ಮಂಡ್ಯ :ಜಿಲ್ಲೆಯಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ಸರ್ವೇ ನಂ.1ರ ನಿಷೇಧಿತ ಗಣಿ ಪ್ರದೇಶದಲ್ಲಿ ಅಕ್ರಮ ಸ್ಫೋಟಕಗಳು ಪತ್ತೆಯಾಗಿವೆ. ಈ ಸ್ಫೋಟಕಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬೇಬಿಬೆಟ್ಟದಲ್ಲಿ ಪತ್ತೆಯಾದ ಸ್ಫೋಟಕಗಳು ಬೇಬಿ ಬೆಟ್ಟದ ಸಿದ್ಧಲಿಂಗೇಶ್ವರ ಕ್ರಷರ್ ಸಮೀಪ ಮೆಗ್ಗರ್ ಬ್ಲಾಸ್ಟ್‌ಗೆ ಬಳಸಲಾಗುವ 11 ಡಿಟೋನೇಟರ್ಗಳು ಹಾಗೂ 20 ಜಿಲೆಟಿನ್ ಕಡ್ಡಿಗಳು ಪತ್ತೆಯಾಗಿವೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪಾಂಡವಪುರ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಪ್ರಭಾಕರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಪತ್ತೆಯಾದ ಸ್ಫೋಟಕಗಳನ್ನು ವಶಕ್ಕೆ ಪಡೆದಿದ್ದಾರೆ.
ಬೇಬಿಬೆಟ್ಟದಲ್ಲಿ ಪತ್ತೆಯಾದ ಸ್ಫೋಟಕಗಳು ಈ ಮಧ್ಯೆ ಕಳೆದ ಜನವರಿ 21ರಂದು ರಾತ್ರಿ 9.45ರ ಸಮಯದಲ್ಲಿ ಪಾಂಡವಪುರ ತಾಲೂಕಿನ ಕಲ್ಲು ಕ್ವಾರೆಗಳಿಗೆ ಮಾರಾಟ ಮಾಡುವ ಸಲುವಾಗಿ ಪರವಾನಿಗೆ ಇಲ್ಲದ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದ 6000 ಎಲೆಕ್ಸಿಕಲ್ ಡಿಟೋನೇಟರ್, 800 ನಾನ್ ಎಲೆಕ್ಸಿಕಲ್ ಡಿಟೋನೇಟರ್ ಹಾಗೂ 14,400 ಜಿಲೆಟಿನ್ ಕಡ್ಡಿಗಳನ್ನು ವಶಪಡಿಸಿಕೊಂಡಿದ್ದ ಪೊಲೀಸರು, ಅವುಗಳನ್ನು ತಾಲೂಕಿನ ರಂಗನಕೊಪ್ಪಲು ಗ್ರಾಮದ ಕೆ.ನಾಜೀಮುಲ್ಲಾ ಷರೀಫ್ ಅವರ ಮ್ಯಾಗಜಿನ್ ಹೌಸ್‌ನಲ್ಲಿ ಸಂಗ್ರಹಿಸಿಟ್ಟಿದ್ದರು.
ಮಂಡ್ಯ ಎಸ್ಪಿ ಅಶ್ವಿನಿ ಮಾಹಿತಿ ನೀಡುತ್ತಿರುವುದು.. ಇದರಲ್ಲಿ 4000 ಎಲೆಕ್ಟ್ರಿಕ್ ಡಿಟೋನೇಟರ್, 580 ನಾನ್ ಎಲೆಕ್ಟ್ರಿಕ್ ಡಿಟೋನೇಟರ್ ಹಾಗೂ 14,400 ಜಿಲೆಟಿನ್ ಕಡ್ಡಿಗಳನ್ನು ನಾಜೀಮುಲ್ಲಾ ಎಂಬುವರು ಅಕ್ರಮವಾಗಿ ಮಾರಾಟ ಮಾಡಿದ್ದಾರೆ ಎಂದು ಪೊಲೀಸರು ಆರೋಪಿಸಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಬೇಬಿಬೆಟ್ಟದಲ್ಲಿ ಪತ್ತೆಯಾದ ಸ್ಫೋಟಕಗಳು ಈಗ ಬೇಬಿಬೆಟ್ಟದಲ್ಲಿ ದೊರಕಿರುವ ಸ್ಫೋಟಕಗಳು ಮ್ಯಾಗಜೀನ್ ಹೌಸ್‌ನಿಂದ ಅಕ್ರಮವಾಗಿ ಮಾರಾಟ ಮಾಡಲಾಗಿರುವ ಸ್ಫೋಟಕಗಳೋ ಅಥವಾ ಅಕ್ರಮವಾಗಿ ಸಂಗ್ರಹಿಸಿದ್ದ ಸ್ಫೋಟಕಗಳೋ ಎನ್ನುವುದನ್ನು ಪೊಲೀಸರು ಖಚಿತಪಡಿಸಿಲ್ಲ.
ಇನ್ನು, ಒಟ್ಟು ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಎಸ್ಪಿ ಅಶ್ವಿನಿ, ನಮ್ಮ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸಿ ನಿನ್ನೆ ಪತ್ತೆಯಾದ ಸ್ಫೋಟಕಗಳನ್ನ ವಶಪಡಿಸಿಕೊಂಡಿದ್ದಾರೆ. ಸರ್ವೇ ನಂ. 1 ನಾಗರಾಜು ಅವರಿಗೆ ಸೇರಿದ ಸ್ಥಳವಾಗಿದ್ದು ಸಂಬಂಧಿಸಿದವರಿಗೆ ನೋಟಿಸ್ ನೀಡಲಾಗಿದೆ.
2020ರವರೆಗೆ ಸ್ಫೋಟಕ ಸಹಿತ ಗಣಿಗಾರಿಕೆಗೆ ಅವಕಾಶ ಕೊಡಲಾಗಿತ್ತು. ಜಿಲೆಟಿನ್ ಕಡ್ಡಿ ಮೇಲೆ 2008ರ ಮ್ಯಾನಿಪ್ಯಾಕ್ಚರ್ ದಿನಾಂಕ ನಮೂದಾಗಿದೆ. ಈ ಸ್ಫೋಟಕ ವಸ್ತುಗಳು ಬಹಳ ಹಳೆಯದಾಗಿವೆ. ಸರಿಯಾಗಿ ಸುರಕ್ಷತೆ ವಹಿಸದ ಹಿನ್ನೆಲೆ ಪ್ರಕರಣ ದಾಖಲಾಗಿದೆ ಎಂದಿದ್ದಾರೆ.