ಮಂಡ್ಯ: ಮೈಸೂರು ಮೂಲದ ಯುವತಿಯನ್ನು ಕರೆತಂದು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಶ್ರೀರಂಗಪಟ್ಟಣದ 'ರೂಮ್ಸ್ ಲಾಡ್ಜ್' ನಲ್ಲಿ ನಡೆದಿದೆ.
ಶ್ರೀರಂಗಪಟ್ಟಣದ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿರುವ ಈ ಲಾಡ್ಜ್ನಲ್ಲಿ ಪತಿ-ಪತ್ನಿಯೆಂದು ಹೇಳಿ ವ್ಯಕ್ತಿಯೊಬ್ಬ ಮಂಗಳವಾರ ಬೆಳಗ್ಗೆ ರೂಮ್ ಬುಕ್ ಮಾಡಿದ್ದಾನೆ. ಬಳಿಕ ಆತ ಕೃತ್ಯ ಎಸಗಿದ್ದು ಮಧ್ಯಾಹ್ನದ ವೇಳೆಗೆ ಸ್ಥಳದಿಂದ ಪರಾರಿಯಾಗಿದ್ದಾನೆ. ರಾತ್ರಿಯಾದರೂ ಯುವತಿ ರೂಮ್ನಿಂದ ಹೊರ ಬರದೇ ಇದ್ದುದನ್ನು ಗಮನಿಸಿ ಸಿಬ್ಬಂದಿ ರೂಮ್ ಬಾಗಿಲು ಒಡೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.