.

ದರ್ಶನ್ ರೋಡ್​ ಶೋ

By

Published : Apr 12, 2019, 3:49 PM IST

ಮಂಡ್ಯ: ಅಭಿಮಾನ ಕೇವಲ ತೋರ್ಪಡಿಕೆಗಾಗದೆ ನೀವೆಲ್ಲರೂ ಸ್ವಾಭಿಮಾನದ ಮತ ಚಲಾವಣೆ ಮಾಡಿ ಸುಮಲತಾ ಅಂಬರೀಶ್ ಅವರನ್ನು ಗೆಲ್ಲಿಸುವ ಮೂಲಕ ಸ್ವಾಭಿಮಾನದ ಕಹಳೆ ಮೊಳಗಿಸಿ ಎಂದು ನಟ ದರ್ಶನ್​​ ಕರೆ ನೀಡಿದರು.

ಮಂಡ್ಯ ಜಿಲ್ಲೆಯ ಮಳವಳ್ಳಿಯ ಮುಖ್ಯ ರಸ್ತೆಯಲ್ಲಿ ರೋಡ್ ಶೋ ನಡೆಸಿ ಸುಮಲತಾ ಅಂಬರೀಶ್ ಪರ ಮತಯಾಚಿಸಿದ ಅವರು ಅಂಬಿ ಅಪ್ಪಾಜಿ ನಿಮ್ಮ ನಡುವೆ ತಲೆ ತಗ್ಗಿಸಿ ಬೆಳೆದವರು. ಆದರೆ ಸಿನಿಮಾ ರಂಗದಲ್ಲಿ ತಲೆ ಎತ್ತಿ ಬೆಳೆದವರು. ಅವರು ದಾನ ಶೂರ ಕರ್ಣರಂತೆ‌ ಬಲಗೈಯಲ್ಲಿ ಕೊಟ್ಟದ್ದು ಎಡಗೈಗೆ ಗೊತ್ತಾಗದಂತೆ ಬದುಕಿದರು. ನಾನು ಬೆಳೆಸಿದೆ, ನನ್ನಿಂದ ಎಲ್ಲ ಆಗಿದೆ ಎಂದು ಎಲ್ಲೂ ಹೇಳಲಿಲ್ಲ. ಇರುವಷ್ಟು ದಿನ ನಿಮ್ಮ ಸೇವೆ ಮಾಡಿದ್ದಾರೆ. ಈಗ ಸುಮಲತಾ ಅವರನ್ನು ಗೆಲ್ಲಿಸುವ ಮೂಲಕ ತಮ್ಮ ಸೇವೆ ಮುಂದುವರಿಸಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.

ದರ್ಶನ್ ರೋಡ್​ ಶೋ

ಇದೇ ವೇಳೆ ಪ್ರತಿಯೊಂದು ಪ್ರಾಣಿ ಪಕ್ಷಿಗಳಿಗೆ ಒಂದೊಂದು ಬೆಲೆಯಿದೆ ಕೇವಲ 500ಕ್ಕೆ ನಮ್ಮನ್ನ ನಾವು ಮಾರಾಟ ಮಾಡಿಕೊಳ್ಳಬಾರದು. ಹಣದ ಆಮಿಷಕ್ಕೆ ಬಲಿಯಾಗಬೇಡಿ.ಕುತಂತ್ರದಿಂದ ಸಾಕಷ್ಟು ಸುಮಲತಾ ಚುನಾವಣಾ ಸ್ಪರ್ಧೆಯಲ್ಲಿದ್ದಾರೆ. ಆದರೆ ಸುಮಲತಾ ಅಂಬರೀಶ್​ ಒಬ್ಬರೇ ಆದ್ದರಿಂದ ಯಾವುದೇ ಗೊಂದಲಕ್ಕೊಳಗಾಗದೆ ಕ್ರಮ ಸಂಖ್ಯೆ 20ಕ್ಕೆ ಮತ ಚಲಾಯಿಸಿ ಎಂದು ತಮ್ಮ ಅಭಿಮಾನಿಗಳಿಗೆ ಕರೆ ನೀಡಿದರು.

ಸುಮಾರು ಮೂರು ಗಂಟೆಗಳ‌ ಕಾಲ ಹೆದ್ದಾರಿ ರೋಡ್ ಶೋ ನಡೆಸಿದ ದರ್ಶನ್ ಗೆ ಅಭಿಮಾನಿಗಳ‌ಸನ್ಮಾನ, ಅಭಿನಂದನೆಗಳ‌ ಮಹಾಪೂರವೇ ಹರಿದು ಬಂತು.

For All Latest Updates

ABOUT THE AUTHOR

...view details