ಕರ್ನಾಟಕ

karnataka

By

Published : Nov 28, 2019, 3:51 PM IST

ETV Bharat / state

ಚುನಾವಣಾ ಪ್ರಚಾರದ ಆರೋಪ: ಸಾಕ್ಷಿ ಸಮೇತ ಉತ್ತರ ಕೊಟ್ಟ ಶಿಕ್ಷಕ

ಕೆ.ಆರ್. ಪೇಟೆ ವಿಧಾನಸಭೆಯ ಉಪಚುನಾವಣೆಯಲ್ಲಿ ತೆಂಡೆಕೆರೆಯ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ದಾನಸುಂದರ್ ಎಂಬುವರು ಜೆಡಿಎಸ್ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ಫೋಟೊ, ವಿಡಿಯೋ ಸಮೇತ ಚುನಾವಣಾಧಿಕಾರಿಗೆ ದೂರು ನೀಡಲಾಗಿತ್ತು. ದೂರಿನ ಹಿನ್ನೆಲೆ ಶಿಕ್ಷಕ ದಾನಸುಂದರ್​ಗೆ ನೋಟಿಸ್ ನೀಡಿ, 24 ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ಚುನಾವಣಾ ಆಯೋಗದಿಂದ ಶೋಕಾಸ್​ ನೋಟಿಸ್​ ನೀಡಲಾಗಿತ್ತು. ಇದಕ್ಕೆ ಶಿಕ್ಷಕನೇ ಸಾಕ್ಷಿ ಸಮೇತ ಚುನಾವಣಾ ಆಯೋಗಕ್ಕೆ ಸ್ಪಷ್ಟನೆ ನೀಡಿದ್ದಾರೆ.

k.r.pete: Notice to Teachers by Electoral Officer
ಚುನಾವಣಾ ಪ್ರಚಾರದ ಆರೋಪ: ಸಾಕ್ಷಿ ಸಮೇತ ಉತ್ತರ ಕೊಟ್ಟ ಶಿಕ್ಷಕ

ಮಂಡ್ಯ: ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಮಾಡಿದ್ದಾರೆ ಎಂದು ಆರೋಪಿಸಿ ಸರ್ಕಾರಿ ಶಾಲೆ ಶಿಕ್ಷಕರಿಗೆ ಚುನಾವಣಾಧಿಕಾರಿ ನೋಟಿಸ್ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ನೋಟಿಸ್ ನೀಡಿದ ಕೇವಲ 12 ಗಂಟೆಯೊಳಗೆ ಶಿಕ್ಷಕ ತನ್ನದೇ ರೀತಿ ಕಾಣುವ ಮತ್ತೋರ್ವ ವ್ಯಕ್ತಿಯನ್ನು ಜೊತೆಯಲ್ಲಿ ಕರೆತಂದು ಉತ್ತರ ನೀಡಿದ ಘಟನೆ ಕೆ.ಆರ್. ಪೇಟೆ ಕ್ಷೇತ್ರದಲ್ಲಿ ನಡೆದಿದೆ.

ಚುನಾವಣಾ ಪ್ರಚಾರದ ಆರೋಪ: ಸಾಕ್ಷಿ ಸಮೇತ ಉತ್ತರ ಕೊಟ್ಟ ಶಿಕ್ಷಕ

ಕೆ.ಆರ್. ಪೇಟೆ ವಿಧಾನಸಭೆಯ ಉಪಚುನಾವಣೆಯಲ್ಲಿ ತೆಂಡೆಕೆರೆಯ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ದಾನಸುಂದರ್ ಎಂಬುವರು ಜೆಡಿಎಸ್ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ಫೋಟೊ, ವಿಡಿಯೋ ಸಮೇತ ಚುನಾವಣಾಧಿಕಾರಿಗೆ ದೂರು ನೀಡಲಾಗಿತ್ತು. ದೂರಿನ ಹಿನ್ನೆಲೆ ಶಿಕ್ಷಕ ದಾನಸುಂದರ್​ಗೆ ನೋಟಿಸ್ ನೀಡಿ, 24 ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದರು.

ನೋಟಿಸ್ ತಲುಪಿದ ಕೂಡಲೇ ಆತಂಕಗೊಂಡ ಶಿಕ್ಷಕ ದಾನಸುಂದರ್, ತಾನು ಯಾವಾಗ ಪ್ರಚಾರಕ್ಕೆ ಹೋಗಿದ್ದೆ ಎಂದು ಆತಂಕಗೊಂಡು, ವಿಚಾರ ತಿಳಿದು ತನ್ನನ್ನೇ ಹೋಲುವ, ಜೆಡಿಎಸ್ ಕಾರ್ಯಕರ್ತ ಮಾಂಬಹಳ್ಳಿಯ ತಿಮ್ಮೇಗೌಡರು ಅಂದು ಪ್ರಚಾರ ಮಾಡಿದ ವಿಚಾರ ತಿಳಿದು ಅವರನ್ನು ಜೊತೆಯಲ್ಲೇ ಕರೆದುಕೊಂಡು ಬಂದು ಚುನಾವಣಾಧಿಕಾರಿಗೆ ಸಾಕ್ಷಿ ಸಮೇತ ಉತ್ತರ ನೀಡಿದ್ದಾರೆ.

ಇಬ್ಬರೂ ಒಂದೇ ರೀತಿ ಕಾಣುವ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದೆ. ಜೊತೆಗೆ ಕೆಲವರು ದೂರನ್ನೂ ನೀಡಿದ್ದರು. ಇದು ಶಿಕ್ಷಕರಿಗೆ ಆತಂಕ ತಂದಿಟ್ಟಿತ್ತು. ತನ್ನನ್ನೇ ಹೋಲುವ ವ್ಯಕ್ತಿ ಪ್ರಚಾರದಲ್ಲಿ ತೊಡಗಿದ್ದ ವಿಚಾರ ತಿಳಿದು ಅವರನ್ನು ಕರೆದುಕೊಂಡು ಬಂದು ಉತ್ತರ ಕೊಟ್ಟು ನಿಟ್ಟುಸಿರು ಬಿಟ್ಟಿದ್ದಾರೆ ಶಿಕ್ಷಕ ದಾನಸುಂದರ್.

ABOUT THE AUTHOR

...view details