ಮಂಡ್ಯ: ಚಲುವರಾಯಸ್ವಾಮಿ ಅವರು ಇತ್ತೀಚೆಗೆ ಸ್ವಲ್ಪ ಬಿಜೆಪಿ ಜೊತೆ ಹತ್ತಿರವಾಗಿದ್ದಾರೆ. ಬಿಜೆಪಿಯವರು ಇವಾಗ ಹೊಸ ಸಿಸ್ಟಮ್ ತಂದಿದ್ದಾರೆ. ಗೆಲ್ಲುವತನಕ ಸುಮ್ಮನಿರುತ್ತಾರೆ, ಗೆದ್ದಮೇಲೆ ಕೊಂಡುಕೊಳ್ಳುವ ಪದ್ಧತಿ ತಂದಿದ್ದಾರೆ ಎಂದು ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಟೀಕಿಸಿದ್ದಾರೆ.
ಚಲುವರಾಯಸ್ವಾಮಿ ಇತ್ತೀಚೆಗೆ ಸ್ವಲ್ಪ ಬಿಜೆಪಿ ಜೊತೆ ಹತ್ತಿರವಾಗಿದ್ದಾರೆ: ಎಲ್.ಆರ್. ಶಿವರಾಮೇಗೌಡ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚಲುವರಾಯಸ್ವಾಮಿ ಕೊಟ್ಟಿರುವ ಹೇಳಿಕೆ ಸರಿಯಿದೆ. ಕರಡಹಳ್ಳಿ, ಹುಲಿಕೆರೆ, ಹರದಹಳ್ಳಿ, ಪಾಲಕಾರ, ಕಾಳಿಂಗನಹಳ್ಳಿ ಈ ಆರು ಪಂಚಾಯತ್ಗಳು ಜೆಡಿಎಸ್ನವು. ಬಿಜೆಪಿಯವರು ಗೆದ್ದಮೇಲೆ ಕೊಂಡುಕೊಳ್ಳುವ ಅಸ್ತ್ರ ಪ್ರಯೋಗಿಸಿ ಆರು ಪಂಚಾಯತ್ಗಳನ್ನು ಖರೀದಿಸಿದ್ದಾರೆ ಎಂದು ಆರೋಪಿಸಿದರು.
ಇದಕ್ಕೆ ಕಾರಣ ನಾವಲ್ಲ. ಅಪ್ಪಾಜಿಗೌಡ, ಶ್ರೀಕಂಠೇಗೌಡ, ಸುರೇಶ್ ಗೌಡ ಒಗ್ಗಟ್ಟಾಗಿ ಚುನಾವಣೆ ಮಾಡಿದ್ದರು. ಈ ವೇಳೆ ಸುರೇಶ್ ಗೌಡರದು ಎಚ್‌ಎಎಲ್ ಚುನಾವಣೆ ಬಂತು. ಅವರು ಅಲ್ಲಿ ಬ್ಯುಸಿಯಾಗಿದ್ದರು. ನಾವು ಸುರೇಗೌಡರನ್ನ ಕರೆದ್ವಿ, ಆದರೆ ಅವರು ಚುನಾವಣೆ ಮುಗಿಸಿ ಬರುತ್ತೇನೆ ಅಂದರು. ಅಷ್ಟರಲ್ಲಿ ಕುದುರೆಗಳು ಹೊರಟೋಗಿದ್ದು, ವಾಸ್ತವ ವಿಚಾರವನ್ನ ಚಲುವರಾಯಸ್ವಾಮಿ ಹೇಳಿದ್ದಾರೆ ಎಂದರು.
ಓದಿ:ಮೈಸೂರು: ಟ್ರ್ಯಾಕ್ಟರ್ಗಳ ಮೇಲೆ ದಾಳಿ ಮಾಡಿದ ಒಂಟಿ ಸಲಗಕ್ಕೆ ದಂತ ಭಗ್ನ
ಗೆದ್ದಿರೋದು ನಮ್ಮದೆ ಜಾಸ್ತಿ ಅನ್ನುವುದನ್ನ ಹೇಳುತ್ತೇವೆ. ನಮ್ಮದು 21 ಗ್ರಾ.ಪಂ ಆಗಬೇಕಿತ್ತು, ಅವರದು 15 ಆಗಬೇಕಿತ್ತು. ಅವರದು 21 ಆಗಿದೆ, ನಮ್ಮದು 15 ಆಗಿದೆ ಇದು ಸತ್ಯವಾದ ಮಾತು ಎಂದರು.