ಮಂಡ್ಯ: ಪತ್ನಿಯನ್ನ ಕೊಲೆಗೈದು ಮನೆ ಹಿಂಭಾಗದ ಜಮೀನಿನಲ್ಲಿ ಮಣ್ಣು ಮಾಡಿ ಪತಿ ಪರಾರಿಯಾಗಿರುವ ಘಟನೆ ಮಳವಳ್ಳಿ ತಾಲೂಕಿನ ಕಲ್ಲುವೀರನಹಳ್ಳಿಯಲ್ಲಿ ನಡೆದಿದೆ. ರಾಣಿ (30) ಕೊಲೆಯಾದ ಗೃಹಿಣಿ ಎಂದು ತಿಳಿದುಬಂದಿದೆ.
ಪತಿ ಶಿವರಾಜ ಎಂಬಾತ ಪತ್ನಿಯನ್ನ ನಿನ್ನೆ ರಾತ್ರಿ ಕೊಲೆ ಮಾಡಿ ಮನೆಯ ಹಿಂಭಾಗದಲ್ಲಿದ್ದ ಸತೀಶ್ ಎಂಬುವರ ಜಮೀನಲ್ಲಿ ಹೂತುಹಾಕಿ ಪರಾರಿಯಾಗಿದ್ದಾನೆ. ಜಮೀನು ಮಾಲೀಕ ಮುಂಜಾನೆ ಜಮೀನಿಗೆ ಬಂದಾಗ ರಕ್ತದ ಕಲೆ ಜೊತೆಗೆ ಶವ ಮಣ್ಣು ಮಾಡಿರುವ ಗುರುತು ಕಂಡುಬಂದ ಹಿನ್ನೆಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.